ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಕ್ರಿಕೆಟ್ ಸದ್ದು ಮಾಡಿದೆ. ಮಠದ ಆವರಣದಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಟವನ್ನಾಡಿ ಸಂಭ್ರಮಿಸಿದ್ದಾರೆ ಮಠದ ಶ್ರೀಗಳು. ಸಿದ್ಧಲಿಂಗ ಸ್ವಾಮೀಜಿಗಳು ಮಠದ ವಿದ್ಯಾರ್ಥಿಗಳೊಂದಿಗೆ ಕ್ರಿಕೆಟ್ ಆಟ ಆಡುವ ಮೂಲಕ ಸಂಭ್ರಮಿಸಿದ್ದಾರೆ. ಇದು ಅಲ್ಲಿನ ಮಕ್ಕಳಿಗೆ ಕೂಡಾ ಬಹಳ ಸಂತಸವನ್ನು ತಂದಿದೆ ಎಂಬುದು ಕೂಡಾ ಸತ್ಯವಾಗಿದೆ. ಶ್ರೀಗಳೆಂದರೆ ಸದಾ ಶಾಂತ ಸ್ವರೂಪಿಗಳಾಗಿ, ಗಾಂಭೀರ್ಯತೆಯನ್ನು ಮೆರೆಯುವ ಅವರನ್ನು ಕಂಡರೆ ಎಲ್ಲರೂ ಸಾಮಾನ್ಯವಾಗಿಯೇ ಭಕ್ತಿ ತುಂಬಿದ ಭಯ ಹಾಗೂ ಗೌರವದಿಂದ ದೂರ ಉಳಿಯುತ್ತಾರೆ.

ಆದರೆ ಶ್ರೀಗಳು ಕ್ರಿಕೆಟ್ ಆಡುವ ಮೂಲಕ ವಿದ್ಯಾರ್ಥಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಮಠದ ವಿದ್ಯಾರ್ಥಿಗಳು ಅವರನ್ನು ಮಠದ ಶ್ರೀಗಳಾಗಿ ಮಾತ್ರವೇ ನೋಡಿದ್ದರು. ಆದರೆ ಮೊದಲ ಬಾರಿಗೆ ಅವರಲ್ಲಿನ ಒಬ್ಬ ಆಟಗಾರನನ್ನು ನೋಡುವ ಅವಕಾಶ ಅಲ್ಲಿನ ವಿದ್ಯಾರ್ಥಿಗಳಿಗೆ ದೊರೆತಿದೆ. ಸ್ವಾಮೀಜಿ ಅವರು ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ ರೀತಿಯನ್ನು ನೋಡಿ ಮಕ್ಕಳು ಆಶ್ಚರ್ಯ ಪಟ್ಟಿದ್ದಾರೆ. ಅವರಿಗೆ ಕ್ರಿಕೆಟ್ ಆಡಲು ಬರುವುದಿಲ್ಲವೇನೋ ಎಂದು ಕೊಂಡವರಿಗೆಲ್ಲಾ ಸ್ವಾಮೀಜಿಗಳು ತಮ್ಮ ಆಟದ ಮೂಲಕ ತನಗೂ ಕ್ರಿಕೆಟ್ ಬರುತ್ತದೆ ಎಂದು ತೋರಿಸಿದ್ದಾರೆ.

ನಿನ್ನೆ ಅಂದರೆ ಬುಧವಾರ ಸಂಜೆ ಮಠದಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್‌ ಆಡುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಶ್ರೀಗಳು ಅಲ್ಲಿನ ಮಕ್ಕಳೊಂದಿಗೆ ಸೇರಿ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿ ಸಿಕ್ಸರ್ ಗಳನ್ನು ಹೊಡೆದು ಮಕ್ಕಳಲ್ಲಿ ಕುತೂಹಲ ಮೂಡಿಸಿದ್ದಾರೆ. ಶ್ರೀಗಳವರು ಭರ್ಜರಿ ಬ್ಯಾಟಿಂಗ್ ಮಾಡುವುದನ್ನು ನೋಡಿ ಮಕ್ಕಳು ಕೂಡಾ ಬಹಳಾ ಸಂಭ್ರಮ ಹಾಗೂ ಸಂತಸದಿಂದ ಕುಣಿದಾಡಿದ್ದಾರೆ.

https://m.facebook.com/story.php?story_fbid=2815721595110632&id=100000184574638

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here