ನವರಸನಾಯಕ ನಟ ಜಗ್ಗೇಶ್ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ಅದರೊಂದಿಗೆ ತಮ್ಮ ಅನುಭವವನ್ನು ತಮ್ಮ ಇನ್ಸ್ತಗ್ರಮ್ ಖಾತೆಯಲ್ಲಿ ಹಾಕಿಕೊಂಡು ಎಲ್ಲರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಜಗ್ಗೇಶ್ ಅವರು ಬಹುತೇಕ ಸಾಮಾಜಿಕ ಜಾಲತಾಣಗಳ‌ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಅವರು ನಿನ್ನೆ ರಾತ್ರಿ ಆಟೋ ಡ್ರೈವ್ ಮಾಡಿ, ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. 70-80 ರ ದಶಕದಲ್ಲಿ ಅವರು ತಂದೆ ದುಡಿದು ತಿನ್ನು, ಆಗ ಬದುಕಿನ ಅರ್ಥ ತಿಳಿಯುವುದು ಎಂದಾಗ ಮಯೂರ ಸಿನಿಮಾದಲ್ಲಿ ಅಣ್ಷಾವ್ರು ಶಪಥ ಮಾಡಿದಂತೆ ಶಪಥ ಮಾಡಿ ಮನೆಯಿಂದ ಹೊರಬಂದರಂತೆ ಜಗ್ಗೇಶ್ ಅವರು.

ಆಗ ಅವರು ಅವರಿಗೆ ಇದ್ದ ಆಸೆ ಜೀವನದಲ್ಲಿ ಒಂದು ಸ್ವಂತ ಆಟೋ ಒಡೆದು, ನೂರು ರೂ ಸಂಪಾದನೆ ಮಾಡಿ, ಅಪಮಾನ ಮಾಡಿದ ಅಪ್ಪನ ಮುಂದೆ ಮೀಸೆ ತಿರುವಬೇಕೆನ್ನುವಂತೆ ನಿರ್ಧರಿಸಿದ್ದರಂತೆ. ಆಗ ಅವರಿಗೆ ತಂದೆಯು ಶತೃವಿನಂತೆ ಕಂಡರಂತೆ. ಕೆಲವು ದಿನ ಮೈಸೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿದ್ದರಂತೆ. ಇಷ್ಟು ವರ್ಷಗಳ ನಂತರ ಆಕಸ್ಮಿಕವಾಗಿ ಆಟೋ ಸಹೋದರನೊಬ್ಬನು ಸಿಕ್ಕಾಗ, ಅವರ ಅನುಮತಿ ಪಡೆದು ಮತ್ತೊಮ್ಮೆ ಆಟೋ ಓಡಿಸಿದ್ದಾರೆ. ಆ ಆಟೋ ಪಯಣದ ಜೊತೆಗೆ ತಾವು ನಡೆದ ಬಂದ ಹಳೆಯ ದಿನಗಳ ಪಯಣ ಕೂಡಾ ಅವರಿಗೆ ನೆನಪಾಗಿದೆ.

ಅವರು ಅದನ್ನು ಹೇಳುತ್ತಾ ಅಪ್ಪನ ಬೆಲೆ, ಅವರು ಅಂದು ಹೇಳಿದ ಮಾತಿನ ಅರ್ಥ ಈಗ ಗೊತ್ತಾಗಿದೆ. ಅಪ್ಪ ಎಷ್ಟು ಶ್ರೇಷ್ಠ ಎಂಬುದು ನನಗೆ ಈಗ ಗೊತ್ತಾಗಿದೆ. ಅಂದು ಮಗನಾಗಿ ಅವರ ತಂದೆ ಬೈದಿದ್ದ ಮಾತುಗಳನ್ನು, ಇಂದು ತಾತನಾಗಿ ಬದುಕಿನ ಪುಟಗಳ ಮೆಲುಕು ಹಾಕಿದಾಗ ಅಪ್ಪ ಎಂತಹ ಶ್ರೇಷ್ಠ ವ್ಯಕ್ತಿ ಎಂಬುದು ಅರ್ಥವಾಗುತ್ತಿದೆಯೆಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೆ ತಪ್ಪಾಯಿತು ಎಂದರು, ಕೇಳದಷ್ಟು ದೂರಕ್ಕೆ ತಂದೆ ಹೋಗಿದ್ದಾರೆ, ಕ್ಷಮೆ ಕೇಳಲು ನಿಮ್ಮ ಜಾಗಕ್ಕೆ ಬರಬೇಕು, ಇನ್ನು ಅನೇಕ ಕಾರ್ಯಗಳು ಮಾಡುಬೇಕಿದ್ದು, ಎಲ್ಲಾ ಮುಗಿಸಿ ಮಾಗಿದಾಗ ಬರುವೆ ಎಂದು ಭಾವನಾತ್ಮಕವಾಗಿ ವೈರಾಗ್ಯದ ನುಡಿಗಳನ್ನು ಆಡಿದ್ದಾರೆ.

