ಹೆತ್ತ ತಾಯಿಗೆ ಮಗನೊಬ್ಬ ಪೊರಕೆ ಇಂದ ಹೊಡೆದುದಲ್ಲದೇ ತಾಯಿ ಎಂದುರಲ್ಲೇ ಸಿಗರೇಟು ಸೇದಿ‌ ಅಸಭ್ಯ ವರ್ತನೆ ತೋರಿದ್ದು ಮಾತ್ರವಲ್ಲದೇ ಅವಾಚ್ಯ ಮಾತುಗಳಿಂದ ನ ನಿಂದಿಸಿ ಎಚ್ಚರಿಕೆಯನ್ನೂ ಹಾಕಿರುವ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನಡೆದಿತ್ತು. ಆ ಪಾಪಿ ಮಗನೇ ಇನ್ನೂ 19 ವರ್ಷ‌ದ ಜೀವನ್. ಈತ ಅಪ್ರಾಪ್ತ ಬಾಲಕಿಯೊಬ್ಬಳ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು ತಿಳಿದ ಆ ತಾಯಿ ಎಲ್ಲಾ ತಾಯಿಯ ಹಾಗೆ ಮಗನಿಗೆ ಬುದ್ದಿ ಮಾತು‌ಹೇಳಿದ್ದೇ ತಪ್ಪಾಗಿ ಹೋಗಿದೆ‌.ಕೈ ಮುಗಿದು ಆ ತಾಯಿ ಬೇಡಿಕೊಂಡರೂ ಬಿಡದೆ ತಾಯಿಗೆ ಪೊರಕೆ ಇಂದ ಹೊಡೆದದ್ದು ಅಲ್ಲದೇ ಈ ವಿಷಯವಾಗಿ ಎಲ್ಲಾದರೂ ಹೊರಗೆ ಬಾಯಿ ಬಿಟ್ಟರೆ ಇನ್ನೂ ಇದಕ್ಕಿದೆ ಹೆಚ್ಚಿನ ಶಿಕ್ಷೆ ಕೊಡುವುದಾಗಿ ಬೆದರಿಕೆಯನ್ನೂ ಸಹ ಹಾಕಿದ್ದಾನೆ.

 

ಇದು ರೆಕಾರ್ಡ್ ಆಗಿದ್ದು ಇದನ್ನು ಮಾದ್ಯಮ ಒಂದರಲ್ಲಿ ವೀಕ್ಷಿಸಿದ ಬೆಂಗಳೂರಿನ ಖಡಕ್ ಪೋಲಿಸ್ ಆಪೀಸರ್ ಡಿಸಿಪಿ ಅಣ್ಣಾಮಲೈ ಅವರು ಈ ಬಗ್ಗೆ ಖುದ್ದು ಆ ಕೇಡಿ ಮಗನ ವಿರುದ್ಧ ಸುಮೊಟೋ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಈ ಪ್ರಕರಣ ಬರುವ ಜೆ.ಪಿ. ನಗರದ ಪೋಲಿಸ್ ಠಾಣೆಗೆ ಆದೇಶವನ್ನು ನೀಡಿದ್ದಾರು. ಇದಕ್ಕೂ ಮೊದಲು ಆತನ ತಾಯಿ ಈ ಪ್ರಕರಣದ ಬಗ್ಗೆ ದೂರು ದಾಖಲು ನಿರ್ಧಾರ ಮಾಡಿದ್ದರು. ಆದರೆ  ಮಗನಿಗೆ ಹೆದರಿ ಸುಮ್ಮನಾಗಿದ್ದರು. ಇದೀಗ ಆ ಹುಡುಗನ ಅಸಲಿ ಫೋಟೋ ಗಳು ಸಿಕ್ಕಿವೆ.ಈ ವಿಷಯ ವೈರಲ್ ಆಗುತ್ತಿದ್ದಂತೆ ಜೀವನ್ ಎಂಬಾತ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಇದ್ದ ಎಲ್ಲಾ ಫೋಟೋ ಗಳನ್ನು ಡೆಲೆಟ್ ಮಾಡಿದ್ದಾನೆ.

