ಬೆಂಗಳೂರು ನಗರದ ನೂತನ ಪೊಲೀಸ್​ ಆಯುಕ್ತ ಕಮಲ್​​ ಪಂತ್​ ಅವರು ಇಂದು ಅಧಿಕೃತವಾಗಿ ತಮ್ಮ ಅಧಿಕಾರವನ್ನು ಸ್ವೀಮಾರ ‌ಮಾಡಿದ್ದಾರೆ. ಕಮಲ್ ಪಂತ್ ಅವರಿಗೆ ಕಮೀಷನರ್ ಆಗಿ ತಮ್ಮ ಅಧಿಕಾರವನ್ನು ಹಸ್ತಾಂತರ ಮಾಡಿದ, ಕಮೀಷನರ್ ಸ್ಥಾನದಿಂದ ತೆರವುಗೊಂಡು ಬೇರೊಂದು ಸ್ಥಾನಕ್ಕೆ ಹೋಗುತ್ತಿರುವ ನಿರ್ಗಮಿತ ಕಮೀಷನರ್ ಆದಂತಹ ಭಾಸ್ಕರ್ ರಾವ್ ಅವರು ಈ ಸಂದರ್ಭದಲ್ಲಿ ಇಂದು ಭಾವುಕರಾಗಿದ್ದಾರೆ. ಅವರು ಈ ವೇಳೆ ಕಣ್ಣೀರು ಹಾಕಿದಂತಹ ಘಟನೆ ನಡೆದಿದೆ. ಭಾಸ್ಕರ್ ರಾವ್ ಅವರು ಭಾವುಕರಾಗಿ ಕಣ್ಣೀರು ಹಾಕಿ ತಮ್ಮ ಅಧಿಕಾರದ ಅವಧಿಯಲ್ಲಿ ಬೆಂಗಳೂರು ಜನರಿಂದ ತಮಗೆ ದೊರೆತಂತಹ ಸಹಕಾರವನ್ನು ಸ್ಮರಿಸಿದ್ದಾರೆ.

ನಿರ್ಗಮಿತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಇಂದು ಬೆಳಿಗ್ಗೆ ನಗರ ಪೋಲಿಸ್ ಆಯುಕ್ತರ ಕಛೇರಿಗೆ ಆಗಮಿಸಿದ್ದರು. ಅನಂತರ ಅವರು ಅಲ್ಲಿ ಮಹಿಳಾ DCP, ACP ಗಳು ಮಾಡಿದ ಮನವಿಯನ್ನು ಒಪ್ಪಿಕೊಂಡು, ಅವರೊಟ್ಟಿಗೆ ಫೋಟೋಶೂಟ್​ನಲ್ಲಿ ಪಾಲ್ಗೊಂಡಿದ್ದರು. ಅನಂತರ ಕೆಎಸ್​​ಆರ್​​ಪಿ ತುಕಡಿ ವಾದ್ಯ ತಂಡವು ನೂತನ ಪೋಲಿಸ್ ಆಯುತ್ತರಾದಂತಹ ಕಮಲ್ ಪಂತ್ ಅವರಿಗೆ ಗಾರ್ಡ್​​ ಆಫ್ ಹಾನರ್ ನೀಡಿದರು. ಗಾರ್ಡ್ ಆಫ್ ಹಾನರ್ ನಂತರ ಭಾಸ್ಕರ್​​ ರಾವ್​​ ಬ್ಯಾಟನ್ ಬದಲಾಯಿಸಿಕೊಳ್ಳುವ ಮೂಲಕ ಕಮಲ್​ ಪಂತ್​ ಅವರಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದರು.

ಕೊನೆಯಲ್ಲಿ ತಮ್ಮ ಚೇಂಬರ್ ಗೆ ನಮಸ್ಕಾರ ಮಾಡಿದ ಭಾಸ್ಕರ್ ರಾವ್ ಅವರು ಕೆಲವು ಕ್ಷಣ ಭಾವುಕರಾದರು‌ ಜನರಿಂದ ದೊರೆತ ಸಹಕಾರವನ್ನು ಅವರು ಸ್ಮರಿಸಿ ಅಲ್ಲಿಂದ ಹೊರಟರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here