ಜೇನು ಅಥವಾ ಹನಿ ಇದು ನಮ್ಮ ಜೀವನದಲ್ಲಿ ಬಹಳ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಜೇನು ಹಿಂದಿನಿಂದಲೂ ಆರೋಗ್ಯ ವರ್ಧಕ ಎಂದು ಹರಿಯರು ಹೇಳುತ್ತಲೇ ಬಂದಿದ್ದು , ಅದರಲ್ಲಿ ಔಷಧೀಯ ಹಾಗೂ ಸೌಂದರ್ಯ ವರ್ಧಕ ಗುಣಗಳೂ ಕೂಡಾ ಇದೆ ಎಂಬುದು ಬಹುತೇಕ ಇಂದು ಎಲ್ಲರಿಗೂ ತಿಳಿದ ವಿಷಯ. ಜೇನನ್ನು ಬಳಸಿಕೊಂಡು, ಅದಕ್ಕೆ ನಮ್ಮ‌ ಮನೆಗಳಲ್ಲಿ ಲಭ್ಯವಿರುವ ಇನ್ನೂ ಕೆಲವು ಸಾಮಗ್ರಿಗಳನ್ನು ಸೇರಿಸಿ , ಅದನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಕಾಂತಿಯುಕ್ತ , ಸುಂದರ ತ್ವಚೆ ಹಾಗೂ ರೇಷ್ಮೆಯಂತ ಕೂದಲು ನಿಮ್ಮದಾಗಿತ್ತದೆ. ಹಾಗಾದರೆ ಅದು ಹೇಗೆ ಎಂಬುದಕ್ಕೆ ಇಲ್ಲಿದೆ , ಸರ್‌ ಹಾಗೂ ಸುಲಭ ವಿಧಾನಗಳು…

 

1. ಒಂದು ಸ್ಪೂನ್ ಜೇನು ತುಪ್ಪ, ಒಂದು ಸ್ಪೂನ್ ಹಾಲು, ಒಂದು ಸ್ಪೂನ್ ಅರಿಷಿಣ ಹಾಗೂ ಅರ್ಧ ಸ್ಪೂನ್ ನಿಂಬೆರಸವನ್ನು ಮಿಶ್ರಣ ಮಾಡಿ, ನಿಮ್ಮ ಮುಖಕ್ಕೆ ಹಚ್ಚಿ ಕೊಂಡು, ಸುಮಾರು 20 ರಿಂದ 25 ನಿಮಿಷ ಬಿಟ್ಟು ಮುಖ ತೊಳೆಯಿರಿ. ದಿನ‌ ಬಿಟ್ಟು ದಿನ ಹೀಗೆ ಮಾಡಿದರೆ , ನಿಮ್ಮ ಮುಖದ ಮೇಲಿನ ಮೊಡವೆಗಳು ಹಾಗೂ ಆಕ್ನೆ ಗಳಂತಹವುಗಳು ಬಹು ಬೇಗ ಕಡಿಮೆಯಾಗುತ್ತವೆ.

2. ನಾಲ್ಕು ಸ್ಪೂನ್ ಜೇನು, ಅರ್ಧ ಕಪ್ ಮೊಸರು, ಎರಡು ಸ್ಪೂನ್ ನಿಂಬೆ ರಸ, ಎರಡು ಸ್ಪೂನ್ ಗ್ಲಿಸರಿನ್ ಹಾಗೂ ಎರಡು ಸ್ಪೂನ್ ಮುಲ್ತಾನಿ ಮಿಟ್ಟಿ ಹಾಕಿ ಮಿಶ್ರಣ ಮಾಡಿ, ಅದನ್ನು ‌ತಲೆ ಕೂದಲಿಗೆ ಹಾಕಿ, ನಂತರ ಶ್ಯಾಂಪುವಿನಿಂದ ರ ತೊಳೆಯಿರಿ, ವಾರಕ್ಕೊಮ್ಮೆ ಹೀಗೆ ಮಾಡಿದರೆ ನಿಮ್ಮ ಕೂದಲು ರೇಷ್ಮೆ ರೀತಿ ನಯವಾಗಿ, ಹೊಳಪು ಪಡೆದುಕೊಳ್ಳುತ್ತದೆ.

3. ಎರಡು ಸ್ಪೂನ್ ಜೇನು ಹಾಗೂ ಒಂದು ಸ್ಪೂನ್ ಹಾಲನ್ನು ಮಿಶ್ರತ ಮಾಡಿ ಪ್ರತಿದಿನ ಸುಮಾರು ಇಪ್ಪತ್ತು ನಿಮಿಷ ಬಿಟ್ಟು, ಮುಖ ತೊಳೆಯುವುದರಿಂದ ನಿಮ್ಮ ಮುಖಕ್ಕೆ ಸ್ವಾಭಾವಿಕ ಕಾಂತಿ ದೊರೆಯುವುದಲ್ಲದೆ, ಚರ್ಮ ಮೃದುವಾಗುತ್ತದೆ. ಈ ಮೂರು ವಿಧಾನಗಳನ್ನು ಅನುಸರಿಸಿದರೆ ಹೊಳೆಯುವ ಮುಖ ಹಾಗೂ ಸುಂದರ ಕಾಂತಿಯುತ ಕೇಶ ರಾಶಿ ನಿಮ್ಮದಾಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here