ಲಾಕ್ ಡೌನ್ ನಲ್ಲಿ ಜನರಿಗೆ ಹೊರಗೆ ಓಡಾಡುವ ಅವಕಾಶಗಳನ್ನು ನಿರಾಕರಣೆ ಮಾಡಲಾಗಿದೆ. ಆದರೆ ವೈದ್ಯರು, ಪೋಲಿಸರು, ಮಾದ್ಯಮದವರು ಹಾಗೂ ಇನ್ನಿತರೆ ಅತ್ಯಗತ್ಯ ಸೇವೆಗಳಲ್ಲಿ ನಿರತರಾಗಿರುವವರಿಗೆ ಹೊರಗೆ ಬರಬೇಕಾದ ಅನಿವಾರ್ಯತೆ ಇರುವುದರಿಂದ ಅವರಿಗೆ ಅನುಮತಿಯನ್ನು ನೀಡಲಾಗಿದೆ. ಅವರಿಗೆ ವಿಶೇಷ ಪಾಸ್ ಗಳ ಸೌಲಭ್ಯ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಇಂತಹವರ ವಾಹನ ಚಾಲಕರು, ಪ್ರಮುಖ ವ್ಯಕ್ತಿಗಳ ಮನೆಗಳಲ್ಲಿ ಕೆಲಸ ಮಾಡುವವರು ಹಾಗೂ ವಾಚ್ ಮೆನ್ ಗಳು ಅವರ ಉದ್ಯೋಗಕ್ಕೆ ಹಾಜರಾಗಬೇಕಾದ ಅನಿವಾರ್ಯತೆ ಕೂಡಾ ಇದ್ದೇ ಇದೆ.

ಇದೇ ವಿಷಯವಾಗಿ ಪೋಲಿಸ್ ಕಮೀಶನರ್ ಭಾಸ್ಕರ್ ರಾವ್ ಅವರು ಟ್ವೀಟ್ ಒಂದನ್ನು ಮಾಡಿದ್ದಾರೆ. ಅವರ ತಮ್ಮ ಟ್ವೀಟ್ ನಲ್ಲಿ ವಾಹನ ಚಾಲಕರು, ಮನೆ ಕೆಲಸದವರು, ವಾಚ್ಮೆನ್ ಗಳು ಕೆಲಸ ಮಾಡುವುದು ಅನಿವಾರ್ಯ ಎನಿಸಿದರೆ ಅವರಿಗೆ ಸುರಕ್ಷತಾ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಅಲ್ಲದೇ ಅವರು ಇದೇ ವಿಷಯವಾಗಿ ಇನ್ನೊಂದು ಸಲಹೆಯನ್ನು ಕೂಡಾ ನೀಡಿದ್ದಾರೆ. ಅವರು ಕೆಲಸದವರನ್ನು ಪ್ರತಿನಿತ್ಯ ಮನೆಗಳಿಗೆ ಕಳುಹಿಸುವುದನ್ನು ಬಿಟ್ಟು, ನಿಮ್ಮ ಮನೆಯಲ್ಲೇ ಉಳಿಸಿಕೊಳ್ಳುವ ವ್ಯವಸ್ಥೆ ಮಾಡಿ ಎಂದು ಹೇಳಿದ್ದಾರೆ.

ಅವರನ್ನು ನಿಮ್ಮ ಮನೆಗಳಲ್ಲೇ ಉಳಿಸಿ ಕೊಳ್ಳುವ ವ್ಯವಸ್ಥೆ ಮಾಡುವುದು ಉತ್ತಮ. ಅದರ ಬದಲಾಗಿ ಅವರಿಗೂ ವಿಶೇಷ ಪ್ರತ್ಯೇಕ ಪಾಸ್ ಗಳನ್ನು ಕೊಡಿ ಎಂದು ಕೇಳಬೇಡಿ ಎಂಬ ಸಲಹೆಯನ್ನು ಪೋಲಿಸ್ ಕಮೀಶನರ್ ಅವರು ನೀಡಿದ್ದಾರೆ. ಇನ್ನು ಅವರ ಈ ಸಲಹೆಯನ್ನು ಹೇಗೆ ಪಾಲಿಸುವರು ಎಂಬುದನ್ನು ಕಾದು ನೋಡಬೇಕಿದೆ. ಆದರೆ ಸುರಕ್ಷತಾ ದೃಷ್ಟಿಯಿಂದ ಒಂದು ರೀತಿಯಲ್ಲಿ ಸೂಕ್ತವಾದ ಸಲಹೆ ಎನಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here