ಇತ್ತೀಚಿನ‌ ದಿನಗಳಲ್ಲಿ ಆಹಾರ ಪದ್ಧತಿ ಹಾಗೂ ರಾಸಾಯನಿಕಗಳ‌ ಪ್ರಭಾವ ಹಾಗೂ ಮಾಲಿನ್ಯದ ಪರಿಣಾಮದಿಂದಾಗಿ , ಯುವ ಜನರ ತಲೆಗೂದಲು ಕೂಡಾ ಬೇಗ ನರೆಯ ತೊಡಗಿದ್ದು, ಬಿಳಿ ಕೂದಲಿನ‌ ಸಮಸ್ಯೆ ಹಲವರನ್ನು ಕಾಡುತ್ತಿದೆ. ಕೂದಲನ್ನು ಕಪ್ಪು ಮಾಡುವ ಅನೇಕ ಹೇರ್ ಡೈಗಳು, ಹೇರ್ ಕಲರ್ ಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿದೆ. ಆದರೆ ಅವುಗಳಲ್ಲಿನ ರಾಸಾಯನಿಕಗಳಿಂದ ಕೆಲವರಿಗೆ ತಮ್ಮ ಕೂದಲು ಉದುರುವ ಹಾಗೂ ಬೇರೆ ಸೈಡ್ ಎಫೆಕ್ಟ್ ಗಳ ಭಯ ಇದ್ದೇ ಇದೆ. ಅಂತಹವರಿಗಾಗಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿಕೊಳ್ಳಲು ಕೆಲವು ಪ್ರಾಕೃತಿಕ ಸಾಮಗ್ರಿಗಳು ಲಭ್ಯವಿದ್ದು, ಅದನ್ನು ಉಪಯೋಗಿಸುವ ವಿಧಾನ ಈ ಕೆಳಕಂಡಂತೆ ಇದೆ.

ಕೂದಲಿಗೆ ಹೆನ್ನಾ ಅಥವಾ ಮೆಹಂದಿ ಹಾಕುವ ವಿಧಾನ ಬಹಳ ಹಿಂದಿನಿಂದಲೂ ಹಲವರು ಬಳಸಿಕೊಂಡು ಬಂದಿದ್ದಾರೆ. ಆದರೆ ಹೆನ್ನಾ ಬಳಸಿದ ನಂತರ ಕೂದಲು ಕೆಂಪಾಗಿ ಕಾಣುತ್ತದೆ ಎಂಬ ಆತಂಕ ಬೇರೆ. ಆದರೆ ಬಿಳಿ ಕೂದಲಿಗಿಂತ ಕೆಂಬಣ್ಣದ ಕೂದಲು ಪರವಾಗಿಲ್ಲ ಎಂದು ಬಗೆದು, ಒಲ್ಲದ ಮನಸ್ಸಿನಿಂದ ಸುಮ್ಮನಾಗುತ್ತಾರೆ. ಆದರೆ ಅವರು ಮತ್ತೊಂದು ಸರಳ ವಿಧಾನ ಅನುಸರಿಸುವ ಮೂಲಕ ತಮ್ಮ ಕೂದಲನ್ನು ಗಾಢ ಕಪ್ಪು ಬಣ್ಣಕ್ಕೆ ತಿರುಗಿಸಬಹುದು. ಈ ಪ್ರಕ್ರಿಯೆಗೆ ನಾವು ಎರಡು ಸರಳ ವಿಧಾನಗಳನ್ನು ಅನುಸರಿಸಬೇಕಾಗಿದೆ. ಹಾಗಾದರೆ ಅದೇನು ಎಂಬುದಕ್ಕೆ ಇಲ್ಲಿದೆ ಮಾಹಿತಿ.

*ಮೊದಲಿಗೆ ಹೆನ್ನಾ ಅಥವಾ ಮೆಹಂದಿಯನ್ನು ನೀರಿನೊಂದಿಗೆ ಬೆರೆಸಿ ಒಂದರ್ಧ ಗಂಟೆ ಅದನ್ನು ಹಾಗೇ ಬಿಡಬೇಕು.
*ನಂತರ ಅದನ್ನು ತಲೆಗೂದಲಿಗೆ ಹಾಕಿ , ಅದು ಕೂದಲಿಗೆ ಹಿಡಿಯಲು , ಅದನ್ನು ಒಣಗಲು ಬಿಡಿ.
* ಮೆಹೆಂದಿ ಕೂದಲಿಗೆ ಹಿಡಿದ ಮೇಲೆ, ಬೆಚ್ಚಗಿನ ನೀರಿನಿಂದ, ಶ್ಯಾಂಪು ಬಳಸದೆ ಕೂದಲನ್ನು ತೊಳೆಯಬೇಕು.
* ಕೂದಲು ಒಣಗಿದ ಮೇಲೆ ಬಿಳಿ ಕೂದಲು

