ಎರಡು ಸಾವಿರಕ್ಕು ಅಧಿಕ ವರ್ಷಗಳ ಇತಿಹಾಸವುಳ್ಳ ವೀಳ್ಯದೆಲೆ ಬಗ್ಗೆ ನಿಮಗೆಷ್ಟು ಗೊತ್ತು?

ಈ ವೀಳ್ಯದೆಲೆ ಯಲ್ಲಿ ಅನೇಕ ಔಷಧದ ಗುಣಗಳಿವೆ. ವೀಳ್ಯದೆಲೆ ಯಲ್ಲಿ ಮಧು ಮೇಹ ವೀರೋಧಿ ಗುಣಗಳು ಇರುವುದು ಕಂಡುಬಂದಿದೆ. ಇದುಚಿಕಿತ್ಸೆಗೆ ನೆರವಾಗುತ್ತದೆ ಎನ್ನಲಾಗಿದೆ.

ಅಲ್ಲದೆ ನರಗಳ ದೌರ್ಬಲ್ಯ ಕ್ಕೆ ಈ ಎಲೆಯ ರಸದ ಜೊತೆ ಜೇನುತುಪ್ಪ ಬೆರಸಿ ನೀಡುತ್ತಾರೆ.

ನರದ ಸಮಸ್ಯೆ ನಿಶ್ಯಕ್ತಿ ರಕ್ತಸ್ರಾವ ಇತ್ಯಾದಿ ಸಮಸ್ಯೆಯನ್ನು ತಡೆಯುತ್ತದೆ. ಎಲೆ ಅಡಿಕೆ ಜಜ್ಜಿ ಜೇನುತುಪ್ಪ ದೊಂದಿಗೆ ಸೇವಿಸುವುದರಿಂದ ಒಣ ಕೆಮ್ಮು ಕಡಿಮೆ ಆಗುತ್ತದೆ.

ಅಲ್ಲದೇ ಮೂತ್ರ ಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ವೀಳೆದ್ಯೆಲೆ ರಸದೊಂದಿಗೆ ಹಾಲನ್ನು ಬೆರೆಸಿ ಸೇವಿಸಿದರೆ ಸಮಸ್ಯೆ ಮಾಯವಾಗುತ್ತದೆ.

 

ಎಲ್ಲರನ್ನು ಕಾಡುವ ಬೆನ್ನು ನೋವನ್ನು ಎಲೆಯ ರಸವನ್ನು ಕೊಬ್ಬರಿ ಎಣ್ಣೆ ಜೊತೆ ಬಿಸಿ ಮಾಡಿ ಹಚ್ಚುವುದರಿಂದ ನೋವು ಕಡಿಮೆ ಆಗುತ್ತದೆ.

ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ. ಚಿಗುರು ವೀಳ್ಯದೆಲೆ, ವಾತಹರ, ಉದರ ವಾಯುಹರ ಮತ್ತು ಉತ್ತೇಜನಕಾರಿ. ಇದು ಕಾಮೋತ್ತೇಜಕವಾಗಿದ್ದು ಸೋಂಕನ್ನು ತಡೆಗಟ್ಟುವ ಗುಣವನ್ನೂ ಹೊಂದಿದೆ.

ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here