ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡರು ತಾವು ಮತದಾನ ಮಾಡಲು ಮತಗಟ್ಟೆಗೆ ಹೋಗುವ ಮೊದಲೇ ತಮ್ಮ ಕೈಗೆ ಶಾಯಿ ಹಾಕಿ ಹೋಗಿದ್ದಾರೆಂದು ಆರೋಪ‌‌ ಮಾಡಿರುವ ಘಟನೆಯು ವರದಿಯಾಗಿದೆ. ಮತದಾರರು ಪ್ರತಿಪಕ್ಷಗಳಿಗೆ ಮತದಾನ ಮಾಡುತ್ತಾರೆ ಎಂಬ ಅನುಮಾನದ ಆಧಾರದಲ್ಲಿ ಹಳ್ಳಿಯೊಂದರಲ್ಲಿ ಮತದಾರರ ಕೈಗೆ ಮತಗಟ್ಟೆಗೆ ಬರುವ ಮೊದಲೇ ಶಾಯಿ ಹಚ್ಚಲಾಗಿದೆಯೆಂಬ ಗಂಭೀರ ಆರೋಪವನ್ನು ಈಗ ಬಿಜೆಪಿ ಎದುರಿಸುತ್ತಿದೆ. ಮತಗಳು ಎಲ್ಲಿ ಕೈ ಬಿಟ್ಟು ಹೋಗುತ್ತವೋ ಎಂಬ ಆತಂಕದಿಂದ ಬಿಜೆಪಿ ನಾಯಕರು ಮತದಾರರ ಬೆರಳಿಗೆ ಮತದಾನಕ್ಕೂ ಮೊದಲೇ ಶಾಯಿ ಹಾಕಿದ್ದಾರೆಂಬ ಆರೋಪಗಳನ್ನು ಮಾಡಲಾಗಿದೆ.

ಈ ಘಟನೆಗೂ ಮೊದಲು ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಹಾಗೂ ಎಸ್‌ಪಿ ಮುಖಂಡರಾದ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಅವರು ಬಿಜೆಪಿಯ ಮೇಲೆ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಬಿಜೆಪಿಯೇತರ ಮತದಾರರು ಮತಗಟ್ಟೆಗೆ ಬರುವುದನ್ನು ತಡೆಯುವ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದ್ದರು. ಅವರು ಮಾಡಿದ್ದ ಆರೋಪಕ್ಕೆ ಪೂರಕವೆಂಬಂತೆ ಈಗ ಬಿಜೆಪಿಯ ಮೇಲೆ ಈ ಹೊಸ ಆರೋಪ ಕೇಳಿಬಂದಿದೆ.

ಘಟನೆ ನಡೆದಿರುವುದು ಉತ್ತರ ಪ್ರದೇಶದ ಚಾಂಡೌಲಿಯ ಜೀವನಪುರದಲ್ಲಿ. ಇಲ್ಲಿ ಮತದಾರರ ಬೆರಳಿಗೆ ಶಾಯಿಯನ್ನು ಅವರು ಮತದಾನ ಮಾಡುವ ಮೊದಲೇ ಹಾಕಲಾಗಿದೆ.‌ ಮತಗಟ್ಟೆಗೆ ಬಂದ ಮತದಾರರು ಬಂದಾಗ ಅವರ ಬೆರಳ ಮೇಲೆ ಈಗಾಗಲೇ ಶಾಯಿ ಇರುವುದನ್ನು ಗಮನಿಸಿ ಅದರ ಬಗ್ಗೆ ವಿಚಾರಿಸಿದಾಗ, ಬಿಜೆಪಿ ನಾಯಕರು ಬಂದು ತಮ್ಮ ಬೆರಳಿಗೆ ಶಾಯಿ ಹಾಕಿ ಕೈಗೆ 500 ರೂ ನೋಟುಗಳನ್ನು ಇಟ್ಟಿದ್ದಾರೆಂದು ಎಂದು ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here