ಬಂಡೀಪುರದಲ್ಲಿ ಅಗ್ನಿಯು ತನ್ನ ಕೆನ್ನಾಲಿಗೆಯನ್ನು ಚಾಚಿ ಸುತ್ತ ಮುತ್ತಲ ಪ್ರದೇಶದ ಅರಣ್ಯಗಳಿಗೂ ಈ ಬೆಂಕಿ ಹಬ್ಬಿ ಕಳೆದ ನಾಲ್ಕು ದಿನಗಳಿಂದ ಬೆಂಕಿ ಆರಿಸುವ ಪ್ರಯತ್ನದಲ್ಲಿ ತೊಡಗಿದ್ದರೂ ಅದು ಅಷ್ಟು ಸುಲಭದ ಕಾರ್ಯವಾಗಿಲ್ಲ. ಆದರೂ ಕೂಡಾ ಅರಣ್ಯ ಸಿಬ್ಬಂದಿ, ನೆರೆಯ ಗ್ರಾಮಸ್ಥರು ಹಾಗೂ ಸ್ವಯಂ ಸೇವಕರು ಎಲ್ಲಾ ತಮ್ಮ ಶ್ರಮವಹಿಸಿ ಬೆಂಕಿಯನ್ನು ಆರಿಸಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಯ ಭೀಕರತೆಯಲ್ಲಿ ಸುಟ್ಟು, ಕೆಲವು ವನ್ಯ ಮೃಗಗಳು ಕೂಡಾ ಬೆಂಕಿಗೆ ಆಹುತಿಯಾಗಿರುವ ಕರುಣಾಜನಕ ಚಿತ್ರಗಳು ಈಗಾಗಲೇ ಮಾದ್ಯಮಗಳಲ್ಲಿ ಸಾವಿರಾರು ಜನ ನೋಡಿ ಮರುಕ ಪಟ್ಟಿದ್ದಾರೆ.

ವಿಷಯ ಹೀಗೆ ತೀವ್ರವಾಗಿರುವಾಗಲೇ ಸ್ಯಾಂಡಲ್ ವುಡ್ ನ ಕರಿಚಿರತೆ ಎಂದೇ ಖ್ಯಾತರಾಗಿರುವ ದುನಿಯ ವಿಜಯ್ ಹಾಗೂ ಅವರ ಕುಟುಂಬ ಬಂಡೀಪುರ ಅರಣ್ಯ ಪ್ರದೇಶಕ್ಕೆ ತಲುಪಿದೆ. ಅಲ್ಲಿ ವಿಜಯ್ ಅವರು ಅರಣ್ಯ ಸಿಬ್ಬಂದಿಯವರ ಜೊತೆಗೂಡಿ ತಾವು ಕೂಡಾ ಬೆಂಕಿ ಆರಿಸುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅರಣ್ಯವಿಲ್ಲದೆ ನಾಡಿನ ಉಳಿವೆಲ್ಲಿ ಎಂಬ ಮಾತಿಗೆ ಮಹತ್ವ ಕೊಟ್ಟಿರುವ ಅವರು ಕೇವಲ ಅಗತ್ಯ ವಸ್ತುಗಳ ಸರಬರಾಜು ಮಾಡಿ ಸುಮ್ಮನಾಗದೆ ತಾವೇ ಸ್ವತಃ ಅಲ್ಲಿಗೆ ಹೋಗಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ದುನಿಯಾ ವಿಜಯ್ ಇಂದು ಬಂಡಿಪುರ ತೆರಳಿದ್ದು ಅಲ್ಲಿಗೆ ಬಂದು ಕೆಲಸ ಮಾಡುತ್ತಿರುವವರ ಮದ್ಯೆ ಅವರೂ ಕೆಲಸ ಮಾಡಿತ್ತಿದದ್ದು , ಅಲ್ಲಿಗೆ ಹೋಗುವಾಗ ಈಗಾಗಲೇ ಅಲ್ಲೇ ಬೆಂಕಿ ನಂದಿಸುವ ಕಾರ್ಯದಲ್ಲಿ ಬಹಳ ಶ್ರಮ ವಹಿಸುತ್ತಿರುವ ಕೆಲಸಗಾರರಿಗಾಗಿ ಅವರಿಗೆ ಅಕ್ಕಿ, ಮಸಾಲ ಪುಡಿಗಳು, ನೀರು, ಜ್ಯೂಸ್ ಮೊದಲಾದ ಅಗತ್ಯ ಸಾಮಗ್ರಿಗಳನ್ನು ತಮ್ಮ ಜೊತೆಯಲ್ಲಿ ಕೊಂಡೊಯ್ದಿದ್ದು, ಅದನ್ನೆಲ್ಲಾ ಅಲ್ಲಿನ ಕೆಲಸಗಾರರಿಗೆ ಹಂಚಿದ್ದಾರೆ. ತನ್ನಿಂದ ಸಾಧ್ಯವಾದ ಪ್ರಯತ್ನವನ್ನು ಮಾಡುವ ಮೂಲಕ ಕಾಡಿನ ಬಗ್ಗೆ ತಮ್ಮ ಪ್ರೀತಿ ಮೆರೆದಿದ್ದಾರೆ.ಈ ವೀಡಿಯೋ ಇಲ್ಲಿದೆ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here