ರಾಷ್ಟ್ರದಲ್ಲಿ ತೀವ್ರ ವಿವಾದಾತ್ಮಕ ಹಾಗೂ ಪ್ರತಿಭಟನೆಗೆ ಕಾರಣವಾಗಿರುವ ಸಿಎಎ ಕಾಯ್ದೆಯ ಪರವಾಗಿ ನಿನ್ನೆ ಬಾಗಲಕೋಟೆ ಜಿಲ್ಲೆಯ ತೆರದಾಳ ಪಟ್ಟಣದಲ್ಲಿ ಕಾರ್ಯಕ್ರಮವೊಂದು ನಡೆದಿದ್ದು, ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಒಂದು ಹೇಳಿಕೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದ್ದು, ಹಲವರು ಆ ಹೇಳಿಕೆಯನ್ನು ವಿರೋಧ ಮಾಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಹಾತ್ಮ ಗಾಂಧೀಜಿ ಮತ್ತು ಭಾರತದ ಮೊದಲ ಪ್ರಧಾನಿಯಾಗಿದ್ದ ಜವಹರ್ ಲಾಲ್ ನೆಹರೂ ಅವರ ಬಗ್ಗೆ ನೀಡಿರುವ ಹೇಳಿಕೆ ಇದೀಗ ವಿವಾದವನ್ನು ಸೃಷ್ಟಿಸಿದೆ.

ಶಾಸಕರು ತಮ್ಮ ಮಾತಿನಲ್ಲಿ “ದೇಶದ ಪ್ರಧಾನಿಯಾಗಲು ಸರ್ಧಾರ್ ವಲ್ಲಭಾಯಿ ಪಟೇಲ್ ಅವರಿಗೆ ಬಹುಮತ ಇತ್ತು. ಆದರೆ, ಮಹಾತ್ಮ ಗಾಂಧಿ ಮಾಡಿದ ತಪ್ಪಿನಿಂದಾಗಿ ಅಂದು ನೆಹರು ಪ್ರಧಾನಿಯಾದರು. ಆತನೋರ್ವ ಅಯೋಗ್ಯ, ವಿಲಾಸಿ ಜೀವನ ನಡೆಸುತ್ತಿದ್ದ ವ್ಯಕ್ತಿ ಎಂದು ಹೀಗಳೆದಿದ್ದಾರೆ. ಅವನಿಗೆ ಸಿಗರೇಟ್ ಲಂಡನ್ ಇಂದ ಬರುತ್ತಿತ್ತು, ಬಟ್ಟೆ ಕ್ಲೀನ್ ಆಗಲು ಕೂಡಾ ಲಂಡನ್ ಗೆ ಹೋಗುತ್ತಿತ್ತು ಇಂತಹವರು ಬಡವರ ಬಗ್ಗೆ ಮಾತನಾಡುತ್ತಾರೆ ಎಂದು ಏಕವಚನದಲ್ಲೇ ಮಾತನಾಡುತ್ತಾ ನೆಹರೂ ಅವರ ಬಗ್ಗೆ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ.

ಅವರು ಸಿಎಎ ಬಗ್ಗೆ ಹೇಳುತ್ತಾ, ಸಿಎಎ ಇಂದ ದೇಶದ ಯಾವುದೇ ಮುಸಲ್ಮಾನನಿಗೂ ಕೂಡಾ ತೊಂದರೆಯಾಗಿಲ್ಲ. ಆದರೆ ಕುರ್ಚಿಗಾಗಿ ರಾಜಕೀಯ ಮಾಡುವವರಿಗೆ ಮಾತ್ರ ಇದರಿಂದ ಸಾಕಷ್ಟು ತೊಂದರೆಯಾಗಿದೆ ಎಂದಿದ್ದಾರೆ. ಮಂಗಳೂರಿನಲ್ಲಿ ಗೋಲಿಬಾರ್ ಆದಾಗ ಸಿದ್ಧರಾಮಯ್ಯನವರು ತನ್ನ ಪ್ರಾಣ ಒತ್ತೆಯಿಟ್ಟಾದರೂ ಮಂಗಳೂರಿಗೆ ಹೋಗುವುದಾಗಿ ಹೇಳಿದ್ದರು. ಆದರೆ ಪ್ರವಾಹ ಸಂದರ್ಭದಲ್ಲಿ ಬಾದಾಮಿಗೆ ಬರದೆ ಅವರು ಎಲ್ಲಿ ಮಲಗಿದ್ದರು ಎಂದು ವ್ಯಂಗ್ಯವಾಡಿದ್ದಾರೆ ಶಾಸಕರು.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here