ಮಕ್ಕಳು ಪೋಲಿಸ್ ಆಯುಕ್ತರಾಗಿ ಕೆಲಸ ನಿರ್ವಹಿಸಿದರೆ ಹೇಗಿರುತ್ತದೆ? ಎಂದು ಕೇಳಿದರೆ, ಕೇಳುಗರಲ್ಲಿ ಉತ್ತರ ನೀಡುವ ಮೊದಲು, ನಿಜಕ್ಕೂ ಇದು ಸಾಧ್ಯವೇ? ಎಂಬ ಪ್ರಶ್ನೆ ಮೂಡುತ್ತದೆ. ಈಗ ಇಂತಹ ಒಂದು ಅಪರೂಪದ ಅಧಿಕಾರವನ್ನು ಪಡೆಯುತ್ತಿದ್ದಾರೆ ಏಳು ಜನ ಮಕ್ಕಳು. ಆದರೆ ಇದು ಸದಾ ಕಾಲಕ್ಕಲ್ಲ, ಬದಲಾಗಿ ಏಳು ಮಕ್ಕಳು ಒಂದು ದಿನದ ಮಟ್ಟಿಗೆ ನಗರ ಪೊಲೀಸ್‌ ಆಯುಕ್ತರ ಸ್ಥಾನದಲ್ಲಿ ಕುಳಿತು ಅಧಿಕಾರ ಚಲಾಯಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಆ ಮಕ್ಕಳು ಯಾರೆಂದು ತಿಳಿದಾಗ ನಿಜಕ್ಕೂ ಇದೆಷ್ಟು ಅರ್ಥಪೂರ್ಣ ಕೂಡಾ ಎನಿಸದೆ ಇರಲಾರದು.

ಪೋಲಿಸ್ ಆಯುಕ್ತರಾಗಿ ಒಂದು ದಿನದ ಮಟ್ಟಿಗೆ ಅಧಿಕಾರ ಪಡೆಯುತ್ತಿರುವ ಆ ಮಕ್ಕಳು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಏಳು ಜನ ಮಕ್ಕಳಾಗಿದ್ದು, ಆ ಮಕ್ಕಳು ತಮ್ಮ ಜೀವನದಲ್ಲಿ ತಾವು ಪೊಲೀಸ್‌ ಅಧಿಕಾರಿಗಳಾಗಬೇಕೆಂಬ ಕನಸನ್ನು ಕಂಡವರು. ಇಂತಹ ಮಕ್ಕಳ ಕನಸನ್ನು ಈಡೇರಿಸಲು ಬೆಂಗಳೂರು ನಗರ ಪೊಲೀಸರು ಮತ್ತು ‘ಮೇಕ್‌ ಎ ವಿಶ್‌ ಫೌಂಡೇಷನ್‌’ ಮುಂದಾಗಿದ್ದು, ಆ ಮಕ್ಕಳ ಕನಸಿಗೆ ರೂಪ ನೀಡುವ ಒಂದು ಮಾನವೀಯ ಕಾರ್ಯಕ್ಕೆ ಚಾಲನೆ ನೀಡಲು ಹೊರಟಿವೆ‌.

ಇದೇ ಸೋಮವಾರ ಬೆಳಿಗ್ಗೆ 11 ಗಂಟೆಗೆ ಪೊಲೀಸ್‌ ಆಯುಕ್ತರ ಕಚೇರಿಯ ಆವರಣದಲ್ಲಿ ಈ ಮಕ್ಕಳಿಗೆ ಪೊಲೀಸ್‌ ಗೌರವ ವಂದನೆ ನೀಡಲಾಗುತ್ತದೆ. ಅದಾದ ನಂತರ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು ಆ ಮಕ್ಕಳನ್ನು ತಮ್ಮ ಅಧಿಕೃತ ಸ್ಥಾನದಲ್ಲಿ ಕೂರಿಸಿ ಬೆಂಗಳೂರು ನಗರದ ಪೊಲೀಸ್‌ ಕರ್ತವ್ಯವನ್ನು ಒಂದು ದಿನದ ಮಟ್ಟಿಗೆ ನಿರ್ವಹಿಸುವ ಅವಕಾಶ ಮಾಡಿಕೊಡಲಿದ್ದಾರೆ. ಏಳು ಜನರಿಗೂ ಇಷ್ಟು ಸಮಯ ಎಂದು ನೀಡಿ, ಅಧಿಕಾರವನ್ನು ಚಲಾಯಿಸುವ ಅವಕಾಶ ನೀಡಲಾಗಿದೆ. ಇದರಿಂದ ಆ ಮಕ್ಕಳಲ್ಲಿ ಒಂದು ಹೊಸ ಚೈತನ್ಯ ಮತ್ತು ಉತ್ಸಾಹ ಮೂಡಿಸುವ ಸತ್ಕಾರ್ಯವನ್ನು ಮಾಡಲಾಗುತ್ತಿದೆ.‌

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here