ದೇಶಾದ್ಯಂತ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, ಅದು ರಾಜ್ಯದಲ್ಲಿ ಹಬ್ಬದ ಸಂದರ್ಭದಲ್ಲಿ ಇನ್ನೂ ನಮಗೆ ಆದೇಶ ದೊರೆತಿಲ್ಲ ಎಂಬ ಕಾರಣದಿಂದ ಪೊಲೀಸ್ ಇಲಾಖೆ ಒಂದೆರಡು ದಿನ ಜನರನ್ನು ರಿಲೀಫ್ ಮಾಡಿತ್ತು. ಆದರೆ ಇದೀಗ ಆದೇಶ ಸಿಕ್ಕ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ರಾಜ್ಯದಲ್ಲಿ ಕೂಡಾ ಹೊಸ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗಿದ್ದು, ಬಹಳ ಕಟ್ಟು ನಿಟ್ಟಾಗಿ ಅದನ್ನು ಟ್ರಾಫಿಕ್ ಪೊಲೀಸರು ಪಾಲಿಸಿದ್ದು, ರಸ್ತೆ ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದ್ದು, ದೊಡ್ಡ ಪ್ರಮಾಣದಲ್ಲಿ ದಂಡ ತೆರಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಅಂದರೆ ಗುರುವಾರ ಮಧ್ಯಾಹ್ನದವರೆಗೂ ನಡೆದ ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದು, ನಿನ್ನೆ ಒಂದೇ ದಿನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣಗಳು ದಾಖಲಾಗಿರುವುದು, ರಸ್ತೆ ನಿಯಮ ಪಾಲನೆಯನ್ನು ವಾಹನ ಚಾಲಕರು ಯಾವ ಮಟ್ಟಕ್ಕೆ ಕಡೆಗಣಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಂತಿದೆ. ಈ ದೊಡ್ಡ ಸಂಖ್ಯೆಯಲ್ಲಿ ದಾಖಲಾದಂತಹ ಪ್ರಕರಣಗಳಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಒಂದೇ ದಿನದಲ್ಲಿ ಬರೋಬ್ಬರ 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆನ್ನಲಾಗಿದೆ. ನಿಯಮ ಉಲ್ಲಂಘಿಸಿದವರ ಬಳಿ ಭಾರೀ ದಂಡ ಕಟ್ಟಿಸಿರುವುದರಿಂದ, ಇದೀಗ ವಾಹನ ಚಾಲಕರಿಗೆ ಅಲ್ಪ ಸ್ವಲ್ಪವಾದರೂ ದಂಡದ ಭೀತಿ ಎದುರಾಗಿದೆ.

ದುಬಾರಿ ದಂಡವನ್ನು ತೆರಬೇಕಾದ ಹಿನ್ನಲೆಯಲ್ಲಿ, ದಂಡದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವವರು ಕೂಡಾ ಕಡಿಮೆಯೇನಿಲ್ಲ. ಅಂತಹುದೇ ಒಂದು ಪ್ರಯತ್ನದ ಹಾಸ್ಯ ವಿಡಿಯೋ ಒಂದನ್ನು ಗುರುಗ್ರಾಮದ ಐಪಿಎಸ್ ಅಧಿಕಾರಿ ಪಂಕಜ್ ನೈನ್ ಶೇರ್ ಮಾಡಿಕೊಂಡಿದ್ದಾರೆ. ಪೋಲಿಸರು ವಾಹನಗಳನ್ನು ಪರಿಶೀಲನೆ ಮಾಡುವುದನ್ನು ನೋಡಿದವರು ಗಾಡಿಗಳನ್ನು ತಳ್ಳಿಕೊಂಡು ಹೋಗುತ್ತಿರುವುದು ಕೂಡಾ ಕಾಣಸಿಗುತ್ತಿದೆ. ವಾಹನ ಚಾಲಕರ ಇಂತಹ ಪ್ರಯತ್ನಗಳನ್ನು ನೋಡಿ ಪೋಲಿಸರು ದಂಡ ಸಂಗ್ರಹ ಮಾಡುವಲ್ಲಿ ಹೈರಾಣಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here