ಯೋಗ ಎಂದರೆ ಅದು ಜೀವನದಲ್ಲಿ ಒಂದು ಹೊಸ ಹುರುಪು ಹಾಗೂ ಚೈತನ್ಯವನ್ನು ಮೂಡಿಸುವ ಒಂದು ಆರೋಗ್ಯಕರ ಅಭ್ಯಾಸ ಹಾಗೂ ಜೀವನ ವಿಧಾನ. ಭಾರತದಲ್ಲಿ ಯೋಗ ಆಧ್ಯಾತ್ಮಿಕತೆಯ ಜೊತೆ ತನ್ನ ನಂಟನ್ನು ಹೊಂದಿರುವುದು ನಮಗೆ ತಿಳಿದಿದೆ. ಆದರೆ ಇಂದು ಆಧುನಿಕತೆಯ ಹೆಸರಲ್ಲಿ ಯೋಗವು ಕೂಡಾ ಹೊಸ ಹೊಸ ರೂಪವನ್ನು ಪಡೆದು ಸಾಗುತ್ತಿದೆ. ಅದು ಎಲ್ಲರಿಗೂ ಅರಿವಿದೆ. ಆದರೆ ಈಗ ಒಂದು ವಿಚಿತ್ರವಾದ ಯೋಗದ ಬಗ್ಗೆ ನಾವು ಹೇಳಲು ಹೊರಟಿದ್ದೇವೆ.. ಆ ಯೋಗದ ಹೆಸರು ಕೇಳಿದರೇನೆ ಹಲವರು ಹುಬ್ಬೇರಿಸುತ್ತಾರೆ. ಇಂತಹುದು ಒಂದು ಯೋಗ ಇದೆಯೇ ಎಂದು ಆಶ್ಚರ್ಯ ಕೂಡಾ ಪಡಬಹುದು. ಈ ಯೋಗದ ಹೆಸರು “ಬಿಯರ್ ಯೋಗ.”

ಪವರ್ ಯೋಗ, ಆ್ಯಕ್ವಾ ಯೋಗ, ಹಾಟ್ ಯೋಗ, ಏರಿಯಲ್ ಯೋಗ ಎಲ್ಲಾ ಆಧುನಿಕ, ಇವುಗಳ ಮಧ್ಯೆ ಇದ್ಯಾವುದು ಬಿಯರ್ ಯೋಗ ಎಂದು ಕೊಂಡರೆ ಹೌದು ಇದೂ ಒಂದು ಯೋಗ ಚಾಲ್ತಿಯಲ್ಲಿದೆ. ಆಲ್ಕೋಹಾಲ್ ಹಾಗೂ ಯೋಗಕ್ಕೆ ದೂರದೂರಕ್ಕೂ ಸಾಮ್ಯತೆ ಇಲ್ಲ. ಆದರೆ ಕೆಲವು ಕಡೆ ದೇಹದ ತೂಕವನ್ನು ತಗ್ಗಿಸಲು, ದೇಹದ ಸಮತೋಲನ ಕಾಪಾಡಲು ಎನ್ನುವ ಕಾರಣದಿಂದ ಇಂತಹುದೊಂದು ಬಿಯರ್ ಯೋಗ ಎಂಬ ಅಭ್ಯಾಸ ಆರಂಭಿಸಿದ್ದಾರೆ. ಬಾಯಲ್ಲಿ ಬಿಯರ್ ಇಟ್ಕೊಂಡು, ಕುಡಿಯುತ್ತಾ ಯೋಗ ಮಾಡುವ ವಿಧಾನ ಇದು‌.

ಜರ್ಮನಿಯ ಈ ಬಿಯರ್ ಯೋಗ ಏಕಕಾಲದಲ್ಲಿ ನಿಮ್ಮ ಕುಡಿಯುವ ಚಟ ಹಾಗೂ ದೇಹದಿಂದ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ ಎಂದು ಹೇಳುತ್ತದೆ. ಆದರೆ ಇದು ಒಂದು ಆರೋಗ್ಯಕರವಾದ ಯೋಗ ವಿಧಾನವಲ್ಲ ಎಂದು ಹಲವರು ಹೇಳಿದ್ದು, ಇದರಿಂದ ದೇಹಕ್ಕೆ ತೊಂದರೆಯೇ ಹೊರತು ಉಪಯೋಗವಂತೂ ಏನೂ ಇಲ್ಲ ಎನ್ನುತ್ತಾರೆ. ಆದರೆ ಕೆಲವರು ಬಿಯರ್ ಇಂದ ಹಾಗೂ ಯೋಗದಿಂದ ಮೈಂಡ್ ರಿಫ್ರೇಶ್ ಆಗುತ್ತದೆ. ಅವೆರಡರ ಕಾಂಬಿನೇಷನ್ ಆದ ಬಿಯರ್ ಯೋಗ ಕೂಡಾ ಬಹಳ ಉಪಯುಕ್ತ ಎನ್ನುತ್ತಾರೆ.. ಆದರೆ ನಿಜಕ್ಕೂ ಇದು ಉತ್ತಮ ಯೋಗವಲ್ಲ ಎಂಬುದು ಹಲವರ ಧೋರಣೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here