ಕೊರೊನ ವೈರಸ್ ಭೀತಿ ಎಲ್ಲೆಡೆ ಹರಡುತ್ತಿರುವ ಕಾರಣದಿಂದಾಗಿ ಶಾಲೆಗಳಿಗೆ ಹೋಗುವ ಐದು ವರ್ಷದ ಕೆಳಗಿನ ಮಕ್ಕಳಿಗೆ ಒಂದು ತಿಂಗಳ ಕಾಲ ಶಾಲೆಗೆ ರಜೆ ನೀಡಲಾಗುವುದೆಂದು ರಾಜ್ಯ ವೈದ್ಯಕೀಯ ಸಚಿವ ಕೆ.ಸುಧಾಕರ್ ಅವರು ಹೇಳಿದ್ದಾರೆ. ಮಾದ್ಯಮಗಳ ಜೊತೆ ಮಾತನಾಡಿದ ಸಚಿವರು ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆದಕಾರಣ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೈ ವೈದ್ಯಕೀಯ ಇಲಾಖೆಗಳ ಸಮಕ್ಷಮದಲ್ಲಿ ಶಾಲಾ ಮಕ್ಕಳಿಗೆ ರಜೆಯನ್ನು ಘೋಷಿಸುವ ನಿರ್ಧಾರವೊಂದನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾನ್ಯ ಸಚಿವರು ಈ ವಿಷಯವಾಗಿ ಮುನ್ನೆಚ್ಚರಿಕೆ ಹಾಗೂ ಮಾರ್ಗಸೂಚಿಯನ್ನು ನೀಡಿರುವುದಾಗಿಯೂ ತಿಳಿಸಿರುವುದು ಮಾತ್ರವೇ ಅಲ್ಲದೆ ಈ ಮೂಲಕ 5 ವರ್ಷದ ಒಳಗಿನ ಮಕ್ಕಳಿಗೆ ಮಾರ್ಚ್ 31 ರ ವರೆಗೆ ರಜೆಯನ್ನು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲೆ ಹಾಗೂ ಗ್ರಾಮಾಂತರದಲ್ಲಿ ಪ್ರೀ ನರ್ಸರಿ, ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ರಜೆ ಸಿಗಲಿದೆ. ಮತ್ತೆ ಬೇಸಿಗೆ ರಜೆ ಮುಗಿದ ನಂತರವೇ ಈ ಮಕ್ಕಳಿಗೆ ಶಾಲೆ ಆರಂಭವಾಗಲಿದೆ ಎಂಬ ಮಾಹಿತಿಯನ್ನು ಅವರು ನೀಡುವ ಮೂಲಕ ಮಕ್ಕಳ ಸುರಕ್ಷತೆ ಕಡೆ ಗಮನ ನೀಡಿದ್ದಾರೆ.

ಇದೇ ವಿಷಯವಾಗಿ ಟ್ವೀಟ್ ಮಾಡಿರುವ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರು ಆರೋಗ್ಯ ಆಯುಕ್ತರ ಸಲಹೆಯಂತೆ ಬೆಂಗಳೂರು ಜಿಲ್ಲೆ ಮತ್ತು ಗ್ರಾಮಾಂತರ ಪ್ರಾಥಮಿಕ ಶಾಲೆಗಳಿಗೆ ಕೂಡಾ ಇಂದಿನಿಂದ ಮುಂದಿನ ಆದೇಶದ ವರೆಗೆ ರಜೆ ನೀಡಬೇಕೆಂದು ತಮ್ಮ ಟ್ವಿಟರ್ ಮೂಲಕ ಘೋಷಣೆಯನ್ನು ಕೂಡಾ ಮಾಡಿದ್ದಾರೆ. ವೈರಸ್ ಭೀತಿಯ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಗಳಿಗೆ ರಜೆ ನೀಡಿರುವುದು ಸರ್ಕಾರ ಮಕ್ಕಳ ಆರೋಗ್ಯ ವಿಷಯವಾಗಿದೆ ತೆಗೆದುಕೊಂಡ ಹೆಜ್ಜೆಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here