ಮನೆಯ ಹಾಸಿಗೆಯ ಮೇಲೆ ನಾವು ಸಾಕುವ ಪ್ರಾಣಿಗಳು ಮಲಗುವುದು ಸಹಜ. ನಮಗೂ ಕೂಡಾ ನಮ್ಮ ಪ್ರೀತಿಯ ಪ್ರಾಣಿಗಳು ಹಾಸಿಗೆ ಮೇಲೆ ಮಲಗಿದಾಗ ನಮಗೂ ಬೇಸರ ಎನಿಸುವುದಿಲ್ಲ. ಆದರೆ ಹೀಗೆ ನಾವು ಸಾಕಿದ ಪ್ರಾಣಿಗಳ ಬದಲಿಗೆ ಹಾಸಿಗೆ ಮೇಲೆ ಹಾವೊಂದು ಬಂದರೆ ಹೇಗಿರುತ್ತದೆ ಎಂದು ಊಹಿಸಿದರೆ ಮೈ ಜುಂ ಎನ್ನುತ್ತದೆ ಅಲ್ಲವೇ? ಆದರೆ ಇಂತಹ ಒಂದು ವಿಚಿತ್ರ ಘಟನೆ ನಡೆದಿದೆ.
ಇಂತಹ ಒಂದು ವಿಲಕ್ಷಣ ಘಟನೆ ನಡೆದಿರುವುದು ದೂರದ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ.
ಸನ್ ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ ಎಂಬ ಹಾವು ಹಿಡಿಯುವ ತಂಡವೊಂದು ಈ ವಿಷಯ ಹಾಗೂ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಈ ವಿಷಯವನ್ನು ಫೇಸ್ಬುಕ್ ನಲ್ಲಿ ನೋಡಿದ ಅನೇಕರು ಹೌಹಾರಿದ್ದಾರೆ. ಹಾವು ಮನೆಯೊಳಗೆ ಸೀಲಿಂಗ್ ನಿಂದ ತೂಗಿ ಬಿಡಲಾಗಿದ್ದ ದೀಪದ ಮೇಲೆ ನೇತಾಡುತ್ತಿತ್ತು ಎನ್ನಲಾಗಿದೆ. ಹಾಗೆ ನೇತಾಡುತ್ತಿದ್ದ ಹಾವು ನಿಯಂತ್ರಣ ತಪ್ಪಿ ಹಾಸಿಗೆಯ ಮೇಲೆ ಬಿದ್ದ ಘಟನೆ ಇದೆಂದು ಫೇಸ್ ಬುಕ್ಕಿನಲ್ಲಿ ಸವಿವರವಾಗಿ ಬ ವಿವರಿಸಲಾಗಿದೆ. ಅದೃಷ್ಟ ಏನೆಂದರೆ ಹಾವು ಹಾಸಿಗೆಯ ಮೇಲೆ ಬಿದ್ದ ಸಮಯದಲ್ಲಿ ಹಾಸಿಗೆಯ ಮೇಲೆ ಯಾರೂ ಇರಲಿಲ್ಲ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಆ ಮನೆಯವರಾದ ಜಸ್ಟಿನ್ ವಿಷಯವನ್ನು ಹಾವು ಹಿಡಿಯುವ ಟೀಮ್ ನವರಿಗೆ ತಿಳಿಸಿದ್ದಾರೆ.

ಟೀಂ ಹಾವನ್ನು ಹಿಡಿಯಲು ಬಂದಾಗ ಹಾವು ಹಾಸಿಗೆಯ ಮೇಲೆ ವಿಶ್ರಮಿಸುತ್ತಿತ್ತು ಎಂದಿರುವ ಟೀಂ ಹಾವನ್ನು ಹಿಡಿದು ಗ್ಲಾಸ್ ಹೌಸ್ ಮೌಂಟೇನ್ಸ್ ನ ಅರಣ್ಯ ವಲಯದಲ್ಲಿ ಅದನ್ನು ಬಿಟ್ಟಿರುವುದಾಗಿ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಅವರು ಹಾವಿನ ಫೋಟೋಗಳನ್ನು ಹಾಕಿ , ಅದರ ಬಗ್ಗೆ ಬರೆದಿರುವ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆದಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here