ಇನ್ನು ಇವನು ಡೆಲೆಟ್ ಮಾಡುವ ಮೊದಲು ಒಂದಷ್ಟು ಫೋಟೋ ಸೋರಿಕೆಯಾಗಿವೆ. ಹುಡುಗಿಯ ಜೊತೆ ಫಿಲ್ಮೀ ಸ್ಟೈಲ್ ನಲ್ಲಿ ಲಿಪ್ ಟು ಲಿಪ್ ಲಾಕ್ ಮಾಡಿ ಫೇಸ್‌ಬುಕ್‌ ನಲ್ಲಿ ಅಪ್ ಲೋಡ್ ಮಾಡಿದ್ದಾನೆ ಈತ.ಈತನ ಬಲೆಯಲ್ಲಿ ಬಿದ್ದಿರುವ ಆ ಹುಡುಗಿ ಸಹ ಪ್ರಪಂಚದ ಪರಿಜ್ಞಾನ ಇಲ್ಲದೇ ಅಸಹ್ಯವಾಗಿ ಫೋಟೋ ಗೆ ಫೋಸ್ ಕೊಡುತ್ತಿರುವುದು ವಿಪರ್ಯಾಸ.ಇದೀಗ ಈ ಇಬ್ಬರ ಹಸಿಬಿಸಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.ಈ ಫೋಟೋ ಗಳನ್ನು ತಾಯಿ ನೋಡಿ ಮಗನಿಗೆ ಬುದ್ದಿ ಹೇಳಿದಾಗ ಆತ ಈ ಫೋಟೋ ಈ ರೀತಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಟಿವಿಯಲ್ಲಿ ಪ್ರಸಾರವಾದ ಈ ದೃಶ್ಯವನ್ನು ನೋಡಿದ ಬಳಿಕ ದೂರನ್ನು ವಾಪಸ್ ಪಡೆದರು ಎಂಬ ಊಹಾ ಪೋಹಗಳಿದ್ದು ಆ ರೀತಿಯ ಯಾವ ದೂರು ದಾಖಲಾಗಿಲ್ಲ ಎಂದೂ ಸ್ವತಃ‌ ತಾವೇ ದೂರು ದಾಖಲು‌ ಮಾಡಿಕೊಳ್ಳ ಮನನ ಬೇಕು. ಅವರ ತಾಯಿಯೇ ದೂರು ನೀಡಬೇಕು ಆದರೆ ಯಾವ ತಾಯಿ ತಾನೇ ತನ್ನ ದುಷ್ಟ ಮಗನ ಬಗ್ಗೆ ದೂರು ದಾಖಲಿಸುತ್ತಾರೆ.

ಎಂದಿದ್ದಾರೆ ಆದರೂ ಇಂತಹ ಪ್ರಕರಣದ ಬಗ್ಗೆ ನಾವೇ ಸ್ವತಃ ಸುಮೋಟು ಕೇಸು ದಾಖಲು‌ ಮಾಡಿಕೊಳ್ಳುತ್ತೇವೆ ಎಂದರು ಡಿ.ಸಿ.ಪಿ. ಅಣ್ಣಾಮಲೈ ಸಾಹೇಬರು. ತಂದೆ ತಾಯಿಯನ್ನು ದೇವರೆಂದು ಪೂಜಿಸಿದ ಈ ದೇಶದಲ್ಲಿ ತಾಯಿಗೆ ಪೊರಕೆ ‌ಇಂದ ಹೊಡೆದು‌ ದಮ್ಕಿ ಹಾಕಿದ ಬೆಂಗಳೂರಿನ ಈ ಯುವಕ ಜೀವನ್ ಗೆ ಕಾನೂನಿನ ಪ್ರಕಾರ ಸರಿಯಾದ ಶಿಕ್ಷೆ‌‌ ಕೊಡಿಸಬೇಕು ಎನ್ನುವುದು ಈ ದೃಶ್ಯವನ್ನು‌ ವೀಕ್ಷಿಸಿದ ನ ನಾಗರೀಕರ ಮನವಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here