ಪುಲ್ವಾಮ ಉಗ್ರನ ಧಾಳಯ ನಂತರ ಭಾರತ ಸೇನೆ ಬಾಲಕೋಟ್ ನಲ್ಲಿ ಉಗ್ರರ ನೆಲೆಗಳ ಮೇಲೆ ಏರ್ ಸ್ಟ್ರೈಕ್ ನಡೆದ ಬಳಿಕ, ಅದರಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನುವುದು ಅಧಿಕೃತವಾಗಿ ತಿಳಿದುಬಂದಿರಲಿಲ್ಲ. ಅದಕ್ಕೆ ಸಂಬಂಧಿಸಿದಂತೆ ಅನೇಕರು ಸಾಕ್ಷಿಗಳನ್ನು ಹಾಗೂ ದಾಖಲೆಗಳನ್ನು ಒದಗಿಸಿ ಎಂದು ಕೂಡ ಕೇಳಿದ್ದರು. ಆದರೆ ಈಗ ಅವರೆಲ್ಲರಿಗೂ ಸರಿಯಾದ ಉತ್ತರ ಎಂಬಂತೆ ಪಾಕಿಸ್ತಾನ ಸೇನೆಯ ಅಧಿಕಾರಿಗಳೇ ಸುಮಾರು 200ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಅಮೆರಿಕ ಮೂಲದ ಕಾರ್ಯಕರ್ತ ಪ್ರಸ್ತುತ ಗಿಲ್ಗಿಟ್ ನಲ್ಲಿ ನೆಲೆಸಿರುವ ಸೆಂಜೆ ಸೆರಿಂಗ್ ಹಸ್ನಾನ್ ಈ ಸೆನ್ಸೆಟಿವ್ ವಿಷಯಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋವನ್ನು ಟ್ವೀಟ್ ಮಾಡಿ ಮಾಡಿದ್ದಾರೆ. ವಿಶೇಷವೆಂದರೆ ಈ ವಿಡಿಯೋದಲ್ಲಿ ಪಾಕ್ ಸೇನಾಧಿಕಾರಿಯೊಬ್ಬರು ಬಾಲಕೋಟ್ ನಲ್ಲಿ 200ಕ್ಕೂ ಹೆಚ್ಚು ಮಂದಿ ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದಾರೆ.

ಸೆರಿಂಗ್ ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಜೈಶ್ ಸಂಘಟನೆ ಬಾಲಕೋಟ್ ನಲ್ಲಿ ಮದರಸಾ ನಡೆಸುತ್ತಿತ್ತು ಎನ್ನುವುದನ್ನು ಒಪ್ಪಿಕೊಂಡಿದೆ. ಭಾರತದ ಧಾಳಿಯ ನಂತರ ಆ ಧಾಳಿಯಲ್ಲಿ ಮೃತಪಟ್ಟ ಉಗ್ರರ ದೇಹಗಳನ್ನು ಬಹಳ ರಹಸ್ಯವಾಗಿ ತುರ್ತು ಕಾರ್ಯಾಚರಣೆ ಮಾಡಿದ ಪಾಕ್ ಸೇನೆ ಮರು ದಿನ ಖೈಬರ್ ಪಖ್ತೂಕ್ವಾ ಮತ್ತು ಬುಡಕಟ್ಟು ಜನರು ವಾಸಿಸುವ ಸ್ಥಳಕ್ಕೆ ಸ್ಥಳಾಂತರ ಮಾಡಲಾಯಿತು ಎಂದು ಅಲ್ಲಿನ ಉರ್ದು ಮಾಧ್ಯಮಗಳು ವರದಿ ಮಾಡಿವೆ. ಈ ವಿಷಯಗಳನ್ನು ಗಮನಿಸಿದಾಗ ಭಾರತ ಬಾಲಕೋಟ್ನ ಉಗ್ರರ ಮೇಲೆ ನಡೆಸಿದ ಧಾಳಿಯು ಯಶಸ್ವಿಯಾಗಿದೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಈಗ ದೊರೆತಿವೆ.

ಇನ್ನೂ ಒಂದು ಮಾಹಿತಿಯ ಪ್ರಕಾರ ಬಾಲಕೋಟ್ ಉಗ್ರರ ನೆಲೆಯ ಮೇಲೆ ದಾಳಿ ನಡೆಸುವ ಮುನ್ನ ಆ ಉಗ್ರರ ನೆಲೆಯಲ್ಲಿ ಸುಮಾರು 300 ಮೊಬೈಲ್ ಗಳು ಕಾರ್ಯನಿರತವಾಗಿತ್ತು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ(ಎನ್‍ಟಿಆರ್‍ಒ) ದೃಢಪಡಿಸಿತ್ತು.
ಇನ್ನು ಪಾಕ್ ಧಾಳಿ ನಡೆದಿಲ್ಲ, ತನಗೇನು ನಷ್ಟವಾಗಿಲ್ಲ, ಯಾರೊಬ್ಬರು ಸತ್ತೇ ಇಲ್ಲ ಎಂದು ಹೇಳುತ್ತಿದ್ದರೂ, ಇದುವರೆವಿಗೂ ಯಾವುದೇ ವಿದೇಶಿ ಪತ್ರಕರ್ತರು ಅಥವಾ ವರದಿಗಾರರಿಗೆ ಪಾಕ್ ಇದುವರೆವಿಗೂ ಆ ಸ್ಥಳಕ್ಕೆ ಪ್ರವೇಶ ನಿಷೇಧಿಸಿರುವ ಕಾರಣ ಏನು ಎಂಬುದಕ್ಕೆ ಕೂಡಾ ಅನಮಾನ ವ್ಯಕ್ತವಾಗಿದೆ. ಒಟ್ಟಾರೆ ಧಾಳಿ ನಡೆದಿರುವುದು ಖಚಿತ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here