ಬಿಗ್‌ಬಾಸ್ ಮನೆಯಲ್ಲಿ ಲುಕ್ಷುರಿ ಬಜೆಟ್‌ ಟಾಸ್ಕ್‌ನ ಬಹಳ ಜೋರಾಗಿ ನಡೆದಿದೆ‌. ಟಾಸ್ಕ್ ಗೆ ಬಿಗ್ ಬಾಸ್ ರಣರಂಗ ಎಂದು ಹೆಸರಿಟ್ಟು ಹಿನ್ನೆಲೆಯಲ್ಲಿ ಬಿಗ್ ಹೌಸ್ ರಣರಂಗವಾಗಿಯೇ ಬದಲಾಗಿದ್ದು, ಸ್ಪರ್ಧಿಗಳು ಕೂಡಾ ಟಾಸ್ಕ್ ನ ಜೋಷ್ ಮೈಮೇಲೆ ಬಂದವರಂತೆ ವರ್ತಿಸುತ್ತಿದ್ದಾರೆ. ಗಾಳಿ ಗೋಪುರ ಟಾಸ್ಕ್ ನಿಙದ ಆರಂಭವಾದ ಗಲಾಟೆ ಟಾಸ್ಕ್ ನ ಎರಡನೇ ದಿನ ಕೂಡಾ ಮುಂದುವರೆದಿರುವುದು ಸ್ಪಷ್ವವಾಗಿ ಕಂಡು ಬಂದಿದೆ. ಟಾಸ್ಕ್ ಗಾಗಿ ಮನೆಯ ಸದಸ್ಯರನ್ನು ಸಿಡಿಲು ಮತ್ತು ಸಪ್ತಾಶ್ವ ಎಂಬ ಎರಡು ತಂಡಗಳಾಗಿ ವಿಭಜಿಸಿದ್ದು, ಟಾಸ್ಕ್ ನಲ್ಲಿ ಪರಸ್ಪರ ಗಲಾಟೆ ಈ ಎರಡು ತಂಡಕ್ಕೆ ಸಾಮಾನ್ಯ ಎನಿಸಿದೆ.

ಇದೆಲ್ಲದರ ನಡುವೆ ನಿನ್ನೆಯ ಎಪಿಸೋಡ್‌ನಲ್ಲಿ ಮನೆಯ ಕ್ಯಾಪ್ಟನ್‌ ಹರೀಶ್‌ ರಾಜ್ ಮತ್ತು ಹಿರಿಯ ನಟ ಹಾಗೂ ಬಿಗ್ ಹೌಸ್ ನ ಮತ್ತೊರ್ವ ಸದಸ್ಯನಾದ ಜೈ ಜಗದೀಶ್‌ ಅವರ ನಡುವೆ ಒಂದು ಗಲಾಟೆ ನಡೆದಿದೆ. ಗೇಜ್‌ನಲ್ಲಿ ಧ್ವಜ ಕೀಳುವ ಟಾಸ್ಕ್ ನಡೆದಿತ್ತು. ಅದರಲ್ಲಿ ಎರಡು ತಂಡಗಳು ಕೂಡಾ ಸಕ್ರಿಯವಾಗಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದವು. ಆದರೆ ಆಟದ ಮಧ್ಯೆ ಜೈ ಜಗದೀಶ್‌ ಅವರು ಕ್ಯಾಪ್ಟನ್‌ ಹರೀಶ್​ರಾಜ್‌ ಅವರು ಮತ್ತೊಂದು ತಂಡದ ಕಡೆಗೆ ಫೇವರ್ ಎನ್ನುವಂತೆ, ನೀವು ಆ ತಂಡಕ್ಕೆ ಸಹಾಯ ಮಾಡ್ತೀರಾ ಅಂತಾ ಹೇಳಿ ಬಿಟ್ಟರು. ಈ ಮಾತು ಕೇಳಿದ ಹರೀಶ್ ರಾಜ್ ಅವರು ಸಿಟ್ಟಿಗೆದ್ದರು.

ಹರೀಶ್ ರಾಜ್ ಅವರು ಸರ್‌ ಹಾಗೆಲ್ಲಾ ಹೇಳ್ಬೇಡಿ. ಅವರಿಗೆ ಸಪೋರ್ಟ್ ಮಾಡಿದ್ರೆ ನನಗೇನು ಸಿಗುತ್ತೆ. ಏನೇನೋ ಮಾತನಾಡಬೇಡಿ. ನನಗೆ ಇಷ್ಟ ಆಗಲ್ಲ ಎಂದರು. ಇದಕ್ಕೆ ಜೈ ಜಗದೀಶ್‌ ನಾನು ತಮಾಷೆಗೆ ಹೇಳಿದ್ದು ಅಂತಾ ಹೇಳ್ತಾನೆ ಕೆಲವು ಸಲ ನೀವು ಆ ತರ ಮಾಡಿದ್ದೀರಿ.(ಇನ್ನೊಂದು ತಂಡಕ್ಕೆ ಫೇವರ್) ಎಂದರು. ಹರೀಶ್ ರಾಜ್ ಅವರ ಕೋಪ ಹೆಚ್ಚಾಯಿತು. ಅವರು ಎಲ್ಲಾ ಸಮಯದಲ್ಲೂ ತಮಾಷೆ ನಡೆಯೋಲ್ಲ. ನಾನು ಕ್ಯಾಪ್ಟನ್ ಆಗೋದಿಲ್ಲ ಎಂದು ಕೂಗಾಡಿದರು. ಆಗ ಮನೆಯ ಇತರೆ ಸದಸ್ಯರು ಹರೀಶ್‌ರಾಜ್‌ ಅವರನ್ನು ಸಮಾಧಾನ ಮಾಡಿ ಆಟ ಮುಂದುವರೆಸಲಾಯಿತು.

ತಮಾಷೆ ಹೆಚ್ಚಾದ್ರೆ ಅಮಾವಾಸ್ಯೆ ಆಗುತ್ತೆ ಅಂತಾರೆ! ದೊಡ್ಮನೆಯಲ್ಲಿ ಪರ ವಹಿಸಿಕೊಂಡ್ರೂ ತಪ್ಪು ಅಂತಾರೆ, ವಿರೋಧಿಸಿದ್ರೂ ತಪ್ಪು ಅಂತಾರೆ!ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada

Colors Kannada यांनी वर पोस्ट केले बुधवार, ६ नोव्हेंबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here