ಡಾಲರ್ಸ್ ಕಾಲೊನಿಯ ಸಿಎಂ ಯಡಿಯೂರಪ್ಪ ಅವರ ಮನೆಗೆ ಅನರ್ಹ ಶಾಸಕರಾದ ಬಿ.ಸಿ.ಪಾಟೀಲ್ ಅವರು ಇಂದು ತಮ್ಮ ಮಗಳೊಂದಿಗೆ ಭೇಟಿ ನೀಡಿದ್ದಾರೆ. ಇದರಿಂದ ಸ್ಪೀಕರ್ ಅವರ ಆದೇಶವನ್ನು ಏನಾದರೂ ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದರೆ ಹಿರೆಕೆರೂರು ಕ್ಷೇತ್ರದಿಂದ ಬಿ.ಸಿ.ಪಾಟೀಲ್ ಅವರು ತಮ್ಮ ಮಗಳು ಸೃಷ್ಟಿ ಪಾಟೀಲರನ್ನು ಕಣಕ್ಕೆ ಇಳಿಸುತ್ತಾರೆಯೆ? ಎಂಬ ಅನುಮಾನ ಉಂಟಾಗಿತ್ತು. ಸುಪ್ರೀ ಕೋರ್ಟ್ ತೀರ್ಪು ವಿಳಂಬವಾದಲ್ಲಿ ಮಗಳನ್ನು ಚುನಾವಣಾ ಕಣಕ್ಕೆ ಇಳಿಸುವರೇನೋ ಎಂದು ಅವರ ಭೇಟಿಯು ಹಲವರಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.
ಸಿಎಂ ಭೇಟಿಯ ನಂತರ ಬಿ.ಸಿ.ಪಾಟೀಲ್ ಅವರು ಮಾದ್ಯಮಗಳ ಜೊತೆ ಮಾತನಾಡಿದರು.

ಅವರು ಮಾತನಾಡುತ್ತಾ ಯಾವ ಪಕ್ಷದಿಂದ ಚುನಾವಣೆಯನ್ನು ಸ್ಪರ್ಧಿಸಬೇಕು ಎಂಬುದನ್ನು ಕ್ಷೇತ್ರದ ಜನತೆಯನ್ನು ಸಂಪರ್ಕಿಸಿ ಅವರ ಜೊತೆ ಚರ್ಚಿಸಿದ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ ಅವರು, ತಮ್ಮ ಮಗಳು ಸೃಷ್ಟಿ ಪಾಟೀಲ್ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹಲವರಿಗೆ ಉಂಟಾಗಿದ್ದ ಅನುಮಾನಗಳಿಗೆ ಅವರು ಅಲ್ಲೇ ಸ್ಪಷ್ಟವಾದ ಉತ್ತರವನ್ನು ನೀಡಿದ್ದಾರೆ.
ಈ ಕುರಿತು ತಾನು ಇನ್ನೂ ಚಿಂತನೆ ನಡೆಸಿಲ್ಲವೆಂದು ಕೂಡಾ ಅವರು ಹೇಳಿದ್ದಾರೆ.

ತಾನು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಬಂದಿದ್ದು ಕೇವಲ ಸೌಜನ್ಯಕ್ಕಾಗಿ ಹಾಗೂ ಅವರಿಗೆ ಶುಭಾಶಯವನ್ನು ಹೇಳಲು ಎಂದಿದ್ದು, ಹಿರೇಕೆರೂರು ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳವರ ಬಳಿ ಮನವಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ತನ್ನ ಶಾಸಕ ಸ್ಥಾನದ ಅನರ್ಹತೆಯ ಕುರಿತಾಗಿ ಕಾನೂನು ಹೋರಾಟದ ಬಗ್ಗೆ ಮುಖ್ಯಮಂತ್ರಿ ಅವರ ಬಳಿ ಏನೂ ಮಾತನಾಡಿಲ್ಲ ಎಂದು ಕೂಡಾ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here