ತನಗೆ ಕೊರೊನ ಬಂದಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಗೆ ಇತ್ತೀಚಿಗೆ  ಕೊರೋನ ಸೋಂಕು ತಗುಲಿದ್ದ ಕಾರಣ   ಮತ್ತು ಕಳೆದ ಕೆಲವು ವರ್ಷಗಳಿಂದ ಎರಡು ಕಿಡ್ನಿಗಳು ವೈಫಲ್ಯ ಹೊಂದಿದ್ದ ಕಾರಣ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಬೆಂಗಳೂರಿನ ಇವತ್ತು ವರ್ಷದ ವ್ಯಕ್ತಿ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಕಟ್ಟಡದಿಂದ ಕೆಳಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿನ್ನೆ ಡಯಾಲಿಸಿಸ್‍ಗೆ ಒಳಗಾಗಿದ್ದರು. ಇದೇ ಸಂದರ್ಭದಲ್ಲಿ ಈತನ ವಾರ್ಡ್‍ನಲ್ಲಿದ್ದ 465ನೆ ಸೋಂಕಿತ ಮಹಿಳೆ ನಿನ್ನೆ ಸಾವನ್ನಪ್ಪಿದ್ದರು. ಸೋಂಕಿತ ಮಹಿಳೆ ಸಾವಿನ ನಂತರ ಜಿಗುಪ್ಸೆಗೆ ಹೋಗಿದ್ದ ಆಟೋ ಚಾಲಕ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಉಪಹಾರ ಸೇವಿಸಿದ್ದರು.ನನಗೆ ಮತ್ತಷ್ಟು ಇಡ್ಲಿ ಬೇಕೆಂದು ಸಿಬ್ಬಂದಿಗೆ ಕೇಳಿಕೊಂಡಿದ್ದರು. ಸಿಬ್ಬಂದಿಯು ರೋಗಿಗೆ  ಇಡ್ಲಿ ತರಲು ಹೊರಗೆ ಹೋದ ವೇಳೆ ಈತ ಬೆಳಗ್ಗೆ 8 ರಿಂದ 8.25ರ ಮಧ್ಯೆ ಟ್ರಾಮಾಕೇರ್ ಸೆಂಟರ್‍ನ 3ನೆ ಮಹಡಿಯ ತುರ್ತು ನಿರ್ಗಮನ ಕಿಟಕಿಯಿಂದ ಹಾರಿ

ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಈ ಬಗ್ಗೆ ವಿವಿ ಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಣ್ಣನ ಮನೆಯಲ್ಲಿ ಮೃತ ಆಟೋ ಚಾಲಕ ವಾಸವಾಗಿದ್ದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರನ್ನು ಬಿಬಿಎಂಪಿ ಹೊಟೇಲ್ ಕ್ವಾರಂಟೈನ್‍ನಲ್ಲಿರಿಸಿ ತಪಾಸಣೆಗೊಳಪಡಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here