ಪ್ರತಿಭೆ ಹಾಗೂ ಯಶಸ್ಸು ಎನ್ನುವುದು ಪ್ರತಿಭಾವಂತ ಹಾಗೂ ಶ್ರಮ ಜೀವಿಯ ಸ್ವತ್ತೇ ಹೊರತು ಅದು ಎಂದಿಗೂ ಸೋಮಾರಿಯ ಸ್ವತ್ತಾಗುವುದಿಲ್ಲ ಎಂಬುದನ್ನು ಆಗಾಗ ಕೆಲವರು ಸಾಬೀತು ಮಾಡುವ ಮೂಲಕ ಇತರರಿಗೆ ಸ್ಪೂರ್ತಿಯಾಗುತ್ತಾರೆ. ಲಭ್ಯವಿರುವ ಕೆಲವೇ ಸಂಪನ್ಮೂಲಗಳನ್ನು ಬಳಸಿಕೊಂಡು ಕೆಲವರು ದೊಡ್ಡ ಮಟ್ಟದ ಸಾಧನೆಯನ್ನು ಮಾಡವರು. ಕೆಲವೇ ದಿನಗಳ ಹಿಂದೆ ಅಂದರೆ ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಾಗ ಕೂಲಿ ಕೆಲಸ ಮಾಡುವ ಮಹೇಶ್ ಉತ್ತಮ ಅಂಕ ಪಡೆದು ರಾಜ್ಯದಲ್ಲಿ ಎಲ್ಲೆಡೆ ಸುದ್ದಿಯಾಗಿತ್ತು. ಆತನ ಸಾಧನೆಯನ್ನು ಎಲ್ಲರೂ ಮೆಚ್ಚಿದ್ದರು ಕೂಡಾ.

ಇದೇ ರೀತಿಯಲ್ಲೇ ಬಳ್ಳಾರಿ ಜಿಲ್ಲೆಯ ಸಂಡೂರು ಪುರಸಭೆ ಯಲ್ಲಿ ಪೌರ ಕಾರ್ಮಿಕನಾಗಿರುವ ಗಿರಿಯಪ್ಪ ಎನ್ನುವವರ ಮಗ ಯಾಹಾನ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 98.88% ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಈ ಹಿನ್ನೆಲೆಯ್ಲಲಿ ಸಂಡೂರು ಪುರಸಭೆ ಅನುದಾನದ ಅಡಿಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಯವರಾದ ಎಸ್.ಎಸ್.ನಕುಲ್ ಅವರು ಉತ್ತಮವಾದ ಫಲಿತಾಂಶವನ್ನು ಪಡೆದಿರುವ ಯಾಹಾನ್ ಗೆ ಲ್ಯಾಪ್ ಟಾಪ್ ನೀಡಿ ಶುಭ ಹಾರೈಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here