ಕೊರೊನಾ ತಂದಿಟ್ಟಿರುವ ಅವಾಂತರ ಒಂದು ಎರಡಲ್ಲ, ಇದು ಇಡೀ ವಿಶ್ವವೇ ಎದುರಿಸುತ್ತಿರುವ ಕಂಟಕ ವಾಗಿದೆ. ಆದರೆ ಇಲ್ಲೊಂದು ಕಡೆ ಕೊರೊನಾ ಪರಿಣಾಮ ಎಂಬಂತೆ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದೇವೆ ಎಂದು ಸುಳ್ಳು ಹೇಳಿ ಬ್ಯಾಂಕಾಕ್ ಪ್ರವಾಸ ಮಾಡಿ ಬಂದಿರುವ ಇಬ್ಬರ ಬಂಡವಾಳ ಮನೆಯವರ ಮುಂದೆ ಬಯಲಾಗಿರುವ ವಿಲಕ್ಷಣ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಕೊಲ್ಕತ್ತಾದಲ್ಲಿ. ಈ ಹಾಸ್ಯದ ವಿಷಯವನ್ನು ಕೊಲ್ಕತ್ತಾದ ಭಾರತೀಯ ಜನತಾ ಯುವ ಐಟಿ ಮೋರ್ಚಾದ ಅಭಿಜಿತ್ ಬಸಕ್ ಎನ್ನುವವರು ಈ ವಿಷಯವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ಕೊಲ್ಕತ್ತಾದ ಇಬ್ಬರು ಗಣ್ಯರೆನಿಸಿರುವ ವ್ಯಕ್ತಿಗಳು ಮನೆಯಲ್ಲಿ ಹೇಳಿದ್ದ ಸುಳ್ಳು, ಕಡೆಗೆ ಅವರನ್ನು ಟೆನ್ಷನ್ ಗೆ ಸಿಲುಕಿಸಿದೆ ಈ ಘಟನೆ. ಈ ಇಬ್ಬರೂ ಕೂಡಾ ಕೆಲಸದ ನಿಮಿತ್ತ ತಾವು ಬೆಂಗಳೂರಿಗೆ ಹೋಗುತ್ತಿರುವುದಾಗಿ ಮನೆಯಲ್ಲಿ ಹೇಳಿದ್ದರು. ಆದರೆ ಅವರು ವಿದೇಶ ಪ್ರವಾಸಕ್ಕೆ ಹೋಗುತ್ತಿರುವ ಬಗ್ಗೆ ತಮ್ಮ ತಮ್ಮ ಮನೆಗಳಲ್ಲಿ ಯಾವುದೇ ಸುಳಿವನ್ನು ನೀಡಿರಲಿಲ್ಲ. ಆದರೆ ಕೊರೊನಾ ಎಫೆಕ್ಟ್ ಎಂಬಂತೆ ವಿದೇಶಕ್ಕೆ ಹೋಗಿ ಬಂದವರನ್ನು ಕ್ವಾರಂಟೈನ್ ನಲ್ಲಿ ಇಡುತ್ತಿರುವುದರಿಂದ, ಈ ಇಬ್ಬರ ಟ್ರಾವಲ್ ಹಿಸ್ಟರಿ ಕೆದಕಿದ ಪೋಲಿಸರು ಇವರ ಮನೆಯ ಮುಂದೆ ಕ್ವಾರಂಟೈನ್ ನೋಟಿಸ್ ಹಾಕಿದ್ದಾರೆ.

ಆದರೆ ಅದನ್ನು ವಿರೋಧಿಸಿದ ಇಬ್ಬರೂ ಗಣ್ಯರು ನೋಟೀಸ್ ಹರಿದು, ಕೂಗಾಡಿದ್ದಾರೆ. ಅದಕ್ಕೆ ಅವರ ಪತ್ನಿಯರು ಕೂಡಾ ಸಾಥ್ ನೀಡಿದ್ದಾರೆ. ಕಡೆಗೆ ಪೋಲಿಸರು ಆ ಇಬ್ಬರ ಟ್ರಾವಲ್ ಹಿಸ್ಟರಿ ಯನ್ನು ತೆರೆದಿಟ್ಟು ಬ್ಯಾಂಕಾಕ್ ಪ್ರವಾಸದ ಹಿಸ್ಟರಿ ನೀಡಿದ್ದಾರೆ. ಅನಂತರ ಹೌಸ್ ಕ್ವಾರಂಟೈನ್ ಎಷ್ಟು ಮುಖ್ಯ ಎಂಬುದನ್ನು ವಿವರಿಸಿ, ಮನವೊಲಿಸಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಕೊರೊನಾ ಎಫೆಕ್ಟ್ ಎಂಬಂತೆ ಬೆಂಗಳೂರು ಎಂದು ಬ್ಯಾಂಕಾಕ್ ಗೆ ಹೋದ ಇಬ್ಬರ ಮನೆಯವರಿಗೆ ಅವರ ಸುಳ್ಳು ಗೊತ್ತಾಗಿದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here