ಬೆಳ್ತಂಗಡಿ: ಕಳೆದ ಹಲವಾರು ದಿನಗಳಿಂದ ಸುರಿದ ಬಾರಿ ಮಳೆಯಿಂದ  ರಾಜ್ಯದ  ಹಲವು ಭಾಗಗಳಲ್ಲಿ ಅಪಾರ ಹಾನಿಗೊಳಗಾಗಿವೆ. ನೂರಾರು ಜನರುತಮ್ಮ ಮನೆ ಜಮೀನು ಜಾನುವಾರುಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.

ಪ್ರವಾಹ ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪಗಳ ಸಮಯದಲ್ಲಿ ಸಾಮಾನ್ಯವಾಗಿ ಗಂಜಿ ಕೇಂದ್ರಗಳನ್ನು ತೆರೆದು ಜನರಿಗೆ ಆಶ್ರಯ ನೀಡಲಾಗುತ್ತದೆ, ಆದರೆ ಬೆಳ್ತಂಗಡಿ ತಾಲೂಕಿನ ಯುವ ಶಾಸಕರಾದ ಹರೀಶ್ ಪೂಂಜಾ ರವರು ತಮ್ಮ ಕ್ಷೇತ್ರದಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ಗಂಜಿ ಕೇಂದ್ರದ ಬದಲು ಕಾಳಜಿ ಕೇಂದ್ರ ಎಂಬ ವಿಶೇಷ ಕೇಂದ್ರಗಳನ್ನು ತೆಗೆದು ನಿರಾಶ್ರಿತರನ್ನು ವಿಶೇಷವಾಗಿ ಕಾಳಜಿ ತೆಗೆದುಕೊಂಡು,  ತಾಲೂಕಿನ ಜನರಿಗೆ ನೆರವಾಗಿದ್ದಾರೆ.

ಗಂಜಿ ಕೇಂದ್ರವೆಂದರೆ ಅದು ನಿರ್ಗತಿಕರಿಗಾಗಿ ಇರುವ ಕೇಂದ್ರ, ಆದರೆ ಮಳೆಯ ಪ್ರವಾಹದಲ್ಲಿ ಒದ್ದಾಡುತ್ತಿರುವವರು ಯಾರು ನಿರ್ಗತಿಕರಲ್ಲ, ಅವರೆಲ್ಲ ನಮ್ಮ ನಾಡಿನ ಅನ್ನದಾತ ಶ್ರಮಿಕರು ಇಂತಹ ಸಮಯದಲ್ಲಿ ಅವರನ್ನು ಕಾಳಜಿ ಮಾಡುವ ಕೇಂದ್ರಗಳೇ “ಕಾಳಜಿ ಕೇಂದ್ರಗಳು”. ವಿಶೇಷ ರೀತಿಯಲ್ಲಿ ಆಶ್ರಯ ಕಲ್ಪಿಸಲು ಮುಂದಾಗಿರುವ  ಹರೀಶ್ ಪೂಂಜಾ ರವರಿಗೆ ಭಾರಿ ಪ್ರಶಂಸೆಗಳು ಕೇಳಿ ಬಂದಿವೆ.

ಕರ್ನಾಟಕದ ಮುಖ್ಯಮಂತ್ರಿಗಳು ತಾಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿಸಿ ಸಕಾಲಿಕ  ಸೂಕ್ತ ಪರಿಹಾರ ಒದಗಿಸಲು ಒತ್ತಾಯಿಸಿರುತ್ತಾರೆ. ಜನತೆಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಕಳೆದ ಹಲವಾರು ದಿನಗಳಿಂದ ಹಗಲಿರುಳು ತನ್ನ ಕ್ಷೇತ್ರದ ಜನತೆಯ ಕಾಳಜಿ ವಹಿಸಿ ಕೆಲಸ ಮಾಡುತ್ತಿರುವ ಹರೀಶ್ ಪೂಂಜಾ  ಇತರ ಎಲ್ಲಾ ಶಾಸಕರು ಅಧಿಕಾರಿಗಳಿಗೆ ಮಾದರಿ ಎನಿಸಿದ್ದಾರೆ. ಶ್ರೀ ಹರೀಶ್ ಪೂಂಜ ಇವರು ತಾಲೂಕಿನ ಜನತೆಗೆ ಒಂದು ವರದಾನ ಎನ್ನುತ್ತಾರೆ ಹಲವರು. .

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here