ರಾಜ್ಯದಲ್ಲಿ ಪಾಕ್ ಪರವಾದ ಘೋಷಣೆಗಳು, ದೇಶದ್ರೋಹದಂತಹ ಚಟುವಟಿಕೆಗಳು ಹೆಚ್ಚಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ರಾಜ್ಯದ ಗೃಹಮಂತ್ರಿಯನ್ನಾಗಿ ಮಾಡಬೇಕೆಂಬ ಕೋರಿಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಫೇಸ್ ಬುಕ್ ಹಾಗೂ ಟಿಕ್ ಟಾಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಇಂತಹುದೊಂದು ಬೇಡಿಕೆಯ ಅಭಿಯಾನವನ್ನು ಆರಂಭ ಮಾಡಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಭಿಮಾನಿಗಳು. ಅವರು ಸಾಮಾಜಿಕ ಜಾಲತಾಣಗಳನ್ನೇ ತಮ್ಮ ಅಭಿಯಾನಕ್ಕೆ ವೇದಿಕೆ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಗೃಹಮಂತ್ರಿಯನ್ನಾಗಿ ಮಾಡಬೇಕೆಂಬ ಪೋಸ್ಟ್ ಗಳು ಹರಿದಾಡುತ್ತಿವೆ. ದೇಶದ್ರೋಹಿಗಳನ್ನು ಹತ್ತಿಕ್ಕಬೇಕಾದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ವ್ಯಕ್ತಿಯೇ ಸರಿ ಅವರನ್ನು ಗೃಹಮಂತ್ರಿಯನ್ನಾಗಿ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮನವಿ ಮಾಡಿದ್ದಾರೆ ತಮ್ಮ ಪೋಸ್ಟ್ ಗಳ ಮೂಲಕ. ಅವರ ಅಭಿಮಾನಿಗಳ ಬೇಡಿಕೆ ಇದಾಗಿದೆ‌.

ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಬಸನಗೌಡ ಅವರನ್ನು ಗೃಹಮಂತ್ರಿಯನ್ನಾಗಿ ಮಾಡಿದರೆ ಫೈರ್ ಬ್ರಾಂಡ್ ಎನಿಸಿಕೊಂಡಿರುವ ಅವರು ಇಂತಹ ದೇಶದ್ರೋಹಿಗಳನ್ನು ಹತ್ತಿಕ್ಕುವುದಕ್ಕೆ ಸಮರ್ಥರು ಎನ್ನುತ್ತಾ ಪೋಸ್ಟ್ ಗಳನ್ನು ಮಾಡಲಾಗಿದೆ. ಈ ಬಗ್ಗೆ ಟಿಕ್ ಟಾಕ್ ಮತ್ತು ವಾಟ್ಸಾಪ್ ಗಳಲ್ಲೂ ಕೂಡಾ ಸಂದೇಶಗಳನ್ನು ರವಾನೆ ಮಾಡುವ ಮೂಲಕ ಈ ವಿಚಾರವನ್ನು ಹಂಚುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here