ರಾಜ್ಯದಲ್ಲಿ ಕೊರೊನಾ ಅಬ್ಬರದ ನಡುವೆಯೇ ನಿನ್ನೆ ಬೆಂಗಳೂರು ನಗರ ಪೋಲಿಸ್ ಆಯಕ್ತರಾದ ಭಾಸ್ಕರ್ ರಾವ್ ಅವರ ವರ್ಗಾವಣೆಯ ಸುದ್ದಿ ಭಾರೀ ಸದ್ದು ಮಾಡಿತ್ತು. ಅಲ್ಲದೇ ಅದು ಚರ್ಚೆಗೆ ಕೂಡಾ ಕಾರಣವಾಗಿತ್ತು. ಅಲ್ಲದೇ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬೀಳುವುದೊಂದು ಮಾತ್ರ ಬಾಕಿಯಿತ್ತು. ಈಗ ಅದು ಕೂಡಾ ಆಗಿದ್ದು, ಪ್ರಸ್ತುತ ಭಾಸ್ಕರ್ ರಾವ್ ಅವರ ಜಾಗಕ್ಕೆ ಬರುತ್ತಿರುವ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್​ಗೆ ಬೆಂಗಳೂರು ಕಮಿಷನರ್ ಹುದ್ದೆಯನ್ನ ನೀಡಿ ರಾಜ್ಯ ಸರ್ಕಾರವು ತನ್ನ ಆದೇಶವನ್ನು ಹೊರಡಿಸಿದೆ.

ಕಮಲ್ ಪಂತ್​ ಅವರಿಗೆ ಹೋದ ಸಲ ಬೆಂಗಳೂರು ಪೋಲಿಸ್ ಕಮೀಷನರ್ ಆಗುವ ಅವಕಾಶ ಕೊನೆಯ ಕ್ಷಣದಲ್ಲಿ ಕೈತಪ್ಪಿ ಹೋಗಿತ್ತು. ಪ್ರಸ್ತುತ ಗುಪ್ತಚರ ಇಲಾಖೆಯ ಎಡಿಜಿಪಿ ಆಗಿರುವ ಕಮಲ್ ಪಂತ್ ಅವರಿಗೆ ಈಗ ಕಮೀಷನರ್ ಸ್ಥಾನವನ್ನು ಅಲಂಕರಿಸುವ ಅವಕಾಶವನ್ನು ನೀಡಲಾಗುತ್ತಿದೆ. ಈ ಕುರಿತಾಗಿ ಸರ್ಕಾರ ಕೂಡಾ ಅವರ ನೇಮಕಾತಿಯ ಆದೇಶವನ್ನು ಹೊರಡಿಸಿದೆ. ಭಾಸ್ಕರ್ ರಾವ್ ಅವರು ಮತ್ತು ಕಮಲ್ ಪಂತ್ ಇಬ್ಬರೂ ಸಹಾ 1990 ರ ಐಪಿಎಸ್ ಬ್ಯಾಚ್ ನವರು ಎಂಬುದು ವಿಶೇಷ. ಕಮಿಷನರ್ ಸ್ಥಾನದಿಂದ ಭಾಸ್ಕರ್ ರಾವ್ ಅವರನ್ನು ವರ್ಗಾವಣೆ ಮಾಡಿ, ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಆಗಿ ಅವರನ್ನು ನೇಮಕ ಮಾಡಲಾಗಿದೆ.

ಭಾಸ್ಕರ್ ರಾವ್ ಅವರು ಬೆಂಗಳೂರು ನಗರ ಕಮೀಷನರ್ ಆಗಿ ಇದೇ ಆಗಸ್ಟ್ 2 ಕ್ಕೆ ಒಂದು ವರ್ಷ ಪೂರ್ತಿಯಾಗಲಿದೆ. ಇನ್ನು ಕಮೀಷನರ್ ಸ್ಥಾನಕ್ಕಾಗಿ ಸುನಿಲ್ ಅಗರ್ ವಾಲ್, ಅಮೃತ್ ಪೌಲ್ ಈ ಇಬ್ಬರಿಗೆ ಹೋಲಿಕೆ ಮಾಡಿದಾಗ ಕಮಲ್ ಪಂತ್ ಅವರು ಮುನ್ನೆಲೆಯಲ್ಲಿದ್ದಾರೆ. ಹಾಗೂ ಸೇವಾ ಹಿರಿತನದಲ್ಲಿ ಕೂಡಾ ಅವರು ಮುಂದೆ ಇದ್ದಾರೆ ಎನ್ನಲಾಗಿದೆ.‌ ಇದೇ ವರ್ಷದ ಜನವರಿಯಲ್ಲಿ ಅಮೃತ್ ಪೌಲ್​ ಎಡಿಜಿಪಿಯಾಗಿ ಬಡ್ತಿ ನೀಡಲಾಗಿತ್ತು. ಕಮಿಷನರ್ ಹುದ್ದೆಗೆ ಎಡಿಜಿಪಿ ಆಗಿರಬೇಕಿರುವುದು ಕೂಡಾ ಒಂದು ಪ್ರಮುಖ ಅರ್ಹತೆ ಎನ್ನಲಾಗಿದೆ.‌

 

 

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here