ಬೆಂಗಳೂರು ದಕ್ಷಿಣದಲ್ಲಿ ಕಡೆಯ ಕ್ಷಣಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದವರು ತೇಜಸ್ವಿ ಸೂರ್ಯ. ಅವರ ಹೆಸರನ್ನು ಪ್ರಸ್ತಾಪಿಸಿದಾಗ ಅದರ ಬಗ್ಗೆ ಹಲವು ಶಂಕೆಗಳು, ಟೀಕೆಗಳು ಹಾಗೂ ವಿರೋಧಿ ಪಾಳೆಯವು ಈ ವಿಚಾರವಾಗಿ ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಆದರೆ ಈಗ ತೇಜಸ್ವಿ ಸೂರ್ಯ ಅವರ ಭರ್ಜರಿ ವಿಜಯವು ಈ ಎಲ್ಲಾ ಟೀಕೆ ಟಿಪ್ಪಣಿಗಳಿಗೆ ಸರಿಯಾದ ಉತ್ತರವನ್ನು ನೀಡಿದೆ. ಯುವ ನಾಯಕನನ್ನು ಗೆಲ್ಲಿಸುವ ಮೂಲಕ ಮತದಾರರು ಮತ್ತೊಮ್ಮೆ ಬಿಜೆಪಿ ಪರವಾಗಿ ತಮ್ಮ ಒಲವನ್ನು ತೋರಿಸಿದ್ದಾರೆ. ತೇಜಸ್ವಿ ಯುವನಾಯಕನಾಗಿ ಹೊರ ಹೊಮ್ಮಿದ್ದಾರೆ.

ಅನಂತ್ ಕುಮಾರ್ ಅವರ ಕ್ಷೇತ್ರದಲ್ಲಿ ಅವರ ನಂತರ ಯಾರು ? ಎಂಬ ಪ್ರಶ್ನೆ ಹುಟ್ಟಿದ್ದು ಸಹಜವೇ. ಆಗ ಯಾರೂ ಊಹಿಸದಂತೆ ಹೊರ ಬಂದ ಹೆಸರೇ ಯುವಕ ತೇಜಸ್ವಿ ಸೂರ್ಯ. ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದ ತೇಜಸ್ವಿ ಅವರಿಗೆ ಈ ಗೆಲುವು ಒಂದು ದೊಡ್ಡ ಅವಕಾಶವನ್ನು ಅವರಿಗೆ ತೆರೆದಿದೆ. ಜನರು ಕೂಡಾ ಯುವ ನಾಯಕನನ್ನು ಆರಿಸಿದ್ದಾರೆ ಹಾಗೂ ಈ ಮೂಲಕ ಜನಾದೇಶವನ್ನು ಸಾರಿದ್ದಾರೆ. ಈ ಮೂಲಕ ಯುವ ಜನರನ್ನು ಪ್ರತಿನಿಧಿಸುವ ಒಬ್ಬ ನಾಯಕ ಲೋಕಸಭೆಯನ್ನು ಕರ್ನಾಟಕದಿಂದ ಪ್ರವೇಶಿಸುತ್ತಿರುವುದು ದೊಡ್ಡ ಸಂಭ್ರಮದ ವಿಷಯವಾಗಿದೆ.

ತೇಜಸ್ವಿ ಅವರ ಗೆಲುವು ಯುವಜನರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬುದಕ್ಕೆ ಒಂದು ಸ್ಪೂರ್ತಿಯ ಸೆಲೆಯಾಗಲಿದೆ. ತೇಜಸ್ವಿ ಅವರ ಮಾತುಗಳು ಹಲವರಲ್ಲಿ ಅವರ ಕಾರ್ಯವೈಖರಿಯನ್ನು ಮೆಚ್ಚುವಂತೆ ಮಾಡಿದೆ. ಅಲ್ಲದೆ ನರೇಂದ್ರ ಮೋದಿಯವರ ವರ್ಚಸ್ಸು ಕೂಡಾ ತೇಜಸ್ವಿ ಅವರ ಗೆಲುವಿನಲ್ಲಿ ತನ್ನ ಪಾಲನ್ನು ಹೊಂದಿದೆ ಎಂಬುದನ್ನು ಕೂಡಾ ನಿರಾಕರಿಸುವಂತಿಲ್ಲ. ಅತಿ ಕಿರಿಯ ವಯಸ್ಸಿನಲ್ಲೇ ಸಂಸತ್ ಪ್ರವೇಶ ಮಾಡುತ್ತಿರುವ ತೇಜಸ್ವಿ ಸೂರ್ಯ ಅವರಿಗೆ ಈಗ 28 ವರ್ಷ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಗಳಿಸಿದ್ದು 7,39,229 ಮತಗಳು . ಒಟ್ಟಾರೆ ತೇಜಸ್ವಿ 3,30,000 ಕ್ಕೂ ಹೆಚ್ಚಿನ ಮತಗಳಿಂದ ದೊಡ್ಡ ಮಟ್ಟದಲ್ಲಿ ಮೊದಲ ಸ್ಪರ್ದೆಯಲ್ಲಿ ಗೆದ್ದು ಸಂಸತ್ ಪ್ರವೇಶ ಮಾಡುತ್ತಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here