ಸ್ಯಾಂಡಲ್ ವುಡ್ ನಲ್ಲಿ ನಿರ್ಮಾಣ ಹಂತದಲ್ಲೇ ಸದ್ದು ಮಾಡುತ್ತಿದೆ ಭಜರಂಗಿ-2 ಸಿನಿಮಾ. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಹರ್ಷ ಅವರ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ, ಪ್ಯಾನ್ ಇಂಡಿಯಾ ಮೂವಿ ಆಗಲು ಸಜ್ಜಾಗಿರುವ, ಈಗಾಗಲೇ ಸಿಕ್ಕಾಪಟ್ಟೆ ಕುತೂಹಲವನ್ನು ಹುಟ್ಟು ಹಾಕಿರುವ ಸಿನಿಮಾ ಇದಾಗಿದೆ. ಏಕೆಂದರೆ ಸಿನಿಮಾ ಆರಂಭವಾದಾಗಿನಿಂದಲೂ ಚಿತ್ರ ತಂಡ ಸಿನಿಮಾದ ಬಗ್ಗೆ ಹೆಚ್ಚಿನ ವಿಷಯಗಳನ್ನು ಹಂಚಿಕೊಳ್ಳದ ಕಾರಣ ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಭಜರಂಗಿ-2 ರ ಫಸ್ಟ್ ಲುಕ್ ಈಗಾಗಲೇ ಸದ್ದು ಮಾಡುತ್ತಿದ್ದು ಸಿನಿಮಾದ ಎರಡನೇ ಲುಕ್ ಇಂದು ಬಿಡುಗಡೆಯಾಗಿದೆ.

ಸಿನಿಮಾದ ಸೆಕೆಂಡ್ ಲುಕ್ ಇದೀಗ ಸಂಕ್ರಾಂತಿ ಕಾಣಿಕೆಯಾಗಿ ಅಭಿಮಾನಿಗಳ ಹಾಗೂ ಸಿನಿ ರಸಿಕರ ಮುಂದೆ ಬಂದಿದೆ. ವಿಶೇಷವೆಂದರೆ ಈ ಸೆಕೆಂಡ್ ಲುಕ್ ಯಾರೂ ಕೂಡಾ ಊಹೆ ಮಾಡದ ರೀತಿಯಲ್ಲಿದ್ದು, ಒಂದು ಅತ್ಯದ್ಭುತವಾದ ಕಥೆಯನ್ನು ತನ್ನಲ್ಲಿ ಅಡಗಿಸಿಕೊಂಡಂತೆ ಮೂಡಿ ಬಂದಿದೆ‌. ನೋಡುಗನನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಪೋಸ್ಟರ್ ನೋಡಿದವರಿಗೆ ಸಿನಿಮಾ ಬಗ್ಗೆ ನಿಜಕ್ಕೂ ತೀವ್ರ ಕುತೂಹಲವನ್ನು ಹುಟ್ಟು ಹಾಕುವುದರಲ್ಲಿ ಎರಡು ಮಾತಿಲ್ಲ. ಶಿವಣ್ಣನ ಹಣೆಯಲ್ಲಿ ಕೆಂಪು ತಿಲಕ, ಹೊಳೆವ ಕಣ್ಣುಗಳು, ಆ ಕಣ್ಣುಗಳಲ್ಲಿ ಒಂದು ನಿಗೂಢತೆ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಕೈಯಲ್ಲಿ ಬೆಂಕಿಯ ಪಂಜನ್ನು ಹಿಡಿದರುವ ಒಬ್ಬ ಬ್ರಾಹ್ಮಣ ಸಿನಿಮಾ ಬಗ್ಗೆ ಇರುವ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿದೆ‌. ಒಟ್ಟಾರೆ ಸೆಕೆಂಡ್ ಲುಕ್ ತನ್ನೊಳಗೆ ಒಂದು ಸೆಳೆತವನ್ನು ಹೊಂದಿದೆ.
ಭಜರಂಗಿ-2 ರ ಸೆಕೆಂಡ್ ಲುಕ್ ನೋಡುಗನನ್ನು ಒಂದು ಮಾಯಾ ಲೋಕದೊಳಕ್ಕೆ ಆಹ್ವಾನ ನೀಡುತ್ತಿದೆ ಎಂಬಂತೆ ಇದ್ದು, ಕಣ್ಮುಂದೆ ನೂರು ಕಲ್ಪನೆಗಳನ್ನು ಮೂಡಿಸುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ‌. ಶಿವಣ್ಣ ನಾಯಕ ನಟನಾಗಿರುವ ಸಿನಿಮಾವನ್ನು ಎ.ಹರ್ಷ ಅವರ ನಿರ್ದೇಶನ ಮಾಡಿದ್ದು, ನಟಿ ಭಾವನ ನಾಯಕಿಯಾಗಿದ್ದಾರೆ. ಜಯಣ್ಣ, ಭೋಗೆಂದ್ರ ಅವರು ಚಿತ್ರದ ನಿರ್ಮಾಪಕರಾಗಿದ್ದಾರೆ.ವಿಶೇಷ ಅಂದರೆ ಪೋಸ್ಟರ್ ರೆಲೀಸ್ ಆದ ಕೆಲವೇ ಕ್ಷಣಗಳಲ್ಲಿ ಭಜರಂಗಿ 2 ಲುಕ್ ಭಾರತದಾದ್ಯಂತ ಟ್ರೆಂಡ್ ಆಗಿದ್ದು ಪೋಸ್ಟರ್ ನೋಡಿದ ಪ್ರತಿಯೊಬ್ಬರೂ ನಿರ್ದೇಶಕ ಹರ್ಷ ಅವರ ಕಾರ್ಯ ವೈಖರಿ ಬಗ್ಗೆ ಕೊಂಡಾಡುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here