ಮೆಹಂದಿಯಿಂದಾಗಿ ಕೆಂಪು ಬಣ್ಣ ಪಡೆಯುತ್ತದೆ. ‌
ಇದು ಎಲ್ಲರಿಗೂ ತಿಳಿದ ವಿಧಾನ. ಈಗ ಈ ವಿಧಾನ ಅನುಸರಿಸಿದ ಒಂದು ದಿನ ಕಳೆದ ಮೇಲೆ

*ಮೊದಲಿಗೆ ಇಂಡಿಗೋ ಪೌಡರ್ ಅಥವಾ ನೇರಳೆ ಎಲೆಗಳನ್ನು ಒಣಗಿಸಿ ತಯಾರಾದ ಪುಡಿಯನ್ನು ತೆಗೆದುಕೊಳ್ಳಿ. ( ಮಾರುಕಟ್ಟೆಯಲ್ಲಿ ಇಂಡಿಗೋ ಪುಡಿ ದೊರೆಯುತ್ತದೆ)
* ನೀರನ್ನು ಬೆಚ್ಚಗೆ ಕಾಯಿಸಿ, ನಿಮ್ಮ ಕೂದಲಿನ‌ ಅವಶ್ಯಕತೆ ಗೆ ತಕ್ಕ ಪ್ರಮಾಣದಲ್ಲಿ ಇಂಡಿಗೋ ಪುಡಿಯನ್ನು ತೆಗೆದುಕೊಂಡು , ಬೆಚ್ಚಗಿನ ನೀರಿನಲ್ಲಿ ಬೆರಸಿ, ಅದನ್ನು ಪ್ಲಾಸ್ಟಿಕ್ ಅಥವಾ ಇನ್ನಾವುದೇ ವಸ್ತು ಬಳಸಿ ಗಾಳಿ ಒಳಗೆ ಹೋಗದಂತೆ ಅರ್ಧ ಗಂಟೆ ಮುಚ್ಚಿಡಿ.
* ಆಮೇಲೆ ಕವರ್ ತೆಗೆದಾಗ ಇಂಡಿಗೋ ಪುಡಿಯ ಪೇಸ್ಟ್ ಕಪ್ಪು ಪದರದೊಂದಿಗೆ ಕಾಣುತ್ತದೆ. ಆಗ ಅದನ್ನು ನಿಮ್ಮ ಕೂದಲಿಗೆ ಹಾಕಿ.
* ನಂತರ ಒಂದು ಗಂಟೆಯ ಕಾಲ ಬಿಟ್ಟು, ಶ್ಯಾಂಪು ಬಳಸದೆ ಕೂದಲನ್ನು ತೊಳೆಯಿರಿ.ನಂತರ……

* ಮೆಹಂದಿ ಬಳಸಿ ಕೆಂಪಗಾಗಿದ್ದ ನಿಮ್ಮ ಬಿಳಿಯ ಕೂದಲೆಲ್ಲಾ ಒಂದು ದಿನ ಕಳೆಯುವುದರೊಳಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಬೇರೆ ರಾಸಾಯನಿಕ ಹೇರ್ ಡೈ ಗಳಿಗಿಂತ ಹೆಚ್ಚು ದಿನಗಳವರೆಗೆ ಇದರ ಪ್ರಭಾವ ಇರುವುದರ ಜೊತೆಗೆ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ ಹಾಗೂ ಕೂದಲು ಸುಮಾರು ಒಂದೂವರೆ ತಿಂಗಳಿಂದ , ಎರಡು ತಿಂಗಳ ವರೆಗೆ ಕಪ್ಪಾಗಿಯೇ ಇರುತ್ತದೆ. ಈ ಸರಳ ವಿಧಾನದಿಂದ ದೀರ್ಘ ಕಾಲದವರೆಗೆ ಕೂದಲನ್ನು ಕಪ್ಪಾಗಿಸಲು ಸಾಧ್ಯವಿದೆ. ಆದರೆ ಇಂಡಿಗೋ ಪೇಸ್ಟ್ ಹಾಕುವಾಗ ಬರಿಯ ಕೈಯಿಂದ ಮುಟ್ಟಿದರೆ ನಿಮ್ಮ ಕೈಗಳು ಕಪ್ಪಾಗುತ್ತವೆ. ಆದ್ದರಿಂದ ಕೈ‌ ಚೀಲ ಧರಿಸಿ, ಸೂಕ್ತ ಬ್ರಷ್ ನಿಂದ ಕೂದಲ‌‌ ಮೇಲೆ ಇದನ್ನು ‌ಹಾಕಿಕೊಳ್ಳಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here