ಬಿಗ್ ಬಾಸ್ ಸೀಸನ್ 7 ಆರಂಭದಿಂದಲೂ ಕೂಡಾ ವಿಶೇಷತೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಮೂರನೇ ಎಲಿಮಿನೇಷನ್ ವರೆಗೂ ಬಂದಿದೆ. ಆರಂಭದಲ್ಲೇ ಪ್ರೇಕ್ಷಕರಲ್ಲಿ ಕುತೂಹಲವನ್ನು ಕೆರಳಿಸುತ್ತಾ ಬರಲು ಕಾರಣಗಳು ಇವೆ. ಈ ಬಾರಿ ಬಿಗ್ ಬಾಸ್ ಆರಂಭವಾದಾಗ ಎಲ್ಲರ ಗಮನ ಸೆಳೆದಿದ್ದು, ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಎಂಟ್ರಿ. ಅನಂತರ ತಿಳಿದಿದ್ದು ರವಿ ಬೆಳಗೆರೆ ಅವರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದು ಒಂದು ವಾರದ ಮಟ್ಟಕ್ಕೆ ಅತಿಥಿಯಾಗಿ ಎಂದು.

ಇನ್ನು ಮೊದಲ ವಾರದಲ್ಲಿ ಗುರುಲಿಂಗ ಸ್ವಾಮಿಗಳು, ಎರಡನೇ ವಾರದಲ್ಲಿ ನಿರೂಪಕಿ ಚೈತ್ರ ವಾಸುದೇವನ್ ಅವರು ಎಲಿಮಿನೇಟ್ ಆಗಿ ಹೊರ ಬಂದರು. ಅದಾದ ನಂತರ ಮೂರನೇ ಎಲಿಮಿನೇಷನ್ ನಲ್ಲಿ ಆಶ್ಚರ್ಯ ಎಂಬಂತೆ ನಟಿ ದುನಿಯಾ ರಶ್ಮಿ ಬಿಗ್ ಹೌಸ್ ನಿಂದ ಹೊರ ಬಿದ್ದಿದ್ದಾರೆ. ಶನಿವಾರದ ವಾರದ ಕತೆ ಕಿಚ್ಚನ ಜತೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಕಿಚ್ಚ ಸುದೀಪ್ ಈ ವಾರ ಒಂದು ಟ್ವಿಸ್ಟ್ ಇದೆ ಎಂದು  ಹೇಳಿದ್ದರು. ಆ ಟ್ವಿಸ್ಟ್ ಮತ್ತೇನೂ ಅಲ್ಲ, ಅದು ವೈಲ್ಡ್ ಕಾರ್ಡ್ ಎಂಟ್ರಿ.

ಸುದೀಪ್ ಅವರು ಪ್ರೋಮೋದಲ್ಲಿ ಒಂದು ಕವರ್ ಹಿಡಿದು ಮನೆಯೊಳಗೆ ಹೋಗಲಿದ್ದು, ಅಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆಯುವ ಸ್ಪರ್ಧಿ ಯಾರು ಎಂದು ತಿಳಿಸುವ ಪ್ರೋಮೋ ಪ್ರಸಾರ ವಾಗಿತ್ತು. ಈಗ ವೈಲ್ಡ್ ಕಾರ್ಡ್ ಎಂಟ್ರಿ ಯಾರು ಎಂಬದರ ಮೇಲಿದ್ದ ರಹಸ್ಯಕ್ಕೆ ತೆರೆ ಬಿದ್ದಿದೆ. ಬಿಗ್ ಬಾಸ್ ಸೀಸನ್ 7 ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ನೀಡುತ್ತಿರುವ ವ್ಯಕ್ತಿ ಮತ್ತಾರೂ ಅಲ್ಲ ಅದು RJ ಪೃಥ್ವಿ. ಫೀವರ್ 104 FM ನ ಖ್ಯಾತ ಆರ್‌ಜೆ ಆಗಿರುವ ಪೃಥ್ವಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶವನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here