City Big News Desk.
ಬೊಮ್ಮನಳ್ಳಿ: ನಗರದಲ್ಲಿ ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಫ್ರೆಂಡ್ಸ್ ಹಾಕಿದ್ದಾರೆ.
ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಅಜಿತ್ ಅಧಿಕಾರಿಗಳೊಂದಿಗೆ ಎಚ್ಎಸ್ಆರ್ ಬಡಾವಣೆ ವೀಕ್ಷಣೆ ಮಾಡಿದರು. ರಾಜಕಾಲುವೆ ಮತ್ತು ಕಸ ವಿಲೇವಾರಿ ಬಗ್ಗೆ ಪರಿಶೀಲನೆ ಮಾಡಿ ಮಳೆ ಸಂಬಂಧಿತ ಸಮಸ್ಯೆಗಳಿಗೆ ಮುಂಜಾಗ್ರತಾ ಕ್ರಮವಹಿಸುವಂತೆ ತಿಳಿಸಿದರು.
ಸಮರ್ಪಕ ಕಸ ವಿಲೇವಾರಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಒಣ ಕಸ ಮತ್ತು ಹಸಿ ವಿಂಗಡಣೆ ಪರಿಣಾಮಕಾರಿಯಾಗಿಸಲು ಚಿಂತನೆ ನಡೆಸಿದರು. ದಿಢೀರ್ ಭೇಟಿಯಿಂದ ಪಾಲಿಕೆ ನೌಕರರಲ್ಲಿ ಜಾಗೃತಿ ಮೂಡಿಸಬಹುದು ಸಮಸ್ಯೆಗಳ ಮೂಲ ಹುಡುಕಿ ಶೀಘ್ರವಾಗಿ ಪರಿಹರಿಸಬಹುದು. ಸದ್ಯ ಕಸ ವಿಂಗಡಣೆ ಪ್ರತಿ ಮನೆ ಮತ್ತು ಅಪಾರ್ಟ್ಮೆಂಟ್ ಗಳಲ್ಲಿ ಆಗಬೇಕಿದೆ ಎಂದರು. ಕಸದ ಬ್ಲಾಕ್ ಸ್ಪಾಟ್ ಗಳನ್ನು ಕಡಿತಗೊಳಿಸಬೇಕಿದೆ ಆದರಿಂದ ಸ್ವಚ್ಚತೆ ಜೊತೆಗೆ ಸಮಯ ಉಳಿತಾಯವಾಗಲಿದೆ ಆ ನಿಟ್ಟಿನಲ್ಲಿ ಬೊಮ್ಮನಹಳ್ಳಿ ವಾಸಿಗಳಲ್ಲಿ ಮತ್ತಷ್ಟು ಅರಿವು ಮೂಡಿಸಲಾಗುವುದು ಎಂದು ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಅಜಿತ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಇ ಇ ಪಾಪಯ್ಯರೆಡ್ಡಿ, ಎಇಇ ಹನುಮಂತಪ್ಪ ಮತ್ತು ಇತರ ಆರೋಗ್ಯ ಇಲಾಖೆಗಳು ಮತ್ತು ಎಂಜಿನಿಯರಿಂಗ್ ಸಿಬ್ಬಂದಿ ಉಪಸ್ಥಿತರಿದ್ದರು.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.