ರಾಜ್ಯದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕೊರೊನ ಸೋಂಕು ತಗುಲಿದೆ. ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅನೇಕರು ಅಂದರೆ ಕೊರೊನ ಶಂಕಿತರನ್ನು ಅವರ ಮನೆಯಲ್ಲೇ ದಿಗ್ಭಂಧನ ಮಾಡಲಾಗುತ್ತಿದೆ. ಆದರೆ ಈಗ ಇಲ್ಲಿ ಕೂಡಾ ಒಂದು ಸಮಸ್ಯೆ ಎದುರಾಗಿದೆ‌. ಅನೇಕರು ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಇವರಿಂದ ತಮಗೂ ಸೋಂಕು ಹರಡ ಬಹುದೆಂಬ ಭಯದಿಂದ, ಅನುಮಾನದಿಂದ ಬೆಂಗಳೂರಿನ ಹಲವು ಕಡೆಗಳಲ್ಲಿ ಮನೆ‌ ಮಾಲಿಕರು ತಮ್ಮ ಬಾಡಿಗೆದಾರರನ್ನು ಮನೆಗಳನ್ನು ಖಾಲಿ ಮಾಡಲು ಒತ್ತಾಯ ಮಾಡುವ ಮೂಲಕ ಸಮಸ್ಯೆಯೊಂದನ್ನು ಸೃಷ್ಟಿಸಲು ಮುಂದಾಗಿದ್ದಾರೆ.‌ ಬೆಂಗಳೂರು ಮಹಾನಗರದಲ್ಲಿ ವಿವಿಧ ಕಾರಣಗಳಿಂದ ನಗರಕ್ಕೆ ಬಂದು ನೆಲೆಸಿರುವ ಅನೇಕರಿಗೆ ಆಸರೆ ನೀಡಿರುವುದೇ ಬಾಡಿಗೆ ಮನೆಗಳು.

ಆದರೆ ಈಗ ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಕಾರಣ ಮನೆಯ ಮಾಲಿಕರು ಸಂಕಷ್ಟದ ಪರಿಸ್ಥಿತಿಯಲ್ಲಿ ಜಾಗರೂಕತಾ ಕ್ರಮಗಳನ್ನು ಪಾಲಿಸುವುದಕ್ಕೆ ಬದಲಾಗಿ, ಮನೆಗಳನ್ನು ಖಾಲಿ ಮಾಡಿ ಎನ್ನುವಂತಹ ಅಮಾನವೀಯ ವರ್ತನೆಗಳನ್ನು ತೋರುತ್ತಿರುವ ಪ್ರಕರಣಗಳು ಅನೇಕ ಕಡೆಗಳಲ್ಲಿ ದಾಖಲಾಗುತ್ತಿದೆ. ಮನೆಗಳಲ್ಲಿ ಐಸೋಲೇಟ್ ಆಗಿರುವ ಸೋಂಕು ಶಂಕಿತರಿಗೆ ಚಿಕಿತ್ಸೆಯನ್ನು ನೀಡಲು ವೈದ್ಯರು , ನರ್ಸ್‌ಗಳು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಮನೆಗೆ ಆಗಮಿಸಿದಾಗ ಮನೆ ಮಾಲಿಕರ ವರ್ತ‌ನೆ ವಿಚಿತ್ರ ಎನಿಸಿದೆ.

ಮನೆಗಳ ಮಾಲಿಕರು “ನಿಮ್ಮಿಂದ ನಮಗೂ ಕೊರೋನಾ ಹರಡುತ್ತದೆ, ಮೊದಲು ಮನೆ ಖಾಲಿ ಮಾಡಿ ಎಂದು ಧಮಕಿ ಹಾಕುತ್ತಿದ್ದಾರೆಂದು ವೈದ್ಯರು, ನರ್ಸ್‌‌ಗಳಿಂದ ಕೂಡಾ ಸರ್ಕಾರಕ್ಕೆ ದೂರುಗಳು ಬಂದಿದೆ. ಈ ವಿಷಯವಾಗಿ ಇಂದು ತುರ್ತು ಸಭೆ ನಡೆಸಿರುವ ಸರ್ಕಾರ ಮತ್ತು ಆರೋಗ್ಯ ಇಲಾಖೆ , ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಮನೆ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಬಿಬಿಎಂಪಿ ಆಯುಕ್ತರಿಗೆ ಮತ್ತು ಎಲ್ಲಾ ಜಿಲ್ಲಾ ಎಸಿ ಗಳಿಗೆ ಸೂಚನೆಗಳನ್ನು ನೀಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here