ಕೊರೊನಾ ವೈರಸ್ ದೇಶದೆಲ್ಲೆಡೆ ಭೀತಿಯನ್ನು ಹುಟ್ಟಿಸಿದ್ದು, ಈಗಾಗಲೇ ಅದರ ವಿರುದ್ಧ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವು ಮಾರ್ಗ ಸೂಚಿಗಳನ್ನು ಜನರಿಗೆ ನೀಡಲಾಗುತ್ತಿದೆ. ಜನರಿಗೆ ಎಚ್ಚರಿಕೆಯ ಕ್ರಮಗಳನ್ನು ತಿಳಿಸಲಾಗಿದೆ. ಅಲ್ಲದೆ ವಿದೇಶಗಳಿಂದ ಬರುವವರನ್ನು ವಿಮಾನ ನಿಲ್ದಾಣಗಳಲ್ಲೇ ತಪಾಸಣೆ ಮಾಡಿ ಅವರನ್ನು ಹೊರಗೆ ಕಳುಹಿಸಲಾಗುತ್ತಿರುವುದು ಮಾತ್ರವೇ ಅಲ್ಲದೆ ಅನುಮಾನ ಬಂದವರನ್ನು ಕೂಡಲೇ ಆಸ್ಪತ್ರೆಗಳಿಗೆ ಕಳುಹಿಸಿ ಅವರ ವೈದ್ಯಕೀಯ ಪರೀಕ್ಷೆಗಳನ್ನು ಕೂಡಾ ಮಾಡಲಾಗುತ್ತಿದೆ. ಇದರ ನಡುವೆ ದೇಶದಲ್ಲಿ ಒಟ್ಟು 43 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದವು.

ಆದರೆ ಇದೀಗ ಮತ್ತೊಂದು ಕೊರೊನಾ ವೈರಸ್ ಪ್ರಕರಣ ದಾಖಲಾಗುವ ಮೂಲಕ ಒಟ್ಟು 44 ಕೊರನಾ ವೈರಸ್ ಪ್ರಕರಣಗಳು ದೇಶದಲ್ಲಿ ದಾಖಲಾಗಿದೆ. ಈಗ ಪತ್ತೆಯಾಗಿರುವುದು ರಾಜ್ಯದ ರಾಜಧಾನಿ ಬೆಂಗಳೂರಿನ ನಿವಾಸಿ ಒಬ್ಬರಲ್ಲಿ. ಬೆಂಗಳೂರಿನ ನಿವಾಸಿ ಯೊಬ್ಬರಲ್ಲಿ ವೈದ್ಯಕೀಯ ಪರೀಕ್ಷೆಗಳ ನಂತರ ಕೊರೊನಾ ವೈರಸ್ ನ ಸೂಚನೆಗಳು ಪಾಸಿಟಿವ್ ಫಲಿತಾಂಶವನ್ನು ನೀಡಿದೆ. ಈ ಮೂಲಕ ಒಟ್ಟು 44 ಕೊರೊನಾ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ. ಈಗ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲು ಸಜ್ಜಾಗಿದೆ ಸರ್ಕಾರಗಳು.

ಜಮ್ಮು, ಕೇರಳ, ದೆಹಲಿ ಹೀಗೆ ದೇಶದ ವಿವಿಧೆಡೆ ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ. ಈಗ ಅದರ ಜೊತೆಗೆ ಬೆಂಗಳೂರಿನ ನಿವಾಸಿ ಒಬ್ಬರಿಗೆ ಪಾಸಿಟಿವ್ ರಿಸಲ್ಟ್ ಬಂದಿರುವ ಹಿನ್ನೆಲೆಯಲ್ಲಿ ಕೊರೊನಾ ಬೆಂಗಳೂರು ಪ್ರವೇಶ ಮಾಡಿದ್ದು, ಇನ್ನೂ ಹೆಚ್ಚಿನ ನಿಗಾ ವಹಿಸುವ, ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಎರಡೂ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here