ರಾಧಿಕಾ ಯಾರೆಗೆ ತಾನೇ ಗೊತ್ತಿಲ್ಲ? ಯಾವ ರಾಧಿಕಾ ಅಂತೀರಾ? 14 ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಮುದ್ದು ಮುದ್ದಾದ ಹುಡುಗಿ ಕನ್ನಡಿಗರ ಮನೆ ಮನಗಳಲ್ಲಿ ಮನಸ್ಸಿನಲ್ಲಿ ಮಾಸದೇ ನಿಂತ ಕಪ್ಪು ಕಣ್ಣಿನ ಚೆಲುವೆ. ಆ ಚಿಕ್ಕ ವಯಸ್ಸಿಗೇ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡ ಕನ್ನಡದ ಹುಡುಗಿ. ಇವೆಲ್ಲಕ್ಕಿಂತೂ ಮಿಗಿಲಾಗಿ ಅವಳ ಪರಿಚಯ ಕನ್ನಡಿಗರಿಗೆ ತವರಿಗೆ ಬಾ ತಂಗಿ ಹಾಗೂ ಅಣ್ಣ ತಂಗಿ ಚಿತ್ರವನ್ನುನೋಡಿದ ಎಲ್ಲಾ ಅಣ್ಣಂದಿರು ತಮಗೆ ಇದೇ ತರಹ ತಂಗಿಯನ್ನು ಕರುಣಿಸು ದೇವಾ ಅಂದರೆ ನೋಡಿದ ಎಲ್ಲಾ ತಾಯಂದಿರ ಸೆರಗು ಒದ್ದೆ ಆಗದೇ ಇರಲಿಲ್ಲ. ಈ ಸಿನಿಮಾ ನೋಡಿದ ಯುವಕರು ಇದೇ ರೀತಿಯ

ಸಹೋದರಿಯನ್ನು ಕರುಣಿಸು ದೇವಾ ಅಂದರೆ ಹೆಣ್ಣುಮಕ್ಕಳು ನಮಗೆ ಇಂತಹ ಸಹೋದರರನ್ನು‌ ಕರುಣಿಸು ಅಂತ ದೇವರನ್ನು ಬೇಡುತ್ತಿದ್ದರು. ಇನ್ನೂ ತಂದೆ – ತಾಯಂದಿರು ನಮಗೆ ಈ ರೀತಿಯ ಮಗುವನ್ನು ಕರುಣಿಸಪ್ಪ ಯಾವ ಐಶ್ವರ್ಯ, ಅಂತಸ್ತು ಬೇಡ ಅನ್ನುತ್ತಿದ್ದರು. ಅಷ್ಟರ ಮಟ್ಟಿಗೆ ಜನರ ಮೇಲೆ ಅಣ್ಣ ತಂಗಿಯರ ಸಂಬಂಧದ ಶಿವರಾಜ್ ಕುಮಾರ್ ಹಾಗೂ ರಾಧಿಕಾ ಪ್ರಭಾವ ಬೀರಿದ್ದರು.
ಇತ್ತೀಚೆಗೆ ರಾಧಿಕಾ ರವರು ಬೆಂಗಳೂರು ತೊರೆಯಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿ ಹಬ್ಬಿತ್ತು. ಈ ವದಂತಿಗಳು ಸುಳ್ಳೆಂದು ಸ್ವತಃ ರಾಧಿಕಾರವರೇ ಸಮಜಾಯಿಷಿ ನೀಡಿದ್ದಾರೆ.

ತಮಗೂ ಒಂದು ಹೆಣ್ಣು ಮಗುವಿದ್ದು ಅದರ ಹೊಣೆಗಾರಿಕೆ ತಮ್ಮ ಮೇಲಿರುವುದರಿಂದ ತಾವು ತಮಗೆ ಬೇಡಿಕೆ ಬರುತ್ತಿರುವ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಲು ಸಾಧ್ಯವಿಲ್ಲ. ತಾವು ವರ್ಷಕ್ಕೆ 5-6 ಚಿತ್ರ ನಟಿಸಲು ಆಗದ ಕಾರಣ 1 ಅಥವಾ 2 ಸಿನಿಮಾದಲ್ಲಿ‌ ಖಂಡಿತವಾಗಿಯೂ ನಟಿಸುವುದಾಗಿ ಹೇಳಿಕೆ ‌ನೀಡಿದ್ದಾರೆ. ಅಲ್ಲದೇ ತಮ್ಮ ಬ್ಯಾನರ್ ಚಿತ್ರಗಳನ್ನು ನಿರ್ಮಿಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಾಗದು ಎಂದು ಸಹ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here