ಡಿಜೆ ಹಳ್ಳಿ, ಕೆ.ಜಿ ಹಳ್ಳಿಯಲ್ಲಿ ನಡೆದಂತಹ ಪ್ರಕರಣದ ಜಾಡು ಹಿಡಿದು ಹೊರಟಿರುವ ಸಿಸಿಬಿ ಪೋಲಿಸರು ನಿನ್ನೆ ಮಧ್ಯ ರಾತ್ರಿ ತನ್ನ ಆಪರೇಷನ್ ಅನ್ನು ಕೈಗೊಂಡಿದ್ದು, ನಡು ರಾತ್ರಿ ಸುಮಾರು 12 ಗಂಟೆಯಿಂದ ಮುಂಜಾನೆ 4 ಗಂಟೆಯವರೆಗೆ ತನ್ನ ಕಾರ್ಯಾಚರಣೆಯನ್ನು ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಕೆಜಿ ಹಳ್ಳಿಯ ಕಾರ್ಪೊರೇಟರ್ ಪತಿ ಕಲೀಂ ಪಾಷಾ ಸೇರಿದಂತೆ ಒಟ್ಟು 60 ಮಂದಿಯನ್ನು ಬಂಧಿಸಲಾಗಿದೆ. ಸಿಸಿಬಿ
ಡಿಸಿಪಿ ರವಿಕುಮಾರ್ ಅವರ ನೇತೃತ್ವದಲ್ಲಿ ಸಿಸಿಬಿ ಪೊಲೀಸರು, ಸಿಐಎಸ್​ಎಫ್​ ಹಾಗೂ ಆರ್​ಎಎಫ್ ತಂಡಗಳು ರಾತ್ರೋರಾತ್ರಿಯಲ್ಲೇ ತಮ್ಮ ಕಾರ್ಯಾಚರಣೆಯನ್ನು ನಡೆಸಿವೆ. ಈ  ತಂಡಗಳು ಗಲ್ಲಿ ಗಲ್ಲಿಯನ್ನೂ ಬಿಡದೇ ಮನೆ ಮನೆಗೂ ಹೋಗಿ, ಅಲ್ಲಿ ಶೋಧನಾ ಕಾರ್ಯವನ್ನು ನಡೆಸಿ, ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದವರನ್ನು ಬಂಧಿಸಿದ್ದಾರೆ.‌ ಡಿಜೆ ಹಳ್ಳಿಯ ಪೋಲಿಸ್ ಠಾಣೆ ಎದುರು ನಡೆದ ಗಲಾಟೆಯ ಸಂದರ್ಭದಲ್ಲಿ ಅಲ್ಲಿ ಕಲೀಂ ಪಾಷಾ ಕೂಡಾ ಇದ್ದರು ಎನ್ನಲಾಗಿದೆ. ಯಾವಾಗ ಗಲಾಟೆ ಹೆಚ್ಚಾಯಿತೋ ಆಗ ಅವರು ಅಲ್ಲಿಂದ ಕಾಲ್ಕಿತ್ತಿದ್ದರು ಎನ್ನಲಾಗಿದೆ. ಈಗ ಅವರನ್ನು ಸೇರಿಸಿ ಒಟ್ಟು 60 ಆರೋಪಗಳನ್ನು ಪೋಲಿಸರು ಬಂಧಿಸಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here