ನಾವು ಪೋಲಿಸರಾಗಿ ಕೊರೊನಾಗೆ ಹೆದರಬಾರದು, ಕೋವಿಡ್-19 ಒಂದು ರೋಗವಷ್ಟೇ, ನಾವು ಅದರ ಜೊತೆ ಜೊತೆಗೆ ಕೆಲಸವನ್ನು ನಿರ್ವಹಣೆ ಮಾಡಬೇಕಿದೆ, ನಮ್ಮ ಸಿಬ್ಬಂದಿಗಳಿಗಾಗಿ ಇಲಾಖೆ ಬೆನ್ನೆಲುಬಾಗಿರುತ್ತದೆ ಎಂದು ಪೋಲಿಸ್ ಕಮೀಷನರ್ ಭಾಸ್ಕರ್ ರಾವ್ ಅವರು ಪೋಲಿಸರಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಪ್ರೇರಣೆಯನ್ನು ನೀಡುವ ಮಾತುಗಳನ್ನು ಆಡಿದ್ದಾರೆ. ಅವರು ನಗರದಲ್ಲಿ ಇಂದು ಮಾತುನಾಡುವ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಪೋಲಿಸ್ ಇಲಾಖೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣವು ಹೆಚ್ಚಾಗಿದೆ ಎಂದು ಅವರು ಹೇಳುತ್ತಲೇ ಪೋಲಿಸರಲ್ಲಿ ಧೈರ್ಯ ತುಂಬುವ ಕಾರ್ಯವನ್ನು ಮಾಡಿದ್ದಾರೆ.

ಇಲಾಖೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ ಆದರೆ ನಾವು ಅದನ್ನೆಲ್ಲಾ ಎದುರಿಸಿ ನಿಲ್ಲಬೇಕಿದ್ದು, ಎಲ್ಲರೂ ಕೂಡಾ ತಮ್ಮ ಪಾಡಿಗೆ ತಾವು ಮುಂಜಾಗ್ರತಾ ಕ್ರಮಗಳನ್ನು ಗಮನದಲ್ಲಿ ಇರಿಸಿಕೊಂಡು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಅವರು ಇದೇ ಸಂದರ್ಭದಲ್ಲಿ ಪೋಲಿಸ್ ಠಾಣೆಗಳು ಸೀಲ್ ಡೌನ್ ಆಗುವ ವಿಚಾರದ ಬಗ್ಗೆ ಕೂಡಾ ಮಾತನಾಡುತ್ತಾ, ಠಾಣೆಗಳ ಸೀಲ್ ಡೌನ್ ಬಗ್ಗೆ ಯಾರೂ ಗೊಂದಲಕ್ಕೀಡಾಗಬಾರದು ಎಂದು ಹೇಳಿದ್ದಾರೆ.

ಕೊರೊನಾ ಇತರೆ ಸಿಬ್ಬಂದಿಗಳಿಗೆ ಹರಡುತ್ತಿದ್ದ ಕಾರಣದಿಂದ ಸ್ಟೇಷನ್ ಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಅದೇ ಕಾರಣದಿಂದ ಹಲವು ಸ್ಟೇಷನ್ ಗಳು ಸೀಲ್ ಡೌನ್ ಆಗಿದೆ. ಮೊದಲು ಠಾಣೆಗಳನ್ನು ಎಷ್ಟು ದಿನ ಸೀಲ್ ಡೌನ್ ಮಾಡಬೇಕು ಎನ್ನುವ ವಿಚಾರದಲ್ಲಿ ಗೊಂದಲ ಇತ್ತು, ಆದರೆ ಈಗ ಠಾಣೆಗಳನ್ನು ಮೂರು ದಿನ ಮಾತ್ರ ಲಾಕ್ ಡೌನ್ ಮಾಡಿ, ಈಗಾಗಲೇ ಹಲವು ಸ್ಟೇಷನ್ ಗಳನ್ನು ಸ್ಯಾನಿಟೈಸ್ ಮಾಡಿಸಲಾಗಿದೆ. ಮೂರು ದಿನಗಳ ನಂತರ ಸಿಬ್ಬಂದಿ ಹೆದರದೇ ನಿಮ್ಮ ಕರ್ತವ್ಯಕ್ಕೆ ಹಾಜರಾಗಿ ಎಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here