ರಸ್ತೆಗಳಲ್ಲಿ ವೀಲಿಂಗ್ ಮಾಡೋದು ಅಪಾಯ ಅಂತ ತಿಳಿದರೂ ಕೆಲವರಿಗೆ ಅದೊಂದು ಶೋಕಿ ಅನ್ನುವುದಕ್ಕಿಂತ ಹುಚ್ಚಾಟವಾಗಿ ಪರಿಣಮಿಸಿದೆ. ಅದರಲ್ಲೂ ಕೆಲವರು ಮಿತಿ ಮೀರಿ ನಡೆದುಕೊಳ್ಳುವುದು ಹೌದು‌. ಇದೊಂದು ಕ್ರೇಜ್ ,ಹೀರೋಯಿಸಂ ಎಂದು ರಸ್ತೆಗಳಲ್ಲಿ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹುದೇ ಒಂದು ಸನ್ನಿವೇಶದಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಮಾಡಿದ್ದ ಅಪಾಯಕಾರಿ ವೀಲಿಂಗ್ ವೀಡಿಯೋ ವೈರಲ್ ಆಗಿತ್ತು. ವೈರಲ್ ಆದ ವಿಡಿಯೋದಲ್ಲಿ ಆಘಾತಕಾರಿ ಸ್ಟಂಟ್ ಮಾಡಿರುವ ಯುವಕನನ್ನು ಬಂಧಿಸುವಲ್ಲಿ ಹೆಬ್ಬಾಳ ಪೋಲಿಸರು ಯಶಸ್ವಿಯಾಗಿದ್ದಾರೆ‌.

 

ಯುವಕನ ಹೆಸರು ನೂರ್ ಅಹಮದ್ ಹಾಗೂ ವಯಸ್ಸು 21 ವರ್ಷ. ಬಿಕಾಂ ಪದವೀಧರ ಈತ‌.
ಕೆಲವು ದಿನಗಳ ಹಿಂದೆ ಅಂದರೆ ಜೂನ್ 6 ರಂದು ನೂರ್ ಅಹಮದ್ ತನ್ನ ಪ್ರೇಯಸಿಯೊಂದಿಗೆ ನಂದಿ ಬೆಟ್ಟಕ್ಕೆ ಹೋಗಲು ಗೆಳೆಯ ಇಮ್ರಾನ್ ನಿಂದ ಸ್ಕೂಟಿಯನ್ನು ಪಡೆದುಕೊಂಡಿದ್ದಾರೆ. ಆ ಸ್ಕೂಟಿಯಲ್ಲಿ ಹೋಗುವಾಗ ದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡಿದ್ದು, ಸಾರ್ವಜನಿಕರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ವಿಡಿಯೋ ಬಹು ಬೇಗ ವೈರಲ್ ಆಗಿ ಅದು ಪೋಲಿಸರು ಗಮನಕ್ಕೂ ಬಂದಿದೆ. ಇದಾದ ನಂತರ ಹೆಬ್ಬಾಳದ ಬಳಿ ದಾರಿಯಲ್ಲಿ ಪೋಲಿಸರನ್ನು ಕಂಡ ಇಮ್ರಾನ್ ಸ್ಕೂಟಿಯಲ್ಲಿ ಪರಾರಿಯಾಗಿದ್ದಾನೆ.

 

ಇದರಿಂದ ಅನುಮಾನ ಬಂದ ಪೋಲಿಸರು ವಾಹನದ ನಂಬರ್ ದಾಖಲಿಸಿ ಕೊಂಡಿದ್ದಾರೆ. ತನಿಖೆ ಮಾಡಿದಾಗ ಅದು ಇಮ್ರಾನ್ ಅವರ ತಾಯಿಯ ಹೆಸರಿನಲ್ಲಿದ್ದು, ವೈರಲ್ ಆದ ವಿಡಿಯೋದಲ್ಲಿನ ಸ್ಕೂಟಿಗೆ ಹೋಲಿಕೆ ಇದ್ದುದ್ದರಿಂದ ಪೋಲಿಸರು ಇಮ್ರಾನ್ ನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಆಗ ನಿಜವಾದ ವಿಷಯ ಹೊರಬಂದಿದೆ. ಸತ್ಯವನ್ನು ತಿಳಿದ ಪೋಲಿಸರು ನೂರ್ ಅಹಮದ್ ನನ್ನು ಬಂಧಿಸಿರುವುದು ಮಾತ್ರವಲ್ಲದೆ ಸ್ಕೂಟಿಯನ್ನು ವಶಕ್ಕೆ ಪಡೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here