ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಂದ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದವರಲ್ಲಿ 10 ಮಂದಿಯನ್ನು ಯಡಿಯೂರಪ್ಪ ನಿನ್ನೆ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಈ ಬಗ್ಗೆ ಲೇವಡಿ ಮಾಡಿದ್ದ ಕುಮಾರಸ್ವಾಮಿ, ಉಪಚುನಾವಣೆಯಲ್ಲಿ ಗೆದ್ದ 10 ಜನರು ಮಂತ್ರಿಗಳಾಗಿ ಮಜಾ ಮಾಡುತ್ತಿದ್ದರೆ, ಬಿಜೆಪಿಯ 105 ಶಾಸಕರು ಕಡುಬು ತಿಂತಾರಾ? ಎಂದು ಪ್ರಶ್ನಿಸಿ ಕುಹಕವಾಡಿದ್ದರು.ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆ ವಿರುದ್ಧ ಟೀಕೆ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ಇಂದು ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಆಕಸ್ಮಿಕವಾಗಿ ಸಿಎಂ ಆಗಿದ್ದನ್ನು ನೆನಪಲ್ಲಿಟ್ಟುಕೊಂಡಿರಬೇಕು.

ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡಬೇಕು ಎಂದು ನಿನ್ನೆ ಸಂಪುಟ ಸೇರ್ಪಡೆಯಾದ ಬಿ.ಸಿ. ಪಾಟೀಲ್ ಆಗ್ರಹಿಸಿದ್ದಾರೆ. ವಿಕಾಸಸೌಧದಲ್ಲಿ ತಮಗೆ ಹಂಚಿಕೆಯಾಗಿರುವ 406ನೇ ಕೊಠಡಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಕುಮಾರಸ್ವಾಮಿಗೆ ಆಸೆ ಇದ್ದರೆ ಬಿಜೆಪಿಗೆ ಬರಲಿ ಎಂದು ವ್ಯಂಗ್ಯ ಮಾಡಿದ್ಧಾರೆ.

“ಕುಮಾರಸ್ವಾಮಿಯವರಿಗೆ ಬಿಜೆಪಿಗೆ ಬರುವ ಆಸೆ ಇದ್ದರೆ ಹೇಳಲಿ. ನಾವೇ ಅವರೊಂದಿಗೆ ಮಾತನಾಡಿ ಬಿಜೆಪಿಗೆ ಕರೆ ತರುತ್ತೇವೆ” ಎಂದು ಬಿ.ಸಿ. ಪಾಟೀಲ್ ತಿಳಿಸಿದರು. ಅವರಿಗೆ ಬಿಜೆಪಿ ಶಾಸಕರ ಬಗ್ಗೆ ಯಾಕೆ ಚಿಂತೆ? ಮೊದಲು ಅವರು ತಮ್ಮ ಜೆಡಿಎಸ್ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಟೀಕಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here