ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಮತ್ತು ರಾಜ್ಯದ ಕೆಲವೆಡೆ ನಡೆಯಿತೆನ್ನಲಾಗುವ ಟ್ರಾಫಿಕ್ ಪೋಲಿಸರು ಸಾರ್ವಜನಿಕರ ಮೇಲೆ ನಡೆಸುತ್ತಿರುವ ದರ್ಪ ಹಾಗೂ ಸಾರ್ವಜನಿಕರ ಬಗ್ಗೆ ಬಳಸಿರುವ ಅವಾಚ್ಯ ಪದಗಳನ್ನು ಬಳಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದು ಮಾತ್ರವಲ್ಲದೆ ಟ್ರಾಫಿಕ್ ಪೋಲಿಸರ ಈ ನಡೆಗೆ ಸಾರ್ವಜನಿಕ ವಲಯದಿಂದ ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗುತ್ತಿವೆ‌. ಪ್ರತಿದಿನ ಇಂತಹುದೊಂದು ವಿಡಿಯೋ ವೈರಲ್ ಆಗುತ್ತಿರುವುದು ವಿಷಾದನೀಯ ಎನಿಸ ತೊಡಗಿದೆ.

ಈಗ ಅಂತಹುದೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗುತ್ತಿದೆ. ಮತ್ತೆ ಒಬ್ಬ ವಾಹನ ಚಾಲಕ ಮತ್ತು ಟ್ರಾಫಿಕ್ ಪೋಲಿಸ್ ನಡುವೆ ಮಾತಿನ ಚಕಮಕಿ ನಡೆದಿದ್ದು, ವಾಹನ ಚಾಲಕನು ಕೂಡಾ ತನ್ನ ಆಕ್ರೋಶವನ್ನು ಬಹಳ ಸಿಟ್ಟಿನಿಂದ ಹೊರಹಾಕಿದ್ದು, ಟ್ರಾಫಿಕ್ ಪೋಲಿಸರ ಜೊತೆ ಆತ ರಸ್ತೆಯಲ್ಲೇ ವಾಗ್ದಾಳಿ ನಡೆಸಿದ್ದಾನೆ‌. ಪೋಲಿಸರ ಮೇಲೆ ತಾನು ಕೂಡಾ ತಿರುಗಿ ಬಿದ್ದಿರುವ ವಿಡಿಯೋ ಇದಾಗಿದೆ.

ಈ ಘಟನೆ ಬೆಂಗಳೂರಿನ ಬಿಟಿಎಂ ಲೇ ಔಟ್ ನ ಮಾರುತಿ ನಗರ ಮೊದಲ ಹಂತದಲ್ಲಿ ನಡೆದಿದೆ ಎನ್ನಲಾಗಿದ್ದು, ಚಾಲಕನನ್ನು ಮತ್ತು ಟ್ರಾಫಿಕ್ ಪೋಲಿಸರನ್ನು ಸಾರ್ವಜನಿಕರು ಸಮಾಧಾನ ಮಾಡುತ್ತಾ ದೂರಕ್ಕೆ ಕರೆದೊಯುತ್ತಿದ್ದಾರೆ. ದಿನ ಪ್ರತಿದಿನ ಇಂತಹ ಸನ್ನಿವೇಶಗಳು ಸಾಮಾನ್ಯ ಎನಿಸುವ ಮಟ್ಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿದ್ದು, ಇದಕ್ಕೆ ಒಂದು ಪರಿಹಾರ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here