ಬದರಿನಾಥ ಭಾರತದ ಪವಿತ್ರ ತಾಣಗಳಲ್ಲಿ ಒಂದು. ಪ್ರತಿಯೊಬ್ಬ ಹಿಂದೂ ಧರ್ಮದ ಅನುಯಾಯಿಯು ಒಮ್ಮೆ ಭೇಟಿ ನೀಡಲು ಬಯಸುವ ಪವಿತ್ರ ಧಾಮವಿದು. ಬದರಿನಾಥ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿದ್ದು, ದೀರ್ಘ ಸಮಯದ ನಂತರ ಆಲಯದ ಬಾಗಿಲನ್ನು ತೆರೆಯಲಾಗಿದ್ದು, ನಿನ್ನೆ ದೇವಾಲಯದಲ್ಲಿ ಸಂಪ್ರದಾಯಬದ್ಧವಾಗಿ, ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾ, ನಿಗಧಿತ ಮುಹೂರ್ತದಲ್ಲಿ ಬದರಿನಾಥನಿಗೆ ಪೂಜೆ, ಅರ್ಚನೆ ಗಳನ್ನು ಸಲ್ಲಿಸಲಾಗಿದೆ. ಈ ಬಾರಿ ಆಲಯ ಬಾಗಿಲು ತೆರೆದಾಗ ಶುಭ ಶಕುನವೊಂದು ನಡೆದಿದ್ದು, ಇದು ದೇಶಕ್ಕೆ ಶುಭ ದಿನಗಳ ಸೂಚನೆಯನ್ನು ನೀಡಿದೆ ಎನ್ನಲಾಗಿದೆ.

ದೇಗುಲದ ಬಾಗಿಲನ್ನು ತೆರೆದ ಶುಭ ವೇಳೆಯಲ್ಲಿ ಬದರಿನಾಥನ ಮೇಲೆ ಹೊದಿಸಲಾಗಿದ್ದ ಕಂಬಳಿಯಲ್ಲಿ ಹಿಮಪಾತ ಹಾಗೂ ಕೊರೆಯುವ ಚಳಿಯ ಹೊರತಾಗಿ ಯಾವುದೇ ರೀತಿಯ ಬದಲಾವಣೆ ಆಗದೇ, ಆಲಯದ ಬಾಗಿಲು ಮುಚ್ಚುವ ಮುನ್ನ ಹೇಗೆ ಹೊದಿಸಿತ್ತೋ ಹಾಗೇ ಇದೆ ಎಂದೂ, ಇದು ಶುಭ ಸೂಚನೆಯೆಂದೂ ಆಲಯದ ಧರ್ಮಾಧಿಕಾರಿ ಭುವನ್​ ಚಂದ್ರ ಉನಿಯಾಲ್​ ಅವರು ತಿಳಿಸಿದ್ದಾರೆ.
ಸಂಪ್ರದಾಯದಂತೆ ಪ್ರತಿ ವರ್ಷ ಕೂಡಾ ಆಲಯ ಬಾಗಿಲನ್ನು ಕೆಲವು ಕಾಲ ಮುಚ್ಚುವ ಮೊದಲೇ ಬದರಿನಾಥನ ಪ್ರತಿಮೆ ಮೇಲೆ ತುಪ್ಪ ಲೇಪಿತ ಉಣ್ಣೆಯ ಕಂಬಳಿಯನ್ನ ಹೊದಿಸಲಾಗುತ್ತದೆ.

ಈ ಹೊದಿಕೆ ಮುಂಬರುವ ವರ್ಷ ಮತ್ತೆ ಆಲಯದ ಬಾಗಿಲುತೆರೆದಾಗ ಈ ತುಪ್ಪ ಹಾಳಾಗದೇ, ಹೊದಿಕೆ ಕೂಡಾ ಹಾಗೇ ಇದ್ದರೆ ಅದನ್ನು ಶುಭ ಸೂಚಕ ಎಂದು ನಂಬಲಾಗುತ್ತದೆ. ಈ ಬಾರಿ ಈ ಬಾರಿ ದೇವರ ಮೂರ್ತಿಯ ಮೇಲೆ ತುಪ್ಪ ಹಾಗೇ ಇತ್ತೆಂದು, ಇದು ದೇಶಕ್ಕೆ ಒಳ್ಳೆದಾಗುವ ಸೂಚನೆ ಎನ್ನಲಾಗುತ್ತಿದೆ.‌ ಇಂತಹ ಘಟನೆ ಪ್ರತಿ ವರ್ಷವೂ ನಡೆಯುವುದಿಲ್ಲ. ಹೊರಗೆ ಹಿಮದ ತಣ್ಣಗಿನ ವಾತಾವರಣದ ಹೊರತಾಗಿ ತುಪ್ಪ ಒಣಗದಿರುವುದು ಒಂದು ಅದ್ಭುತ ಅಥವಾ ಪವಾಡ ಎನ್ನುತ್ತಾರೆ ಅಲ್ಲಿನವರು‌. ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ ಎನ್ನಲಾಗಿದೆ.

ನಿನ್ನೆ ದೇಗುಲದ ಪೋರ್ಟಲ್ ಓಪನ್ ಆದ ನಂತರ ಪ್ರಧಾನಿ ಮೋದಿ ಮೊದಲ ಪ್ರಾರ್ಥನೆ ಸಲ್ಲಿಸಿದ್ರು. ದೇಗುಲದೊಳಗೆ ಪೂಜಾರಿಗಳು ಸೇರಿದಂತೆ 11 ಮಂದಿಗೆ ಮಾತ್ರ ಅವಕಾಶವನ್ನು ನೀಡಲಾಗಿದ್ದು, ಅವರೆಲ್ಲರೂ ಕೂಡಾ ಲಾಕ್ ಡೌನ್ ನಿಯಮ ಪಾಲಿಸುತ್ತಾ, ಸಾಮಾಜಿಕ ಅಂತರ ಕಾಪಾಡಿಕೊಂಡು ಪೂಜೆ ಪುನಸ್ಕಾರಗಳನ್ನು ನಡೆಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here