ಈ ಬಾರಿ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ಸಾಮಾನ್ಯ ಸ್ಪರ್ಧಿಗಳ ಪಕಿ‌ ಅತಿ ಹೆಚ್ಚಾಗಿ‌ ಹೆಸರು ಮಾಡಿದವರಲ್ಲಿ‌ ಧನರಾಜ್ ಸಹ ಒಬ್ಬರು ಸುಮಾರು ಹದಿನಾಲ್ಕು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಧನರಾಜ್ ಗೆ ವೀಕ್ಷಕಿರಿಂದ ಉತ್ತಮ ಬೆಂಬಲ ಸಿಕ್ಕಿತ್ತು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಧನರಾಜ್ ಏನು ಮಾಡ್ತಿದ್ದಾರೆ ಎನ್ನುವ ಹಲವರ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಸ್ಪರ್ಧಿ ಧನರಾಜ್ ಅವರಿಗೆ ಇದೀಗ ಕನ್ನಡದ ಅತ್ಯಂತ ಜನಪ್ರಿಯ ನಟನ ಬಹುನಿರೀಕ್ಷಿತ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಅದ್ಯಾರು ಆ ನಟ  ಅದು ಯಾವ ಸಿನಿಮಾ ಅನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದ ನೋಡಿ. ಈ ಬಾರಿಯ

ಬಿಗ್ ಬಾಸ್ ಆರಂಭವಾದ ಬಳಿಕ ಮೊದಲನೇ ವಾರದ ನಂತರ ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರು ಅಸಗಮಿಸಿದ್ದರು‌. ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರ ವಿಶೇಷ ಎಂಟ್ರಿ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲದೆ ಹೊಗಡೆ ಸಹ ಸಾಕಷ್ಟು ಸಂಚಲನ ಸೃಷ್ಟಿಸಿತ್ತು‌. ಇದೀಗ ಬಿಗ್ ಬಾಸ್ ಮುಗಿದಿದೆ. ಬಿಗ್ ಬಾಸ್ ಮನೆಯ ಸಾಮಾನ್ಯ ಸ್ಪರ್ಧಿಗಳಿಗೆ ಶಿವರಾಜಕುಮಾರ್ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿ‌ ಧನರಾಜ್ ಅವರಿಗೆ ಇದೀಗ ತಮ್ಮ‌ ಚಿತ್ರದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಡಾ.ಶಿವರಾಜಕುಮಾರ್.

ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ ರುಸ್ತುಂ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ರುಸ್ತುಂ ಚಿತ್ರದಲ್ಲಿ ಡಾ.ಶಿವರಾಜಕುಮಾರ್ ಅವರು ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ವಿಶೇಷ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಣ್ಣ ಜೊತೆಗೆ ವಿವೇಕ್ ಓಭೆರಾಯ್ ಸಹ ರುಸ್ತುಂ ಚಿತ್ರದಲ್ಲಿ ಅಭಿನಯಿಸಿದರೆ. ಈಗಾಗಲೇ ರುಸ್ತುಂ ಚಿತ್ರ್ ಬಹು ಪಾಲು‌ ಚಿತ್ರೀಕರಣ ಮುಗಿದಿದೆ.

ಇನ್ನು ಇರುವ ಚಿತ್ರೀಕರಣದಲ್ಲಿ ಧನರಾಜ್ ಅವರಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಶಿವರಾಜಕುಮಾರ್ ಅವರ ಆಶಯದಂತೆ ಧನರಾಜ್ ಅವರಿಗೆ ಶಿವರಾಜಕುಮಾರ್ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಹು ದೊಡ್ಡ ಅವಕಾಶ ಒದಗಿ ಬಂದಿದೆ. ಕೆಲ ದಿನಗಳ ಹಿಂದೆ ಬಿಗ್ ಬಾಸ್ ನ ಮತ್ತೊಬ್ಬ ಸ್ಪರ್ಧಿಯಾಗಿದ್ದ ಸೋನು ಪಾಟೀಲ್ ಸಹ ಶಿವಣ್ಣ ಬಳಿ ಅವಕಾಶ ಕೊಡಿಸುವಂತೆ ಕೇಳಿದ್ದರು. ಇದೀಗ ಧನರಾಜ್ ಅವರಿಗೆ ಶಿವಣ್ಣ ತಮ್ಮ ಚಿತ್ರದಲ್ಲಿ ನಟಿಸಲು ರವಿವರ್ಮ ಮೂಲಕ ಸೂಚಿಸಿದ್ದಾರೆ ಎನ್ನಲಾಗಿದೆ.

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here