ಸೌಂದರ್ಯ ಸ್ಪರ್ಧೆನೋ ಅಥವಾ ದೇಶ ಸೇವೆನೋ ಎಂಬ ಒಂದು ಆಯ್ಕೆ ಬಂದಾಗ ಸೌಂದರ್ಯ ಸ್ಪರ್ಧೆ ಅಲ್ಲ, ದೇಶ ಮುಖ್ಯ ಎಂದು ಆರಿಸಿಕೊಂಡ ಒಬ್ಬ ಸೌಂದರ್ಯ ಸರ್ಧೆಯ ವಿಜೇತಳನ್ನು ಕುರಿತಾಗಿ ಕೇಳಿದಾಗ ಒಂದು ಸಲ ನಮಗೂ ಕೂಡಾ ಆಕೆಗೆ ತನ್ನ ದೇಶದ ಮೇಲೆ ಇರುವ ಅಭಿಮಾನಕ್ಕೆ ನಾವು ಕೂಡಾ ಮೆಚ್ಚುಗೆ ನೀಡಬೇಕು ಎನಿಸದೇ ಇರದು. ಹಾಗಾದರೆ ಯಾರು ಅವರು? ಎಂದು ತಿಳಿಯುವ ಕುತೂಹಲ ನಿಮಗೆ ಇದ್ದರೆ ಬನ್ನಿ ತಿಳಿಯೋಣ. ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಆಗಿರುವ ಆ ಸೌಂದರ್ಯ ಸ್ಪರ್ಧಿಯು ಇಂದು ಹೇಗೆ ದೇಶ ಸೇವೆ ಮಾಡಿದ್ದಾರೆ ಎನ್ನುವುದನ್ನು ನೋಡೋಣ.

ಭಾರತದ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿರುವ ಗರಿಮಾ ಯಾದವ್ ಇಂತಹ ಒಂದು ಹಿರಿಮೆಯನ್ನು ತನ್ನದಾಗಿಸಿಕೊಂಡಿರುವ ಮಹಿಳೆ. ಗರಿಮಾ ಯಾದವ್ ಅವರು ನವೆಂಬರ್ 2017 ರಲ್ಲಿ ಇಂಡಿಯಾ ಮಿಸ್ ಚಾರ್ಮಿಂಗ್ ಫೇಸ್ ಎಂಬ ಸೌಂದರ್ಯ ದ ಗರಿಯನ್ನು ಮುಡಿಗೇರಿಸಿಕೊಂಡು, ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಮುಂದಿನ ಹಂತದ ಸ್ಪರ್ಧೆ ಇಟಲಿಯಲ್ಲಿ ನಡೆಯಲಿತ್ತು. ಆದರೆ ಗರಿಮಾ ಅವರು ಸೌಂದರ್ಯ ಸ್ಪರ್ಧೆಯ ಬದಲು ಚೆನ್ನೈನಲ್ಲಿ ಓಟಿಎ ಗೆ ಸೇರುವ ಕಡೆಗೆ ಒಲವು ತೋರಿದರು‌.

ಗರಿಮಾ ಐಎಎಸ್ ಆಗಬೇಕೆಂದು ಕನಸು ಕಂಡವರು.
ಆದರೆ ಐಎಎಸ್ ಮೈನ್ಸ್ ಅನ್ನು ಪೂರ್ಣ ಮಾಡಲಾಗಲಿಲ್ಲ. ಅಲ್ಲದೆ ಆಕೆ ಸಿಡಿಎಸ್ ಪರೀಕ್ಷೆಯನ್ನು ಪೂರ್ಣಗೊಳಿಸಿದರು. ಆಲ್ ಇಂಡಿಯಾ ರ್ಯಾಂಕ್ ಆಫ್ ಆಫಿಸರ್ಸ್ ಟ್ರೈನಿಂಗ್ ಫಾರ್ ವುಮೆನ್ ನಲ್ಲಿ ಎರಡನೇ ರ್ಯಾಂಕ್ ಪಡೆದರು‌. ಈಗ ಲೆಫ್ಟಿನೆಂಟ್ ಗರಿಮಾ ಯಾದವ್ ಸಿಡಿಎಸ್ 1 2017 ರಲ್ಲಿ ಎಐಆರ್ -2 ಅನ್ನು ಪಡೆದುಕೊಂಡು ಒಟಿಎ ಚೆನ್ನೈಗೆ ಸೇರಿ ಸೇನಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here