ಆಕೆ 8 ತಿಂಗಳ ತುಂಬು ಗರ್ಭಿಣಿ.ಮಗುವಿನ ಜನನದ ಕನಸು ಕಂಡವಳಿಗೆ ಗಂಡನ ಸಾವಿನ ಸುದ್ದಿ ಭರಸಿಡಿಲು ಬಡಿದಂತಾಗಿತ್ತು..ಅಪಘಾತದಲ್ಲಿ ಗಾಯಗೊಂಡ ಪತಿ, ಬದುಕಿ ಬರುತ್ತಾರೆ ಎಂಬ ನಿರೀಕ್ಷೆ ಕಳೆದಕೊಂಡ ಪತ್ನಿ,ಗಂಡನ ಸಾವಿನ ಸುದ್ದಿಗೆ ಎದೆ ಗುಂದಲಿಲ್ಲ.. ಧೈರ್ಯ ಮಾಡಿದ ಪತ್ನಿ ಮಾಡಿದ ನಿರ್ಧಾರ ನಾಲ್ಕೈದು ಜನರಿಗೆ ಮರು ಜೀವ ನೀಡಿದೆ. ಈ ಫೋಟೊದಲ್ಲಿ ಕಾಣುತ್ತಿರುವ ದಂಪತಿ ಹೆಸರು ಶರತ್ ಮತ್ತು ಚಂದನ. ಕಳೆದ ಒಂದೂವರೆ ವರ್ಷದ ಹಿಂದೆ ಮದುವೆ ಆಗಿ ಸುಖ ಜೀವನ ಸಾಗಿಸುತ್ತಿದ್ರು. ಸದ್ಯ ಚಂದನ ಎಂಟು ತಿಂಗಳ ತುಂಬು ಗರ್ಭಿಣಿ. ಇನ್ನೇನು ಪುಟ್ಟ ಕಂದಮ್ಮನ‌ ಬರುವಿಕೆ ಕಾಯ್ತಿದ್ದ ಚಂದನಾಗೆ ಮೊನ್ನೆ ಬರಸಿಡಿಲು ಬಡಿದಿತ್ತು.

ಅದೇ ಪತಿ ಶರತ್ ಗೆ ಅಪಘಾತವಾಗಿರುವ ವಿಷಯ. ಮಗು ಜನನದ ನಿರೀಕ್ಷೆಯಲ್ಲಿದ್ದ 8 ತಿಂಗಳ ಗರ್ಭಿಣಿಗೆ ಪತಿಯ ದುರ್ಮರಣ ಸುದ್ದಿ ಬರ ಸಿಡಿಲಂತೆ ಬಂದೊರಗಿತ್ತು. ಪತಿಯ ಸಾವಿನಲ್ಲಿಯೂ ಗೃಹಿಣಿ ಆತನ ಅಂಗಾಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗರ್ಭೀಣಿಯ ಪತಿಗೆ ಸ್ಪರ್ಶ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಪತಿ ಬದುಕಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಗರ್ಭೀಣಿ ಮಹಿಳೆ ದಿನ ದೂಡುತ್ತಿದ್ದರು. ಆದರೆ ಶನಿವಾರ ನಿರೀಕ್ಷೆ ಹುಸಿಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪತಿ ಮೃತಪಟ್ಟಿದ್ದರು. ಪತಿಯ ಸಾವಿನ ಸುದ್ದಿ ಕೇಳಿದ್ದ ಪತ್ನಿಗೆ ಶಾಕ್ ಆಗಿತ್ತು. ಪತಿಯ ನೋವಿನಿಂದ ಎದೆಗುಂದದೆ ಗೃಹಿಣಿ ಪತಿಯ ಕಿಡ್ನಿ, ಹೃದಯ ಹಾಗೂ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಅವರ ನಿರ್ಧಾರದಿಂದಾಗಿ ಇಂದು ನಾಲ್ಕೈದು ಜನರಿಗೆ ಮರು ಜೀವ ಸಿಕ್ಕಂತಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here