ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿರುವ ಕಾರಣ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಸಿಟಿ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಜುಲೈ 14ರಿಂದ ಸಂಪೂರ್ಣ ಲಾಕ್​ಡೌನ್​ ಜಾರಿ ಮಾಡಿ ಆದೇಶ ಹೊರಹಾಕಿದೆ.ಸಿಲಿಕಾನ್ ಸಿಟಿಯಲ್ಲಿ ಪ್ರತಿದಿನ ಸಾವಿರಾರು ಕೋವಿಡ್​ ಪ್ರಕರಣ ದಾಖಲಾಗುತ್ತಿರುವ ಕಾರಣ ಮುಖ್ಯಮಂತ್ರಿ ಬಿಎಸ್​ವೈ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆ ಬಂದ್​ ಆಗಲಿವೆ.ಆಸ್ಪತ್ರೆ, ದಿನಸಿ, ಹಾಲು, ಹಣ್ಣು, ತರಕಾರಿ,ದಿನಬಳಕೆಯ ಅಗತ್ಯ ವಸ್ತುಗಳು ಸೇರಿದಂತೆ ಮಹತ್ವದ ಸೇವೆ ಲಭ್ಯವಾಗಲಿವೆ. ಜತೆಗೆ ಈಗಾಗಲೇ ಘೋಷಣೆಯಾಗಿರುವ ಸ್ನಾತಕೋತ್ತರ ಪರೀಕ್ಷೆ ನಡೆಯಲಿವೆ.

ಮಂಗಳವಾರ ರಾತ್ರಿ 8.00 ಗಂಟೆಯಿಂದ 1 ವಾರಗಳ ಕಾಲ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ
ಇನ್ನು ಈ ಬಾರಿ ಬೆಂಗಳೂರು ಲಾಕ್ ಡೌನ್ ಫುಲ್  ಡಿಫರೆಂಟ್ ಆಗಿರುತ್ತೆ. ಮಂಗಳವಾರ ರಾತ್ರಿ ಜಾರಿಯಾಗುವ ಲಾಕ್ ಡೌನ್ ಅನ್ನು 7 ದಿನಗಳ ಕಾಲ ಕಟ್ಟು ನಿಟ್ಟಾಗಿ ಜಾರಿಗೆ ತರಲು ಪೊಲೀಸರು ತೀರ್ಮಾನಿಸಿದ್ದಾರೆ. ಕಳೆದ ಬಾರಿ ಪಾಸ್ ಗಳ ದುರ್ಬಳಕೆಯಿಂದ ಎಚ್ಚೆತ್ತ ಪೊಲೀಸರು ಈ ಬಾರಿ ರಸ್ತೆ ಗಿಳಿಯೋ ವಾಹನ ಸವಾರರಿಗೆ ಪಾಠ ಕಲಿಸಲು ನಿರ್ಧರಿಸಿದ್ದಾರೆ.

ರಸ್ತೆಯಲ್ಲಿ ವಾಹನ ಕಂಡರೆ ಸೀಜ್ ಮಾಡೋದು ಮಾತ್ರವಲ್ಲ , ಗಾಡಿ ವಾಪಸ್ ಕೂಡಾ ಕೊಡೋದಿಲ್ಲ. ವಾಹನ್ ಸೀಜ್ ಮಾಡೋದು ಅಷ್ಟೇ ಅಲ್ಲ, ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕೇಸು ಕೂಡಾ ಹಾಕ್ತಾರೆ. ಇದರಿಂದ ನಿಮ್ಮ ಗಾಡಿನೂ ಅಂದರ್ , ನೀವು ಅಂದರ್ ಆಗ್ತೀರ.ಇನ್ನೂ ಕಳೆದ ಬಾರಿ ಪಡೆದಿರೋ ಪಾಸ್ ಈ ಬಾರಿ  ಬಳಕೆಗೆ ಪೊಲೀಸರು ನಿಷೇಧ ಹೇರಿದ್ಧಾರೆ.ಹಳೆಯ ಪಾಸುಗಳಿಗೆ ಅವಕಾಶವಿಲ್ಲ ಎಂದ ಕಮಿಷನರ್ ಭಾಸ್ಕರ್ ರಾವ್ ಸ್ಪಷ್ಟವಾಗಿ ತಿಳಿಸಿದ್ದಾರೆ.ತುರ್ತು ಸೇವೆ, ವಸ್ತುಗಳ ಸಾಗಾಣೆ ಮಾಡೋವರಿಗೆ ಅಗತ್ಯ ದಾಖಲೆ ತೋರಿಸಿದ್ರೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here