ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ , ನಿನ್ನೆ ಅನಿರೀಕ್ಷಿತ ಎಂಬಂತೆ ಕಾಂಗ್ರೆಸ್ ನ 12 ಮಂದಿ ಅತೃಪ್ತ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅದಾದ ನಂತರ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅನೇಕ ಬೆಳವಣಿಗೆಗಳು ರಾಜ್ಯ‌ ಹಾಗೂ ದೆಹಲ್ಲಿಯಲ್ಲಿ ಕೂಡಾ ನಡೆದಿವೆ. ಆಕಸ್ಮಿಕವಾಗಿ ರಾಜೀನಾಮೆ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ದೋಸ್ತಿ ಸರ್ಕಾರ ಪತನಗೊಳ್ಳುವ ಅನುಮಾನಗಳ ಬಗ್ಗೆ ಎಲ್ಲೆಲ್ಲೂ ಅನುಮಾನಗಳು ವ್ಯಕ್ತವಾಗಿವೆ. ವಿಷಯ ಹೀಗಿರುವಾಗ, ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿ ಪಾಟೀಲ್ ಅವರು ಕ್ಷಮೆ ಕೇಳಿದ್ದಾರೆ.

ಬಿ.ಸಿ.‌ಪಾಟೀಲ್ ಅವರು ಕ್ಷಮೆ ಯಾಚಿಸಿರುವುದು ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ. ಅವರು ತಮ್ಮ ಅಭಿಮಾನಿಗಳು, ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ, ನಿಮ್ಮೆಲ್ಲರ ಆಶೀರ್ವಾದದಿಂದಾಗಿ ನಾನು ಇಲ್ಲಿಯವರೆಗೆ ಮೂರು ಬಾರಿ ಶಾಸಕನಾಗಿದ್ದೇನೆ. ಆದರೆ ಮಂತ್ರಿ ಸ್ಥಾನವನ್ನು ಬೇರೆಯವರಿಗೆ ನೀಡುವ ಮೂಲಕ ತಾಲೂಕಿಗೆ ದ್ರೋಹ ಮಾಡಿದ್ದಾರೆ. ಅದಕ್ಕಾಗಿಯೇ ಹಿರೇಕೆರೂರು ತಾಲೂಕಿನ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರು ವಿವರಣೆ ನೀಡಿದ್ದಾರೆ.

ಬಿ.ಸಿ. ಪಾಟೀಲ್ ಅವರು ಈ ರೀತಿ ಕ್ಷಮೆ ಯಾಚಿಸಿರುವುದು ಅವರ ಕೌರವ ವ್ಯಾಟ್ಸಪ್ ಗ್ರೂಪ್ ಮೂಲಕ ಎನ್ನಲಾಗಿದೆ. ತನ್ನನ್ನು ಗೆಲ್ಲಿಸಿದ ಜನರಿಗೆ ಮೊದಲು ಕ್ಷಮೆ ಕೇಳುವ ಉದ್ದೇಶದಿಂದ ಅವರು ಈ ಹೆಜ್ಜೆ ಇಟ್ಟಿದ್ದಾರೆ. ರಾಜೀನಾಮೆ ಪರ್ವ ನಿನ್ನೆ ನಡೆದಿದ್ದು, ಮುಂದಿನ ಬೆಳವಣಿಗೆಗಳು ಏನಾಗಲಿವೆ ಎಂಬುದನ್ನು
ರಾಜ್ಯದ ಜನರು ಕಾತುರದಿಂದ ಕಾಯುತ್ತಿದ್ದಾರೆ. ಅಲ್ಲದೆ ರಾಜಕೀಯ ವಲಯದಲ್ಲಿ ಏನೆಲ್ಲಾ ಬೆಳವಣಿಗೆಗಳು ಸ್ಥಾನ ಪಡೆಯಲಿವೆ ಎಂಬುದು ಕಾದು ನೋಡಬೇಕಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here