https://www.facebook.com/164942603692101/posts/1080603305459355/

View this post on Instagram

ಇಂದು ರಾತ್ರಿ ನಾನು #ಆಟೋರಾಜ ಆದಾಗ.. 1979/80 ಅಪ್ಪ ನನಗೆ ನಿನ್ನ ಅನ್ನ ನೀನೆ ದುಡಿದು ತಿನ್ನು ಆಗ ಬದುಕಿನ ಅರ್ಥ ನಿನಗಾಗುವುದು ಎಂದಾಗ ಅಂದು ನನಗೆ #ಮೈಯೂರ ಚಿತ್ರದ #interval ದೃಶ್ಯದ ರಾಜಣ್ಣ ನಂತೆ ಶಪಥಮಾಡಿ ಮನೆಬಿಟ್ಟು ಹೋಗಿ ಮೈಸೂರಿನಲ್ಲಿ ಆಟೋ ಡ್ರೈವರ್ ಆಗಿದ್ದೆ.! ಆಗ ನನಗೆ ಇದ್ದ ಆಸೆ ಒಂದೆ ಜೀವನದಲ್ಲಿ ಒಂದು ಆಟೋ ಸ್ವಂತ ಪಡೆದು ದಿನ 100ರೂ ದುಡಿಯುವ ಮನುಷ್ಯನಾಗಿ ಅಪಮಾನಿಸಿದ ಅಪ್ಪನ ಮುಂದೆ ಮೀಸೆ ತಿರುವಿ ಬದುಕಬೇಕು ಎಂದು!ಬದುಕಿಗೆ ಬುದ್ಧಿ ಹೇಳುವ #ಅಪ್ಪ ಅಂದು ಶತೃವಂತೆ ಕಂಡ.! ಇಂದು ಆಕಸ್ಮಿಕ ಒಬ್ಬ ಆಟೋರಿಕ್ಷಾ ಸಹೋದರ ಸಿಕ್ಕಾಗ ಅವನ ಅನುಮತಿ ಪಡೆದು ಆಟೋ ಓಡಿಸಿದೆ!ಅಪ್ಪ ಹಾಗು ನನ್ನ ಮನಸ್ಥಾಪದ ದಿನಗಳು ನೆನಪಾಗಿ #ಅಪ್ಪ ಎಂಥ ಶ್ರೇಷ್ಟ.. ಮಗ ನಾನು ಎಂಥ ಅಧಮ.!ವ್ಯೆತ್ಯಾಸ ನನ್ನ ತಲೆತಗ್ಗಿಸುವಂತೆ ನಾಚಿಕೆಯಾಯಿತು..! ಮಗ ಬದುಕು ಕಲಿಯಲಿ ಎಂದು ಅಪ್ಪ ಆಡಿದ ಮಾತೆಲ್ಲಾ ಅಣಕ ಅಪಮಾನದಂತೆ ಕೇಳುತ್ತಿತ್ತು ರಕ್ತ ಬಿಸಿಯಿದ್ದಾಗ..! ಅದರೆ ಈಗ? ನೀವು ಬೈದು ಬುದ್ಧಿ ಹೇಳುತ್ತಿದ್ದ ಮಗ ಇಂದು ತಾತನಾಗಿ ಬದುಕಿನ ಪುಟಗಳ ಮೆಲುಕುಹಾಕಿದಾಗ ಅಪ್ಪ ಎಂಥ ಶ್ರೇಷ್ಟಮನುಜ ನೀನು ಅನ್ನಿಸಿತು..!ತಪ್ಪಾಯಿತು ಕ್ಷಮಿಸಿ ಅಂದರು ಕೇಳದಷ್ಟು ದೂರದ ಊರಿಗೆ ಹೋಗಿಬಿಟ್ಟೆ..! ಕ್ಷಮೆಕೇಳಲು ನಾನು ನೀನಿರುವ ಜಾಗಕ್ಕೆ ಬರಬೇಕು..!ಇನ್ನು ಅನೇಕ ಕಾರ್ಯವಿದೆ ಮುಗಿಸಿ ಮಾಗಿದಾಗ ದೇಹ ನಿನ್ನಲ್ಲಿಗೆ ಬರುವೆ!ಆಗಲಾದರು ಕ್ಷಮಿಸು.!ಎಷ್ಟೇ ಆದರು ನಾನು ನಿನ್ನ ಮಗನಲ್ಲವೆ..! ಒಂದಂತು ನಿನಗೆ ಸಮಾಧಾನ ಆಗುತ್ತದೆ!ಅಪ್ಪ ನಾನು ಶ್ರಮಿಸಿ ನಿನ್ನ ವಂಶದ ಹೆಸರು ಉಳಿಸಿರುವೆ! ನೀನು ಅಮ್ಮ ಗರ್ವಪಡುತ್ತೀರಿ ನನ್ನ ಸಾಧನೆಕಂಡು..!love you pa..ever loving son..ನಿಮ್ಮ ಈಶ..ಎನ್ನಬೇಕು ಅನ್ನಿಸಿತು ಜನ್ಮ.. ತಂದೆತಾಯಿ ನಡೆದಾಡುವ ದೇವರು ಬದುಕಿದ್ದಾಗಲೆ ಗೌರವಿಸಿ! ಕಳೆದುಕೊಂಡ ಮೇಲೆ ಪರಿತಪಿಸಿದರು ಮತ್ತೆ ಸಿಗರು… ಶುಭರಾತ್ರಿ ……….

A post shared by Jaggesh Shivalingappa (@actor_jaggesh) on

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here