ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಮತ್ತು ಸ್ಟಾರ್ ನಿರ್ದೇಶಕ ಹರ್ಷ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ಭಜರಂಗಿ-2. ಒಂದೇ ಒಂದು ಪೋಸ್ಟರ್ ಮೂಲಕವೇ ಅಭಿಮಾನಿಗಳು ಹಾಗೂ ಸಿನಿ ರಸಿಕರಲ್ಲಿ ಕುತೂಹಲ ಹಾಗೂ ನಿರೀಕ್ಷೆಯನ್ನು ಕೆರಳಿಸಿದೆ ಭಜರಂಗಿ-2. ಚಿತ್ರೀಕರಣದ ಹಂತದಲ್ಲಿರುವ ಭಜರಂಗಿ 2 ಚಿತ್ರದ ಬಗ್ಗೆ ಶಿವಣ್ಣನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು  ಭಜರಂಗಿ 2 ಮುಂದಿನ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಭಜರಂಗಿ 2 ಚಿತ್ರದ  ಚಿತ್ರೀಕರಣ ಭರದಿಂದ ಸಾಗುತ್ತಿದೆ . ತಮ್ಮ ಭುಜದ ಶಸ್ತ್ರ ಚಿಕಿತ್ಸೆ ನಂತರ ಮತ್ತೆ ಚಿತ್ರತಂಡವನ್ನು ಸೇರಿರುವ ಶಿವಣ್ಣ ಸಿನಿಮಾದ ಚಿತ್ರೀಕರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಪ್ರಸ್ತುತ ಚಿತ್ರೀಕರಣ ಪ್ಯಾಲೇಸ್ ಗ್ರೌಂಡ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದಿದೆ.

ಡಿಸೆಂಬರ್ ನಲ್ಲಿ ಚಿತ್ರದ 70% ಚಿತ್ರೀಕರಣವನ್ನು ಮುಗಿಸುವುದು ನಿರ್ದೇಶಕ ಹರ್ಷ ಅವರ ಯೋಜನೆಯಾಗಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ನಿರ್ದೇಶಕ ಹರ್ಷ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಹಿಂದೆ ಹರ್ಷ ಮತ್ತು ಶಿವಣ್ಣನ ಕಾಂಬಿನೇಷನ್ ನಲ್ಲಿ ಬಂದಿದ್ದ  ಭಜರಂಗಿ ಮತ್ತು ವಜ್ರಕಾಯ  ಚಿತ್ರಗಳು ಭರ್ಜರಿ ಯಶಸ್ಸನ್ನು ಪಡೆದಿದ್ದವು. ಇದು ಈ ಜೋಡಿಯ ಮೂರನೇ ಸಿನಿಮಾ ಆಗಿರುವುದಿಂದ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಸಿನಿಮಾಕ್ಕೆ ಭಜರಂಗಿ-2 ಎಂದು ಹೆಸರಿಡಲಾಗಿದೆ. ಆದರೆ ಇದು ಭಜರಂಗಿ ಸಿನಿಮಾದ ಸೀಕ್ವೆಲ್ ಅಲ್ಲ. ಬದಲಿಗೆ ಇಲ್ಲಿ ವಿಭಿನ್ನ ಕಥಾನಕವನ್ನು ಪ್ರೇಕ್ಷಕರ ಮುಂದೆ ಇಡಲಿದ್ದಾರೆ ನಿರ್ದೇಶಕ A. ಹರ್ಷ.

ಜಯಣ್ಣ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ ಟಗರು ಸಿನಿಮಾದಲ್ಲಿ ಶಿವಣ್ಣನಿಗೆ ನಾಯಕಿಯಾಗಿದ್ದ ಭಾವನಾ ಅವರು ಮತ್ತೊಮ್ಮೆ ನಾಯಕಿಯಾಗಿದ್ದಾರೆ. ಸಿನಿಮಾಕ್ಕೆ ಅರ್ಜುನ್ ಜನ್ಯಾ ಅವರ ಸಂಗೀತ ನಿರ್ದೇಶನವಿದ್ದು, ಜೆ.ಸ್ವಾಮಿ ಅವರು ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಹರ್ಷ ಅವರು ಮುಂದೆ ಇನ್ನೂ ಕೆಲವು ಸರ್ಪ್ರೈಸ್ ಗಳನ್ನು ಅನೌನ್ಸ್ ಮಾಡಲಿದ್ದಾರೆ ಎನ್ನಲಾಗಿದೆ. ಚಿತ್ರರಂಗದ ಜನಪ್ರಿಯ ತಾರೆಗಳು ಇತರೆ ಪಾತ್ರವರ್ಗದಲ್ಲಿ ಕಂಡು ಬರುವ ಜೊತೆಗೆ ಹೊಸ ಹಾಗೂ ಯುವ ಪ್ರತಿಭೆಗಳಿಗೆ ಹರ್ಷ ಅವರು ಈ ಸಿನಿಮಾದಲ್ಲಿ ಅವಕಾಶವನ್ನು ನೀಡುತ್ತಿರುವುದು ಕೂಡಾ ವಿಶೇಷ ಎನಿಸಿದೆ. ಒಟ್ಟಾರೆ ಮತ್ತೊಂದು ದೊಡ್ಡ ಮಟ್ಟದ ಯಶಸ್ಸು  ನೀಡಲು ಸಿದ್ಧವಾಗುತ್ತಿರುವ ಶಿವಣ್ಣ ಮತ್ತು ನಿರ್ದೇಶಕ ಹರ್ಷ ಅವರಿಗೆ ಶುಭವಾಗಲಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here