ಬಿಗ್ ಬಾಸ್ ಸೀಸನ್ 7 ನಾಲ್ಕನೇ ವಾರಕ್ಕೆ ಪ್ರವೇಶ ಮಾಡಿದ ಮೇಲೆ ಮನೆಯ ವಾತಾವರಣದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತಿದೆ. ಶಾಂತವಾಗಿದ್ದ ಮನೆ ರಣರಂಗ ವಾಗಿದೆ. ಟಾಸ್ಕ್ ಗಳಲ್ಲಿ ಸ್ಪರ್ಧಿಗಳ ಅರಚಾಟ, ಕೂಗಾಟ, ಗಲಭೆಗಳು ಸಾಮಾನ್ಯ ಎನ್ನುವಷ್ಟರ ಮಟ್ಟಕ್ಕೆ ನಡೆದಿದೆ. ಇದೆಲ್ಲದರ ನಡುವೆ ಈಗ ಇನ್ನೊಂದು ವಿಚಿತ್ರ ಘಟನೆ ನಡೆದಿದೆ. ಅಂದರೆ ಯಾರಾದರೂ ಹೊಡೆದಾಡಿ ಬಿಟ್ಟರಾ? ಅಥವಾ ಮತ್ತೇನಾದರೂ ಅನಾಹುತವಾಯಿತಾ? ಅನ್ನುವುದಾದರೆ ಅಂತಹುದೇನೂ ಆಗಿಲ್ಲವಾದರೂ, ಮನೆಯವರು, ಹೊರಗಿನವರು ಊಹಿಸಿರದ ಘಟನೆ ಅಥವಾ ಸನ್ನಿವೇಶವೊಂದು ನಡೆದಿದೆ.

ಮನೆಯ ಸದಸ್ಯರೆಲ್ಲರೂ ಬೆಳಿಗ್ಗೆ ಡೈನಿಂಗ್ ಹಾಲ್ ಹತ್ತಿರ ಸೇರಿದ್ದರು‌. ಆ ಸಂದರ್ಭದಲ್ಲಿ ಮನೆಯ ಕ್ಯಾಪ್ಟನ್ ಹರೀಶ್ ರಾಜ್ ಮತ್ತು ಕುರಿ ಪ್ರತಾಪ್ ಅವರು ಮಾತನಾಡುತ್ತಾ ಇದ್ದರು. ಹರೀಶ್ ರಾಜ್ ಅವರು ಪ್ರತಾಪ್ ಅವರ ಆರೋಗ್ಯದ ಬಗ್ಗೆ ವಿಚಾರ ಮಾಡುತ್ತಾ,. ಯಾಕೆ ಎದೆಯ ಮೇಲೆ ಕೈ ಇಟ್ಟುಕೊಂಡು ಇರುವಿರಿ, ಅಂತ ವಿಚಾರಿಸುವಾಗ ಕುರಿ ಪ್ರತಾಪ್ ಇಲ್ಲಾ ಡಾಕ್ಟರ್‌ ಹೇಳಿದ್ದಾರೆ, ನಗುವಾ ಎದೆಯ ಮೇಲೆ ಕೈಯಿಟ್ಟುಕೊಳ್ಳಿ ಅಂತ ಹರೀಶ್ ಅವರಿಗೆ ಉತ್ತರಿಸಿದ್ದಾರೆ. ಹೀಗೆ ಅವರ ನಡುವೆ ಸಂಭಾಷಣೆ ನಡೆಯುವಾಗಲೇ ಅನಿರೀಕ್ಷಿತವಾಗಿ ಭೂಮಿ ಶೆಟ್ಟಿ ಮತ್ತು ದೀಪಿಕಾ ತುಟಿಗೆ ತುಟಿಯಿಟ್ಟು ಮುತ್ತು ಕೊಟ್ಟುಕೊಂಡಿದ್ದಾರೆ.

ಇಂತಹ ಒಂದು ಸನ್ನಿವೇಶವನ್ನು ಊಹೆ ಮಾಡಿರದ ಹರೀಶ್‌ ರಾಜ್ ಅವರು ಅದನ್ನು ನೋಡಿ ಗಾಬರಿಯಾಗಿದ್ದಾರೆ. ಅವರಿನ್ನೂ ಏನಿದು? ಎನ್ನುವ ಆಲೋಚನೆಯಲ್ಲಿ ಇರುವಾಗಲೇ ಮತ್ತೊಂದು ಬಾರಿ ದೀಪಿಕಾ ಮತ್ತು ಭೂಮಿ ಶೆಟ್ಟಿ ಲಿಪ್‌ಲಾಕ್‌ ಮಾಡಿದ್ದಾರೆ. ಮನೆಯವರಿಗೆಲ್ಲಾ ಭೂಮಿ ಮತ್ತು ದೀಪಿಕಾ ಅವರ ಈ ಲಿಪ್ ಲಾಕ್ ನ ಹಿಂದಿನ ಕಾರಣ ಏನೂ ಅನ್ನೋದು ಮಾತ್ರ ಗೊತ್ತಾಗಿಲ್ಲ.‌ಅಲ್ಲದೆ ಪ್ರಿಯಾಂಕ ಅವರು ಭೂಮಿಯವರನ್ನು ಈ ಬಗ್ಗೆ ಕೇಳಿದರೂ ಭೂಮಿ ಅವರು ಉತ್ತರ ನೀಡಿಲ್ಲ. ಇಬರಿಬ್ಬರ ಈ ಲಿಪ್ ಲಾಕ್ ಬಗ್ಗೆ ಅವರು ಹೇಳುವ ವರೆಗೆ ಉಳಿದವರು ಅವರ ಮನಸ್ಸಿಗೆ ಬಂದಂತೆ ಲೆಕ್ಕಾಚಾರ ಮಾಡಬಹುದಷ್ಟೇ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here