ಕೊರಿಯೋಗ್ರಫರ್ ಭೂಷಣ್ ನಿಜಕ್ಕೂ ಸ್ಯಾಂಡಲ್ ವುಡ್ ಗೆ ದೊರೆತಿರುವ ಅದ್ಭುತ ನೃತ್ಯ ನಿರ್ದೇಶಕ. ಭೂಷಣ್ ಅವರು ಸಿನಿಮಾಕ್ಕಾಗಿ ಮೊದಲು ನೃತ್ಯ ನಿರ್ದೇಶನ ಮಾಡಿದ ಹಾಡು ರ್ಯಾಂಬೋ ಚಿತ್ರದ ಚುಟು ಚುಟು ಎಂಬ ಸೂಪರ್ ಹಿಟ್ ಸಾಂಗ್. ಚಿತ್ರರಂಗ ಅವರ ಕಡೆ ನೋಡುವಂತೆ ಮಾಡಿತು ಅವರ ಈ ನೃತ್ಯ ಸಂಯೋಜನೆ. ಆದರೆ ಇದಕ್ಕಿಂತ ಆಸಕ್ತಿಕರ ವಿಷಯವೇನೆಂದರೆ ಭೂಷಣ್ ಕರ್ನಾಟಕ, ಆಂಧ್ರ ಹಾಗೂ ತಮಿಳುನಾಡಿನಲ್ಲಿ ಈಗಾಗಲೇ ಮನೆ ಮಾತಾಗಿರುವ ಕೊರಿಯೋಗ್ರಫರ್. ಸಿನಿಮಾಗಳಲ್ಲಿ ಹೊಸ ಕೊರಿಯೋಗ್ರಫರ್.    ಆದರೆ ಮೂರು ರಾಜ್ಯಗಳಲ್ಲಿ ಹೇಗೆ ಪ್ರಸಿದ್ಧ ಎನಿಸುತ್ತಿದೆಯೇ ? ಅನುಮಾನಬೇಕಿಲ್ಲ.‌ ಇದು ಅಕ್ಷರಶಃ ವಾಸ್ತವ.

ಕನ್ನಡದ ಹಲವು ಡಾನ್ಸ್ ರಿಯಾಲಿಟಿ ಶೋ ಗಳು, ಆಂಧ್ರದ ಪ್ರಮುಖ ರಿಯಾಲಿಟಿ ಶೋ ಎನಿಸಿದ ಢೀ ಹಾಗೂ ತಮಿಳನಾಡಿನ ಮಾಯಾಟ, ಮಯಿಲಾಟ(ನವಿಲಿನ ನೃತ್ಯ) ಎಂಬ ಸುಪ್ರಸಿದ್ಧ ರಿಯಾಲಿಟಿ ಡಾನ್ಸ್ ಶೋ ನಲ್ಲೂ ಕೂಡಾ ತಮ್ಮ ನೃತ್ಯಗಳಿಂದಾಗಿ ಕಿರುತೆರೆಯ ಮೂಲಕ ಜನರಿಗೆ ಇವರು ಪರಿಚಯವಾದವರು. ಶಿವಣ್ಣ, ಸುದೀಪ್, ರಚಿತಾ ರಾಂ, ತೆಲುಗಿನಲ್ಲಿ ಅಲ್ಲು ಅರ್ಜುನ್ ಚಿತ್ರಗಳಿಗೆ ಕೊರಿಯೋಗ್ರಫ್ ಮಾಡಿರುವ ಶೇಖರ್ ಮಾಸ್ಟರ್ , ಸೀನಿಯರ್ ಕೊರಿಯೋಗ್ರಫರ್ ಆದ ತರಣ್ ಮಾಸ್ಟರ್ , ನಟಿ ಸದಾ, ತಮಿಳಿನಲ್ಲಿ ಖುಷ್ಬೂ ಹಾಗೂ ಪ್ರಶಾಂತ್ ರಂತಹ ಎಲ್ಲಾ ದಿಗ್ಗಜರ ಅಮಿತವಾಗಿ ಹಾಡಿ ಹೊಗಳಿರುವ ನೃತ್ಯ ಸಂಯೋಜಕ ಭೂಷಣ್ ಅವರು.

ಭೂಷಣ್ ಅವರು ಮತ್ತೆ ಕರ್ನಾಟಕದಲ್ಲಿ ತಮ್ಮ ಅಲೆ ಎಬ್ಬಿಸಿದ್ದಾರೆ. ಅದಕ್ಕೆ ಕಾರಣ ನಟ ಸಾರ್ವಭೌಮ. ಹೌದು ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಡಾನ್ಸ್ ಗಳು ಈಗಾಗಲೇ ಜನ ಮನ್ನಣೆಗೆ ಪಾತ್ರವಾಗಿದೆ. ಚಿತ್ರ ನೋಡಿದವರೆಲ್ಲಾ ಡಾನ್ಸ್ ಗಳಿಗೆ ಫಿದಾ ಆಗಿದ್ದಾರೆ. ಆ ಡಾನ್ಸ್ ಗಳಿಗೆ ನೃತ್ಯ ಸಂಯೋಜನೆ ಮಾಡಿರುವುದು ಮತ್ತಾರೂ ಅಲ್ಲ, ಭೂಷಣ್ ಅವರು. ಅವರು ಮಾಡಿರುವ ನೃತ್ಯ ಸಂಯೋಜನೆ ಈಗ ಎಲ್ಲೆಡೆ ಸದ್ದು , ಸುದ್ದಿ ಮಾಡಿದ್ದು ಮತ್ತೊಮ್ಮೆ ಚಂದನವನ ಪೂರಾ ಭೂಷಣ್ ಅವರ ಕಡೆ ನೋಡುವಂತೆ ಮಾಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here