ಕೊರೊನಾ ವೈರಸ್ ಭೀತಿಯ ಮುನ್ನೆಚ್ಚರಿಕೆಯ ಕ್ರಮವಾಗಿ ಸರ್ಕಾರ ರಾಜ್ಯದಲ್ಲಿ ಒಂದು ವಾರ ಬಂದ್ ಘೋಷಣೆ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಸೋಂಕು ಹರಡಬಹುದೆಂಬ ಭೀತಿಯಿಂದ ಜನರು ಹೊರಗೆ ಓಡಾಡುವುದನ್ನು ಕಡಿಮೆ ಮಾಡಿದ್ದಾರೆ. ರಸ್ತೆಗಳು ಕೂಡಾ ಖಾಲಿ ಖಾಲಿಯಾಗಿವೆ. ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಕೂಡಾ ಜನರ ಪ್ರಮಾಣ ಇಳಿಮುಖವಾಗಿದೆ. ಇನ್ನು ಸದಾ ಗಿಜಿಗಿಟ್ಟುವ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರು ಕೂಡಾ ಕಳೆದ ಕೆಲವು ದಿನಗಳಿಂದ ಸ್ತಬ್ಧವಾಗಿದ್ದು, ಬೆಂಗಳೂರಿನ ಚಿತ್ರಣವೇ ಬದಲಾಗಿ, ಎಷ್ಟೋ ವರ್ಷಗಳ ಹಿಂದಿನ ಚಿತ್ರಣ ಕಣ್ಮುಂದೆ ಬರುವಂತೆ ರಸ್ತೆಗಳು ಖಾಲಿ ಖಾಲಿಯಾಗಿವೆ.

ಇನ್ನು ಈ ಕೊರೊನಾ ಸೋಂಕು ಭೀತಿ ನಗರದಲ್ಲಿ ಹೆಚ್ಚುತ್ತಲೇ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಪ್ರಮಾಣ ಕುಸಿತಗೊಂಡಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ವರದಿಯಲ್ಲಿ ತಿಳಿಸಿದೆ. ಬೆಂಗಳೂರು ನಗರದಲ್ಲಿ ಸದ್ಯಕ್ಕೆ ಇರುವ ಗಾಳಿ ತೃಪ್ತಿಕರ ಹಾಗೂ ಯೋಗ್ಯವಾದ ಗಾಳಿ ಎಂದು, ಮಾಲಿನ್ಯ ನಿಯಂತ್ರಣ ಮಂಡಳಿಯು ವರದಿ ನೀಡಿದೆ. ಕೊರೊನಾ ಭೀತಿಯ ಪರಿಸ್ಥಿತಿಯಲ್ಲೇ ವಾಯುಮಾಲಿನ್ಯ ಕುಸಿತ ಎಂಬ ಸುದ್ದಿ ಈಗ ಗಮನವನ್ನು ಸೆಳೆದಿದೆ.

ನಗರದಲ್ಲಿ ಕಳೆದ ಒಂದು ವಾರದಿಂದಲೂ ವಾಹನ ದಟ್ಟಣೆ ಕಡಿಮೆಯಾಗಿದೆ. ವಾಹನ ಗಳ ಓಡಾಟವು ಕಡಿಮೆಯಾದ ಕಾರಣದಿಂದ ಕಳೆದ ಮಾರ್ಚ್ 9 ರಿಂದ 18 ರವರೆಗೆ ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಸುಮಾರು 10 ರಿಂದ 15 ಪ್ರತಿಶತದಷ್ಟು ಕುಸಿತವಾಗಿದೆ ಎಂದು ಹೇಳಲಾಗಿದೆ. ಸಿಟಿ ರೈಲು ನಿಲ್ದಾಣ ಬಸವೇಶ್ವರ ನಗರ, ಹೆಬ್ಬಾಳ, ಮೈಸೂರು ರಸ್ತೆ , ಇತರೆ ಸ್ಥಳಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಮಾಪನ ಮಾಡುವ ಮೂಲಕ ಈ ವರದಿಯನ್ನು ನೀಡಿದ್ದು, ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣ ಕಡಿಮೆ ಆಗಿದೆ ಎಂದು ತಿಳಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here