ಮುಂಬೈನಲ್ಲಿ ರೈಲ್ವೆ ಹಳಿ ದಾಟುವ ಸಂಧರ್ಭದಲ್ಲಿ 83 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದು, ಅವರ ಹೆಸರು ಬೀರ್ ಬೀಚಂದ್ ಆಜಾದ್ ಎನ್ನುವವರಾಗಿದ್ದು, ಆತ ಭಿಕ್ಷಾಟನೆ ಮಾಡಿ ಜೀವನವನ್ನು ನಡೆಸುತ್ತಿದ್ದರು. ಆದರೆ ಸಾವಿನ‌ ನಂತರ ಆತನ ಬಗ್ಗೆ ಒಂದು ವಿಸ್ಮಯಕಾರಿ ಸಂಗತಿ ಹೊರ ಬಂದಿದೆ. ಅದೇನೆಂದರೆ ಆತ ವೃತ್ತಿಯಲ್ಲಿ ಭಿಕ್ಷುಕನಾದರೂ ಆತ ಒಬ್ಬ ಲಕ್ಷಾಧಿಕಾರಿಯೆಂಬ ಅಚ್ಚರಿಯ ಮಾಹಿತಿ ದಕ್ಕಿದೆ ಪೋಲಿಸರಿಗೆ. ಭಿಕ್ಷುಕ ಲಕ್ಷಾಧಿಕಾರಿಯಾದ ಆ ಘಟನೆ ಏನೆಂದು ತಿಳಿಯೋಣ ಬನ್ನಿ.

ವೃದ್ಧ ಸತ್ತ ವಿಷಯವನ್ನು ಆತನ ಕುಟುಂಬದವರಿಗೆ ತಿಳಿಸಲು ಪೊಲೀಸರು ಆತನು ವಾಸವಿದ್ದ ಗುಡಿಸಲ ಬಳಿಗೆ ತೆರಳಿದ್ದಾರೆ. ಆದರೆ ಪೋಲಿಸರಿಗೆ ಅಲ್ಲಿ ಯಾರೂ ದೊರೆಯದ ಕಾರಣ, ಪೊಲೀಸರು ಆತನ ಗುಡಿಸಲಿನಲ್ಲಿ ಹುಡುಕಾಟ ನಡೆಸಿದಾಗ ಅಲ್ಲಿ ಹುಡುಕಾಟ ನಡೆಸಿದಾಗ, ಒಂದು ಹಳೆಯ ಹಂಡೆಯಲ್ಲಿ ಕೂಡಿಟ್ಟ ನಾಣ್ಯಗಳು ಹಾಗೂ ಕೆಲವು ಎಫ್.ಡಿ. ದಾಖಲೆಗಳು ಸಿಕ್ಕಿವೆ. ದೊಡ್ಡ ಸಂಖ್ಯೆಯಲ್ಲಿ ಇದ್ದ ನಾಣ್ಯಗಳನ್ನು ನಿಧಾನವಾಗಿ ಲೆಕ್ಕಿಸಿದಾಗ ಅದು 1 ಲಕ್ಷದ 77 ಸಾವಿರ ರೂಪಾಯಿಗಳು ಇರುವುದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ.

ಅಲ್ಲಿದ್ದ ಎಫ್.ಡಿ. ಮೌಲ್ಯವು ಸುಮಾರು 8 ಲಕ್ಷದ 77 ಸಾವಿರ ರೂಪಾಯಿಗಳಾಗಿರುವುದು ತಿಳಿದು ಬಂದಿದೆ.
ಬೀರ್ ಬೀಚಂದ್ ಆಜಾದ್ ಅವರ ಗುಡಿಸಲಿನಲ್ಲಿ ಅವರ ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಸೀನಿಯರ್ ಸಿಟಿಜನ್ ಕಾರ್ಡ್ ಕೂಡಾ‌ ದೊರೆತಿದೆ. ಸಿಕ್ಕಿರುವ ದಾಖಲೆಗಳ ಅನ್ವಯ ಆತ ರಾಜಸ್ಥಾನದ ಮೂಲದವರು ಎಂದು ತಿಳಿದು ಬಂದಿದ್ದು, ಪೋಲಿಸರು ಅವರ ಕುಟುಂಬದವರನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here