ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಂಬರ್ 1 ಎಂಬಂತೆ ಆಗಿದೆ. ಈ ಸೋಂಕನ್ನು ತಡೆಯಲು, ಬಿಬಿಎಂಪೊ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ರೋಗ ನಿಯಂತ್ರಣಕ್ಕೆ ಸಜ್ಜಾಗಿದೆ. ಅದೇ ಕ್ರಮಗಳಲ್ಲಿ ಕೊರೊನಾ ಸೋಂಕು ತಗುಲಿರುವ ಶಂಕೆ ಇರುವವರನ್ನು ಕ್ವಾರಂಟೈನ್ ನಲ್ಲಿ ವ್ಯವಸ್ಥೆ ಮಾಡಲು ಬೆಂಗಳೂರು ನಗರದಲ್ಲಿ 17 ಹೋಟೆಲ್‌ಗಳನ್ನು ಗುರುತಿಸಲಾಗಿದ್ದು, ಅಲ್ಲಿಡಲು ತೀರ್ಮಾನವನ್ನು ಮಾಡಲಾಗಿದೆ.

ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡುವ ಮೂಲಕ ಸೋಂಕಿತರು ಇತರರ ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎನ್ನಲಾಗಿದೆ. ಈ ವಿಷಯದ ಕುರಿತಾಗಿ ಬಿಬಿಎಂಪಿ ಮೇಯರ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಮಾಹಿತಿಯನ್ನು ಕೂಡಾ ನೀಡಿದ್ದಾರೆ. ಕ್ವಾರಂಟೈನ್ ಗಾಗಿ ಯಾವ-ಯಾವ ಹೋಟೆಲ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಒಂದು ಪಟ್ಟಿಯನ್ನು ಕೂಡಾ ಅವರು ಹಾಕಿ ವಿವರಿಸಿದ್ದಾರೆ. ಈ ಮೂಲಕ ಬಿಬಿಎಂಪಿ ಹೋಟೆಲ್‌ಗಳನ್ನು ಬಳಸಿಕೊಂಡು ನಗರದಲ್ಲಿ ವೈರಸ್ ಹರಡುವುದನ್ನು ತಡೆಯುವ ಪ್ರಯತ್ನಕ್ಕೆ ಸಜ್ಜಾಗಿದೆ.

ಸೋಂಕು ತಗುಲಿರುವ ಶಂಕಿತ ವ್ಯಕ್ತಿಗಳನ್ನು ಇತರರ ಸಂಪರ್ಕದಿಂದ ಮೊದಲು ಪ್ರತ್ಯೇಕಿಸಿ, ಅವರನ್ನುವ ಪ್ರತ್ಯೇಕವಾಗಿರಿಸಲು ಪ್ರಥಮ ಹಂತವಾಗಿ ಈಗ 17 ಹೋಟೆಲ್‌ಗಳನ್ನು ಗುರುತಿಸಲಾಗಿದೆ. ಈ ಹೋಟೆಲ್‌ಗಳಲ್ಲಿ ತಂಗುವ ಸೋಂಕಿತ ವ್ಯಕ್ತಿಗೆ ಕಾಲ ಕಾಲಕ್ಕೆ ಅಗತ್ಯವಿರುವ ಉಪಹಾರ ಮತ್ತು ಭೋಜನ ವ್ಯವಸ್ಥೆಯನ್ನು ಮಾಡಲಾಗುತ್ತದೆಯಲ್ಲದೆ, ಹೋಟೆಲ್‌ಗೆ ಹಣವನ್ನು ಸಹ ಪಾವತಿಯನ್ನು ಕೂಡಾ ಮಾಡಲಾಗುತ್ತದೆ ಎನ್ನಲಾಗಿದೆ. ಒಟ್ಟಾರೆ‌ ಸೋಂಕು ನಿಯಂತ್ರಣ ಬಿಬಿಎಂಪಿಯ ಮೊದಲ ಆದ್ಯತೆ ಆಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here