ಸಮ್ಮಿಶ್ರ ಸರ್ಕಾರವನ್ನು ನಿದ್ರಿಸದಂತೆ ಮಾಡಿರುವ ಹದಿನಾಲ್ಕು ಜನರ ರಾಜಿನಾಮೆ ವಿಚಾರದಲ್ಲಿ ಪ್ರತಿದಿನ ಒಂದು ಒಂದು ತಿರುವು ಸಾಗುತ್ತಾ ಇದೆ. ಭಾರತೀಯ ಜನತಾ ಪಕ್ಷದ ಹಣದ ಆಮಿಷಕ್ಕೆ ಒಳಗಾಗಿ ಮೈತ್ರಿ ಸರ್ಕಾರದ ಶಾಸಕರು ರಾಜಿನಾಮೆ ಕೊಟ್ಟಿದ್ದಾರೆ ಎನ್ನುವವರ ವಿರುದ್ದ ಬಿ ಸಿ ಪಾಟಿಲ್ ಕಿಡಿ ಕಾರಿದ್ದಾರೆ. ನನ್ನನ್ನು ಯಾರೂ ದುಡ್ಡು ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಬಿ.ಸಿ ಪಾಟೀಲ್​​​​​​​ ಗರಂ ಆಗಿದ್ದಾರೆ.ಈಗಾಗಲೇ ಮೈತ್ರಿ ಸರ್ಕಾರದ 12 ಶಾಸಕರು ರಾಜೀನಾಮೆ ನೀಡಿ ಮುಂಬೈನ ಖಾಸಗಿ ಹೋಟೆಲ್​​​ನಲ್ಲಿ ತಂಗಿದ್ದಾರೆ. ಈ ವಿಚಾರದ ಬಗ್ಗೆ ಮುಂಬೈನಿಂದ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್​ ಶಾಸಕ ಬಿ.ಸಿ ಪಾಟೀಲ್​​​​​​​

ಅವರ ವಿರುದ್ಧದ ಉಹಾಪೋಹಗಳ ಮಾತುಗಳಿಗೆ ಗರಂ ಆಗಿದ್ದಾರೆ.ನಮಗೆ ಸ್ವಾಭಿಮಾನವಿದೆ ಬಿ.ಸಿ ಪಾಟೀಲ್​ರನ್ನು ಯಾರೂ ಖರೀದಿ ಮಾಡಲು ಸಾಧ್ಯವಿಲ್ಲ. ನಾನು 25 ವರ್ಷ ಪೊಲೀಸ್​​ ಕೆಲಸ ಮಾಡಿ ಗನ್​​ ಹಿಡಿದು ಬಂದಿರುವ ಮನುಷ್ಯ. ಯಾರನ್ನು ಯಾರು ಗನ್​​ ಪಾಯಿಂಟ್​ನಲ್ಲಿ ಹಿಡಿದಿಡುವಂತಹ ಪರಿಸ್ಥಿತಿಯಿಲ್ಲ. ನಮ್ಮ ಸ್ವಇಚ್ಛೆಯಿಂದ ನಾವು ರಾಜೀನಾಮೆ ನೀಡಿದ್ದೇವೆ.

ಸ್ಪೀಕರ್​ ನಮ್ಮನ್ನು ಬೆಂಗಳೂರಿಗೆ ಕರೆದರೆ, ನಾವು ಇವತ್ತೇ ಹೋಗುತ್ತೇವೆ. ನಾವು ಅತೃಪ್ತ ಶಾಸಕರಲ್ಲ. ನಮ್ಮ ನೋವುಗಳಿಂದ ಬೇಸತ್ತು ರಾಜೀನಾಮೆ ನೀಡಿದ್ದೇವೆ. ಯಾವ ಉಹಾಪೋಹ ಮಾತುಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here